ಅಶ್ವಿನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ನಟಿ ಮಯೂರಿಯವರ ಮದುವೆ ಸುಂದರ ಕ್ಷಣ ಹೇಗಿತ್ತು ಗೊತ್ತಾ? ಇಲ್ಲಿದೆ ನೋಡಿ ಅದ್ಭುತ ಕ್ಷಣಗಳು!!

ಕನ್ನಡ ಕಿರುತೆರೆ ಲೋಕದಲ್ಲಿ ಒಂದೇ ಒಂದು ಧಾರಾವಾಹಿಯೂ ಕೆಲವು ನಟ ನಟಿಯರ ಬದುಕಿನ ದಿಕ್ಕನ್ನೇ ಬದಲಾಯಿಸಿ ಬಿಡುತ್ತದೆ. ಈ ವಿಚಾರದಲ್ಲಿ ಅಶ್ವಿನಿ ನಕ್ಷತ್ರ (Ashwini Nakstra) ಧಾರಾವಾಹಿ ಖ್ಯಾತಿಯ ನಟಿ ಮಯೂರಿ (Mayuri) ಹೊರತಾಗಿಲ್ಲ. ಅಶ್ವಿನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ಮಯೂರಿ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ವೃತ್ತಿ ಜೀವನದಿಂದ ಸ್ವಲ್ಪ ಅಂತರ ಕಾಯ್ದುಕೊಂಡಿರುವ ನಟಿ ಮಯೂರಿಯವರು ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ನಟಿಯ ವಿಶೇಷ ಫೋಟೋವೊಂದು ವೈರಲ್ ಆಗಿವೆ.

ನಟಿ ಮಯೂರಿಯವರ ಮದುವೆಯ ಫೋಟೋವೊಂದು ವೈರಲ್ ಆಗಿದ್ದು, ನಟಿಯ ಮುಖದಲ್ಲಿ ಮದುವೆ ಕಳೆ ಎದ್ದು ಕಾಣುತ್ತಿದೆ. ನಟಿ ಮಯೂರಿಯವರು ಬಹುಕಾಲದ ಗೆಳೆಯ ಅರುಣ್ (Arun) ಅವರನ್ನು ಪ್ರೀತಿಸಿ ಮದುವೆಯಾದರು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ನಟನಾಲೋಕದಿಂದ ದೂರ ಉಳಿದರು. ಸದ್ಯಕ್ಕೆ ಪತಿ ಹಾಗೂ ಮಗನ ಜೊತೆಗೆ ಮಯೂರಿ ಸುಖವಾಗಿ ಸಂಸಾರ ಮಾಡುತ್ತಿದ್ದಾರೆ. ತಾಯ್ತತನದ ಸಂಭ್ರಮದಲ್ಲಿರುವ ನಟಿ ಮಯೂರಿಯವರು ತನ್ನ ಮಗುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.

ಅಶ್ವಿನಿ ನಕ್ಷತ್ರ ಧಾರಾವಾಹಿಯ ಬಳಿಕ ಬೆಳ್ಳಿತೆರೆ ಮೇಲೆ ಮಿಂಚಿದರು. ಅಜಯ್ ರಾವ್ ಜೊತೆ ಕೃಷ್ಣ ಲೀಲಾ (Krishna Leela) ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಿಕೊಂಡರು. ತದನಂತರದಲ್ಲಿ ಇಷ್ಟ ಕಾಮ್ಯ (Istakamya), ನಟರಾಜ ಸರ್ವಿಸ್ ( Nataraja Service), ಕರಿಯ 2 ( Kariya 2) , ಮೌನಂ (Mounam) ಹಾಗೂ ಪೊಗರು (Pogaru) ಸಿನಿಮಾದಲ್ಲೂ ನಟಿಸಿ ಸೈ ಎನಿಸಿಕೊಂಡರು. ಈ ಹಿಂದೆಯಷ್ಟೇ ಒಂದು ವರ್ಷದ ಮಗನನ್ನು ಬಿಟ್ಟು ಬಿಗ್ ಬಾಸ್ ಸೀಸನ್ 9 (Big Boss Sisan 9) ರಲ್ಲಿ ಭಾಗವಹಿಸಿದ್ದರು.

ಕಳೆದ ವರ್ಷ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಮೊದಲು ವೇದಿಕೆಯಲ್ಲಿ ಮಾತನಾಡಿದ್ದ ಮಯೂರಿ, ತೆರೆಮೇಲೆ ಕಾಣಿಸಿಕೊಂಡಿದ್ದೇ ನಾನು ‘ಬಿಗ್ ಬಾಸ್’ ವೇದಿಕೆಯಿಂದ. ‘ಅಶ್ವಿನಿ ನಕ್ಷತ್ರ’ ಧಾರಾವಾಹಿಯ ಪ್ರೊಮೋಷನ್ ಆಗಿದ್ದೇ ಈ ವೇದಿಕೆಯಿಂದ. ‘ಕೃಷ್ಣ ಲೀಲಾ’ ಕೂಡ ಪ್ರೊಮೋಷನ್ ಆಗಿದ್ದೂ ‘ಬಿಗ್ ಬಾಸ್’ ವೇದಿಕೆಯಿಂದಲೇ. ಆ ನಂಟಿನಿಂದ ನಾನು ಇಲ್ಲಿಗೆ ಬಂದಿದ್ದೇನೆ” ಎಂದಿದ್ದರು. “ನಾನು ತುಂಬಾ ಪ್ರೈವೇಟ್ ಪರ್ಸನ್. ಕೆಲಸ ಮತ್ತು ಫ್ಯಾಮಿಲಿ ಅಷ್ಟೇ ನನ್ನ ಪ್ರಪಂಚ. ನಾನು ಹುಬ್ಬಳ್ಳಿ ಹುಡುಗಿ. ನಮ್ಮದು ಸಾಧಾರಣ ಕುಟುಂಬ. ಚಿಕ್ಕವಯಸ್ಸಿನಿಂದಲೇ ಕಷ್ಟ ನೋಡಿದ್ದೇನೆ. ಸ್ಕೂಲ್‌ಗೆ ಹೋಗುವಾಗಲೇ ಈವೆಂಟ್ಸ್ ಮಾಡುತ್ತಿದ್ದೆ. ಆ ಸಮಯದಲ್ಲೇ ಟಿವಿಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಹುಮ್ಮಸ್ಸು ಇತ್ತು ” ಎಂದಿದ್ದರು.

“ಅಲ್ಲಿಂದ ಬೆಂಗಳೂರಿಗೆ ಬಂದೆ. ನನ್ನ ಪತಿ ಅರುಣ್. ಮದುವೆಗೂ 10 ವರ್ಷಗಳ ಹಿಂದೆಯಿಂದ ನಮ್ಮಿಬ್ಬರ ಪರಿಚಯ ಇತ್ತು. ಈಗ ನನ್ನ ಮಗ ನನ್ನ ಜೀವನವನ್ನೇ ಬದಲಾಯಿಸಿದ್ದಾನೆ. ಈಗ ‘ಬಿಗ್ ಬಾಸ್’ ಹೊಸ ಚಾಲೆಂಜ್. ನನ್ನ ಪುಟ್ಟ ಮಗು.. ಆರವ್.. ಈಗ ಒಂದುವರೆ ವರ್ಷ ಅವನಿಗೆ. ಅವನನ್ನ ಬಿಟ್ಟು ಹೋಗುವುದೇ ನನಗೆ ದೊಡ್ಡ ಚಾಲೆಂಜ್ ಆಗಿದೆ. ಅಷ್ಟೇ ಅಲ್ಲದೇ ನನ್ನ ಪತಿ, ಅಮ್ಮ, ಅತ್ತೆ ಇದ್ದಾರೆ ಅನ್ನೋ ನಂಬಿಕೆ ಮೇಲೆ ಮಗುವನ್ನ ಬಿಟ್ಟು ನಾನು ‘ಬಿಗ್ ಬಾಸ್’‌ಗೆ ಹೋಗುತ್ತಿದ್ದೇನೆಎಂದಿದ್ದರು ನಟಿ ಮಯೂರಿ.

ಬಿಗ್ ಬಾಸ್’ ನನಗೆ ಹೊಸ ಅನುಭವ ಆಗಿರಲಿದೆ. ನಾನು ಸ್ಕಿನ್ ಕ್ಲಿನಿಕ್ ಓಪನ್ ಮಾಡಿದ್ದೇನೆ. ಇಂದು ನಾನು ಏನಾಗಿದ್ದೇನೆ ಅದಕ್ಕೆ ನನಗೆ ಹೆಮ್ಮೆ ಇದೆ’’ ಎಂದು ಹೇಳಿದ್ದರು. ಇತ್ತ ನಟನೆಯಿಂದ ದೂರ ಉಳಿದಿರುವ ನಟಿ ಮಯೂರಿಯನ್ನು ತೆರೆ ಮೇಲೆ ನೋಡಬೇಕೆನ್ನುವ ಆಸೆ ಅಭಿಮಾನಿಗಳಲ್ಲಿದೆ. ಹೀಗಾಗಿ ಯಾವಾಗ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ ಎಂದು ಕಾದು ನೋಡಬೇಕು.

Leave a Reply

Your email address will not be published. Required fields are marked *