ಕಾಂತಾರದಲ್ಲಿ ಕಮಲ ಪಾತ್ರದಲ್ಲಿ ಮಿಂಚಿದ ನಟಿ ಮಾನಸಿ ಸುಧೀರ್ ಅವರ ಮುದ್ದಾದ ಫ್ಯಾಮಿಲಿ ಹೇಗಿದೆ ಗೊತ್ತಾ?

ನಟಿ ಮಾನಸಿ ಸುಧೀರ್ (Manasi Sudheer) ಈ ಹೆಸರು ಎಲ್ಲರಿಗೂ ಕೂಡ ಚಿರಪರಿಚಿತ. ಅದರಲ್ಲಿಯು ಕಾಂತಾರ (Kantara) ಸಿನಿಮಾದ ಬಳಿಕ ಈ ಹೆಸರು ಮತ್ತಷ್ಟು ಹತ್ತಿರವಾಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ನೃತ್ಯ ಕಲಾವಿದೆಯಾಗಿರುವ ಮಾನಸಿ ಕಾಂತಾರ ಸಿನಿಮಾದ ಮೂಲಕ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ. ಸದಾ ಹೊಸತನದ ಪ್ರಯೋಗ ಮಾಡುತ್ತಾ ಎಲ್ಲರನ್ನು ಸೆಳೆಯುವ ಮಾನಸಿ ಸುಧೀರ್ ಅವರು ಮತ್ತೆ ಸುದ್ದಿಯಾಗಿದ್ದಾರೆ.

ನೃತ್ಯಕ್ಕೂ ಸೈ ನಟನೆಗೂ ಸೈ ಎನಿಸಿಕೊಂಡಿರುವ ಇವರ ಮುದ್ದಾದ ಕುಟುಂಬದ ಫೋಟೋವೊಂದು ವೈರಲ್ ಆಗಿವೆ. ಈ ಫೋಟೋದಲ್ಲಿ ಮಾನಸಿ ಸುಧೀರ್ ಹಾಗೂ ಅವರ ಪತಿ ಹಾಗೂ ಮಗಳನ್ನು ಕಾಣಬಹುದು. ಈ ಫೋಟೋದಲ್ಲಿ ಮಾನಸಿ ಸುಧೀರ್ ಮಗಳು ಅಮ್ಮನಂತೆ ಭರತನ್ಯಾಟ ಕಲಾವಿದೆಯಾಗಿದ್ದಾಳೆ ಎನ್ನುವುದು ತಿಳಿಯುತ್ತದೆ. ಆದರೆ ನಟಿ ಕಮ್ ನೃತ್ಯ ಕಲಾವಿದೆಯಾಗಿರುವ ಮಾನಸಿ ಸುಧೀರ್ ಅವರ ಮುದ್ದಾದ ಫ್ಯಾಮಿಲಿ ಫೋಟೋಗೆ ನೂರಕ್ಕೂ ಅಧಿಕ ಲೈಕ್ಸ್ ಬಂದಿದೆ. ಅದಲ್ಲದೇ ಈ ಫೋಟೋಗೆ ಫ್ಯಾನ್ಸ್ ಗಳು ನಾನಾ ರೀತಿಯ ಕಾಮೆಂಟ್ ಹಾಕುವ ಮೂಲಕ ಮೆಚ್ಚಿಕೊಂಡಿದ್ದಾರೆ.

ಕಾಂತಾರ ಸಿನಿಮಾದಲ್ಲಿ ಕಮಲ (Kamala) ಪಾತ್ರ ಅಪ್ಪಟ ಗ್ರಾಮೀಣ ಮಹಿಳೆ ಪಾತ್ರದಲ್ಲಿ ಮಿಂಚಿದ್ದರು. ಕಮಲ ಪಾತ್ರವು ಮಗನ ಏರಿಕೆಯನ್ನು ಬಯಸುತ್ತಾ, ಮಗನ ತಪ್ಪಿದ್ದರೆ ದಂಡಿಸುತ್ತ ಕನ್ನಡ ಸಿನಿ ರಸಿಕರ ಮನಸ್ಸು ಗೆದ್ದುಕೊಂಡಿದ್ದರು. ಅದಲ್ಲದೇ ಈ ಸಿನಿಮಾದ ಬಳಿಕ ನಟಿ ಮಾನಸಿ ಸುಧೀರ್ ಅವರಿಗೆ ಅವಕಾಶಗಳು ಬರುತ್ತಿದ್ದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಾಂತಾರ ಸಿನಿಮಾಕ್ಕೂ ಮೊದಲು ಸಾಕಷ್ಟು ಸಿನಿಮಾ ಹಾಗೂ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ.

2011 ರಲ್ಲಿ ಕಂಚಿಲ್ದ ಬಾಲೆ (Kanchilda Bale) ಸಿನಿಮಾದ ಮೂಲಕ ತುಳು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಮಾನಸಿ ಅವರು ನಟನೆಯ ನೆರಳು (Neralu) ಕಿರುಚಿತ್ರಕ್ಕೆ ಬೆಂಗಳೂರು ಅಂತರಾಷ್ಟ್ರೀಯ ಕಿರು ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯು ಲಭಿಸಿತ್ತು. ಮಹಾಭಾರತ (Mahabharata), ಗುರುರಾಘವೇಂದ್ರ ವೈಭವ (Gururaghavendra Vaibhava), ಸೀತೆ (Seethe), ಪ್ರೀತಿಯೆಂಬ ಮಾಯೆ (Preethiyemba Maye) ಧಾರವಾಹಿಗಳಲ್ಲಿ ನಟಿಸಿದ್ದರು.

ಲಾಕ್​ಡೌನ್ ಸಮುಯದಲ್ಲಿ ಮಕ್ಕಳ ಅಭಿನಯ ಗೀತೆಗಳನ್ನು ಹಾಡಿ ಫೇಸ್​ಬುಕ್ ಸೇರಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದರು. ಆದರೆ 2013 ರಲ್ಲಿ ಮಾನಸಿ ಸುಧೀರ್‌ ಹೆಸರಲ್ಲಿ ಯೂಟ್ಯೂಬ್ ಚಾನೆಲ್‌ (Youtube Chanel) ಆರಂಭಿಸಿರುವ ಮಾನಸಿ ಅವರು ತಮ್ಮ ಹಾಡು, ನೃತ್ಯದ ವಿಡಿಯೋಗಳನ್ನು ಅಪ್ಲೋಡ್‌ ಮಾಡುತ್ತಿದ್ದಾರೆ. ಈಗಾಗಲೇ ಲಕ್ಷಕ್ಕೂ ಅಧಿಕ ಚಂದಾದಾರರನ್ನು ಹೊಂದಿದ್ದು ಮಾನಸಿ ಸುಧೀರ್ ಪಾಲಿಗೆ ಇನ್ನಷ್ಟು ಅವಕಾಶಗಳು ಬರಲಿ ಎಂಬುದೇ ಆಶಯ.

Leave a Reply

Your email address will not be published. Required fields are marked *