ದಕ್ಷಿಣ ಭಾರತ ಸಿನಿಮಾರಂಗದಲ್ಲಿ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದವರಲ್ಲಿ ನಟಿ ಮೀನಾ ಕೂಡ ಒಬ್ಬರು. ಇತ್ತೀಚೆಗಷ್ಟೇ ನಟಿ ಮೀನಾರವರ ಹಿಂದೆ ಅ-ನಾರೋಗ್ಯ ಸಮಸ್ಯೆಯಿಂದ ನಿ-ಧನ ಹೊಂದಿದ್ದರು. ಪತಿಯ ಅಗಲುವಿಕೆಯ ನೋವಿನಿಂದ ಚೇತರೀಸಿಕೊಳ್ಳುತ್ತಿರುವ ನಟಿ ಮೀನಾ ಸಿನಿರಂಗದಲ್ಲಿ ಎರಡನೇ ಇನ್ನಿಂಗ್ಸ್ ಶುರುಮಾಡಿದ್ದಾರೆ. ನಟಿ ಮೀನಾರವರು 2009ರಲ್ಲಿ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿದ್ದ ವಿದ್ಯಾಸಾಗರ್ ಎಂಬುವವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಮದುವೆಯಾದ ಬಳಿಕ ಸಿನಿಮಾರಂಗದಿಂದ ದೂರವಾದರು. ಸುಖವಾಗಿ ಸಂಸಾರ ನಡೆಸುತ್ತಿದ್ದ ಈ ಮೀನಾ ದಂಪತಿಗೆ ನೈನಿಕ ಎಂಬ ಮಗಳಿದ್ದು, ಮಗಳು ಸಿನಿ ಲೋಕದಲ್ಲಿ ಗುರುತಿಸಿಕೊಂಡಿದ್ದಾಳೆ.ದಕ್ಷಿಣ ಭಾರತ ಸಿನಿಮಾರಂಗದಲ್ಲಿ ಖ್ಯಾತ ನಟಿಯಾಗಿ ಮಿಂಚಿದ ನಟಿ ಮೀನಾರವರ ಸಿನಿ ಬದುಕಿನ ಕಡೆಗೆ ಕಣ್ಣು ಹಾಯಿಸಿದರೆ, ಪ್ರಾರಂಭದ ದಿನಗಳಲ್ಲಿ ನಟಿ ಮೀನಾರವರಿಗೆ ಡ್ಯಾನ್ಸ್ ನಲ್ಲಿ ತುಂಬಾನೇ ಆಸಕ್ತಿ . ಹೀಗಾಗಿ ಭರತನಾಟ್ಯವನ್ನು ಸಹ ಅಭ್ಯಾಸ ಮಾಡಿದ್ದರು.
ಅನೇಕ ವೇದಿಕೆಗಳಲ್ಲಿ ಹಲವು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದರು. ಈ ನೃತ್ಯದಲ್ಲಿದ್ದ ಆಸಕ್ತಿಯೇ ನಟಿ ಮೀನಾ ಪಾಲಿಗೆ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಹೀಗಿರುವಾಗ ಸಿನಿಮಾದಲ್ಲಿ ನಟಿಸಲು ಅವಕಾಶವೊಂದು ಬಂದಿತ್ತು. ನೃತ್ಯದಲ್ಲಿ ಆಸಕ್ತಿ ಇದ್ದ ಕಾರಣ, ಸಿನಿಮಾದಲ್ಲಿ ಬಾಲನಟಿಯಾಗಿ ತೆರೆ ಮೇಲೆ ಕಾಣಿಸಿಕೊಂಡರು. ನಟಿ ಮೀನಾರವರು ಬಾಲನಟಿಯಾಗಿ ಸಾಕಷ್ಟು ಸಿನಿಮಾಗಳನ್ನು ಮಾಡಿದರು. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಟಿ ಮೀನಾ ಅವರನ್ನು ತಮ್ಮ ಪುಟ್ನಂಜ ಚಿತ್ರದ ಮೂಲಕ ಕನ್ನಡಕ್ಕೆ ಪರಿಚಯ ಮಾಡಿಕೊಟ್ಟರು.
ತದನಂತರದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ನಾಯಕಿ ಪಾತ್ರದಲ್ಲಿ ಮಾತ್ರ ಕಾಣಿಸಿಕೊಳ್ಳದೇ ಪೋಷಕ ಪಾತ್ರದಲ್ಲಿ ಮಾಡಿದರು. ಮದುವೆಯಾದ ಬಳಿಕ ಸಿನಿಮಾರಂಗದಲ್ಲಿ ದೂರವಿದ್ದ ಮೀನಾರವರು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದರು. ನಟನೆಯ ಜೊತೆಗೆ, ಇವರು ಹಿನ್ನೆಲೆ ಗಾಯಕಿ, ಡಬ್ಬಿಂಗ್ ಕಲಾವಿದೆಯಾಗಿ ಗುರುತಿಸಿಕೊಂಡವರು. ಈಗಾಗಲೇ ಇವರಿಗೆ ಎರಡು ಫಿಲ್ಮ್‌ಫೇರ್ ಪ್ರಶಸ್ತಿಗಳು, ಮೂರು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ಅತ್ಯುತ್ತಮ ನಟಿಗಾಗಿ ಎರಡು ನಂದಿ ಪ್ರಶಸ್ತಿ ಮತ್ತು ಸಿನಿಮಾ ಎಕ್ಸ್‌ಪ್ರೆಸ್ ಪ್ರಶಸ್ತಿಗಳು,
ತಮಿಳುನಾಡು ಸರ್ಕಾರದ ಕಲೈಮಾಮಣಿ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಆದರೆ ಇದೀಗ ಸಿನಿ ಬದುಕಿನಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.ವೃತ್ತಿ ಜೀವನಕ್ಕೆ ಮರಳಿರುವ ನಟಿ ಮೀನಾರವರು ತಮ್ಮ ಜೀವನದ ಕೆಲವೊಂದು ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ತಮಿಳು ಚಾನೆಲ್ ಸಿನಿ ಉಲಗಂನಲ್ಲಿ ನಟಿ ಸುಹಾಸಿನಿ ನಡೆಸಿಕೊಡುವ ಚಾಟ್ ಷೋನಲ್ಲಿ ಭಾಗಿಯಾಗಿದ್ದ ನಟಿ ತಮ್ಮ ಕ್ರಶ್ ಬಗ್ಗೆ ರಿವೀಲ್ ಮಾಡಿದ್ದಾರೆ. ಈ ವೇಳೆ ಆ ನಟ ಮದುವೆಯಾದಾಗ ನನ್ನ ಹಾರ್ಟ್ ಬ್ರೇಕ್ ಆಗಿತ್ತು ಎಂದೂ ನಟಿ ಮೀನಾ ಹೇಳಿದ್ದಾರೆ.
‘ನಾನು ಹೃತಿಕ್ ರೋಷನ್ ಅವರನ್ನು ತುಂಬಾ ಪ್ರೀತಿಸುತ್ತಿದ್ದೆ. ನನಗೆ ಅವರಂಥ ಹುಡುಗ ಬೇಕು ಎಂದು ಅಮ್ಮನಿಗೆ ಹೇಳುತ್ತಿದ್ದೆ. ನನಗೆ ಆಗಿನ್ನೂ ಮದುವೆಯಾಗಿರಲಿಲ್ಲ. ಮನೆಯಲ್ಲಿ ಮದುವೆಯ ಪ್ರಸ್ತಾಪ ಮಾಡುತ್ತಿದ್ದ ವೇಳೆ, ಅಮ್ಮನಿಗೆ ಇದೇ ವಿಷಯ ಹೇಳುತ್ತಿದ್ದೆ. ಆದರೆ ಈ ಬಗ್ಗೆ ಹೃತಿಕ್ ಅವರ ಮುಂದೆ ಎಂದಿಗೂ ಹೇಳಿಕೊಂಡಿರಲಿಲ್ಲ. ಆದರೆ ಅವರ ಮೇಲೆ ಪ್ರೀತಿ ಇದದ್ದಂತೂ ನಿಜ. ಹೃತಿಕ್ ಮದುವೆಯ ದಿನದಂದು ನನ್ನ ಹಾರ್ಟ್ ಬ್ರೇಕ್ ಆಗಿತ್ತು ಎಂದಿದ್ದಾರೆ.
ತದನಂತರದಲ್ಲಿ ಮಗಳು ನೈನಿಕಾ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ವಿಚಾರಕ್ಕೆ ಬಗ್ಗೆ ಮಾತನಾಡಿದ್ದು, ” ಈ ಬಗ್ಗೆ ನನಗೆ ಖುಷಿ ಇದೆ. ವಿಜಯ್ ಅಭಿನಯದ ತೇರಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಯಶಸ್ಸನ್ನು ಕಂಡಿತ್ತು. ನನಗೆ ಇದು ತುಂಬಾ ಹೆಮ್ಮೆ ವಿಷಯವಾಗಿದೆ” ಎಂದಿದ್ದಾರೆ. ತಮ್ಮ ಸಿನಿ ಬದುಕಿನ ನಟಿ ಮೀನಾ ಬಗ್ಗೆ ಮಾತನಾಡಿದ್ದು, “ಪಡಯಪ್ಪ ಚಿತ್ರದಲ್ಲಿ ರಮ್ಯಾ ಕೃಷ್ಣನ್ ನಿರ್ವಹಿಸಿದ ನೆಗೆಟಿವ್ ಪಾತ್ರಕ್ಕೆ ತನ್ನನ್ನು ಮೊದಲು ಆಯ್ಕೆ ಮಾಡಿದ್ದರು. ಆದರೆ ಆ ಪಾತ್ರ ಮಾಡಬೇಡ ಎಂದು ನನ್ನ ತಾಯಿ ಹೇಳಿದ್ರು ಹೀಗಾಗಿ ಮಾಡಿಲ್ಲ ಎಂದು ಹೇಳಿದರು.
ನಾಯಕಿ ಪಾತ್ರಗಳಲ್ಲಿ ಮಿಂಚುತ್ತಿರುವಾಗ ವಿಲನ್ ಆಗಿ ನಟಿಸಿದರೆ ಸಿನಿ ಜರ್ನಿ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಅಮ್ಮ ಒಪ್ಪಿರಲಿಲ್ಲ. ಆದರೆ ನಂತರ ಆ ಪಾತ್ರ ಮಾಡಬೇಕಿತ್ತು ಎಂದು ನನಗೂ ಅನಿಸಿತ್ತು” ಎಂದು ಹೇಳಿದ್ದಾರೆ. ಸದ್ಯಕ್ಕೆ ಸಿನಿ ಬದುಕಿನಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವ ನಟಿ ಮೀನಾರವರಿಗೆ ಬೇಡಿಕೆಯೂ ಕಡಿಮೆಯಾಗಿಲ್ಲ. ಹೀಗಾಗಿ ತಮ್ಮ ಸಂಭಾವನೆಯನ್ನು ಕೂಡ ಹೆಚ್ಚಿಸಿದ್ದಾರೆ ಎನ್ನಲಾಗಿದೆ.