ಕನ್ನಡ ಹಲವು ನಟಿಯರು ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರದಲ್ಲಿ ಸಿನಿಮಾಲೋಕದಿಂದ ಮರೆಯಾಗಿ ಬಿಡುತ್ತಾರೆ. ಕೆಲವರು ಮತ್ತೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದರೆ, ನಾಪತ್ತೆಯಾಗಿ ಬಿಡುವುದಿದೆ. ಈಗಾಗಲೇ ಕನ್ನಡ ಸಿನಿಮಾಲೋಕದಲ್ಲಿ ಬೇಡಿಕೆ ಹೊಂದಿರುವಾಗಲೇ ಸಿನಿಮಾಲೋಕದಿಂದ ಅಂತರವನ್ನು ಕಾಯ್ದುಕೊಂಡ ಕೆಲವು ನಟ ನಟಿಯರು ಇದ್ದಾರೆ. ಅಂತಹವರ ಸಾಲಿಗೆ ನಟಿ ಮಾನ್ಯ ನಾಯ್ಡು (Manya Naidu) ಸೇರಿಕೊಳ್ಳುತ್ತಾರೆ.
ಹೌದು, ಶಾಸ್ತ್ರೀ (Shastri) ಸಿನಿಮಾ ಖ್ಯಾತಿ ಮಾನ್ಯ ನಾಯ್ಡು ಎಲ್ಲರಿಗೂ ಕೂಡ ಚಿರಪರಿಚಿತ. ಸಿನಿಮಾರಂಗದಿಂದ ದೂರ ಉಳಿದಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಮೂಲಕ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿದ್ದಾರೆ. ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ನಟಿ ಮಾನ್ಯ ನಾಯ್ಡುರವರ ವಿಶೇಷ ಫೋಟೋವೊಂದು ವೈರಲ್ ಆಗಿವೆ.

ನಟಿ ಮಾನ್ಯ ನಾಯ್ಡು ತನ್ನ ಫ್ಯಾಮಿಲಿಜೊತೆಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ ತನ್ನ ಪತಿ, ಮಗಳು ಹಾಗೂ ಕುಟುಂಬದವರ ಜೊತೆಗಿದ್ದು, ಈ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಫೋಟೋ ನೋಡಿದ ನೆಟ್ಟಿಗರು ಖುಷಿ ಪಟ್ಟಿದ್ದು ನಾನಾ ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅದರ ಜೊತೆಗೆ ಈ ಫೋಟೋ ಗೆ ಈಗಾಗಲೇ ಇನ್ನೂರ ಐವತ್ತಕ್ಕೂ ಅಧಿಕ ಲೈಕ್ಸ್ ಬಂದಿವೆ.
ಈ ಹಿಂದೆ ನಟಿ ಮಾನ್ಯರವರಿಗೆ ಅನಾರೋಗ್ಯ ಸಮಸ್ಯೆಯೊಂದು ಕಾಡಿತ್ತು. ಶಾಸ್ತ್ರಿ ಸಿನಿಮಾದ ನಾಯಕಿ ನಟಿ ಮಾನ್ಯ ನಾಯ್ಡು ಅವರು ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ತನ್ನ ಆರೋಗ್ಯ ಸಮಸ್ಯೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ನಟಿ ಮಾನ್ಯಾ ನಾಯ್ಡು ಅವರ ಸಿನಿ ಬದುಕಿನ ಸುತ್ತ ಕಣ್ಣು ಹಾಯಿಸಿದರೆ 41 ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದು ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ಬಳಗವನ್ನು ಹೊಂದಿದ್ದಾರೆ.

ವಿಷ್ಣುವರ್ಧನ್ ಅವರಿಗೆ ನಾಯಕಿಯಾಗಿ ವರ್ಷ (Varsha) ಚಿತ್ರದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಚಾಲೆಂಜಿಂಗ್ ಸ್ಟಾರ್ ಶಾಸ್ತ್ರಿ (Shastri) ಸಿನಿಮಾದಲ್ಲಿ ನಟಿಸಿದ್ದು ಇವರ ಜನಪ್ರಿಯತೆಯೂ ಮತ್ತಷ್ಟು ಹೆಚ್ಚಾಯಿತು. ಶ್ರೀ ಮುರುಳಿ ಯವರ ಜೊತೆಗೆ ಶಂಭು (Shambhu) ಸಿನಿಮಾದಲ್ಲಿ ನಟಿಸಿದ್ದು, ಹೀಗೆ ಹಲವು ಸಿನಿಮಾಗಳನ್ನು ನಟಿಸಿ ತನ್ನ ನಟನೆಯಿಂದಲೇ ಎಲ್ಲರ ಮನಸ್ಸು ಗೆದ್ದರು.
ಸದ್ಯಕೆ ನಟಿ ಮಾನ್ಯರವರು ನ್ಯೂಯಾರ್ಕ್ (Newyork) ನಲ್ಲಿ ಮಗಳು, ಅಮ್ಮ, ಪತಿ ಜೊತೆಯಲ್ಲಿ ನೆಲೆಸಿದ್ದಾರೆ. ಈ ಹಿಂದೆ ಸಟ್ ಪರೀಕ್ಷೆ ಬರೆದು, ಇವ್ಯ್ಯ್ ಲೀಗ್ ಶಿಕ್ಷಣ ಸಂಸ್ಥೆಯಲ್ಲಿ ಮಾನ್ಯಾ ಓದಿದ್ದರು. ನಟಿಯಾಗಿದ್ದ ಮಾನ್ಯರವರು ಸದ್ಯಕ್ಕೆ ಕಾರ್ಪೋರೇಟ್ ಕೆಲಸದಲ್ಲಿದ್ದಾರೆ. ನಟಿ ಫೋಟೋ ಹಾಗೂ ವಿಡಿಯೋವನ್ನು ಶೇರ್ ಮಾಡಿಕೊಂಡಾಗಲೆಲ್ಲಾಗಲೆಲ್ಲಾ ನಟಿ ಮಾನ್ಯ ನಾಯ್ಡು ತೆರೆ ಮೇಲೆ ಯಾವಾಗ ಕಾಣಿಸಿಕೊಳ್ಳುತ್ತೀರಾ ಎಂದು ಪ್ರಶ್ನೆ ಕೇಳುತ್ತಿರುತ್ತಾರೆ. ನಟಿ ಮಾನ್ಯ ನಾಯ್ಡು ಮತ್ತೆ ಯಾವಾಗ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ ಎಂದು ಕಾದು ನೋಡಬೇಕು.