ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯು ಅನೇಕ ಪ್ರತಿಭೆಗಳಿಗೆ ಕರೆದು ಮಣೆ ಹಾಕಿದೆ. ಹೀಗಾಗಿ ಸಿನಿಮಾ ಹಾಗೂ ಧಾರಾವಾಹಿಯ ಮೂಲಕ ಪ್ರೇಕ್ಷಕರಿಗೆ ಹಾಗೂ ಅಭಿಮಾನಿಗಳಿಗೆ ಮನೋರಂಜನೆ ರಸದೌತಣವನ್ನು ನೀಡುತ್ತಿದ್ದಾರೆ. ಸದ್ಯಕ್ಕೆ ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಮಾನಸ ಜೋಶಿ (Manasa Joshi) ಇದೀಗ ಮತ್ತೆ ಸುದ್ದಿಯಾಗಿದ್ದಾರೆ.
ಇದೀಗ ನಟಿ ಮಾನಸಿ ಜೋಶಿಯವರು ಬೇಬಿ ಬಂಪ್ ಫೋಟೋ (Baby Bamp Photo) ಗಳು ವೈರಲ್ ಆಗಿವೆ. ಕಳೆದ ವರ್ಷ ಮೊದಲ ಮಗುವಿನ ನಿರೀಕ್ಷೆಯಲ್ಲಿ ದಂಪತಿಗಳು ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಈ ಫೋಟೋದಲ್ಲಿ ಮಾನಸ ಜೋಶಿ ಹಾಗೂ ಪತಿಯ ಜೊತೆಗೆ ಕ್ಯಾಮೆರಾಗೆ ಪೋಸ್ ನೀಡಿದ್ದರು. ಇದೀಗ ವೈರಲ್ ಆಗಿರುವ ನಟಿಯ ಈ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಲೈಕ್ಸ್ ಗಳು ಬಂದಿವೆ.

ಅಂದಹಾಗೆ, 2015ರ ಡಿಸೆಂಬರ್ ತಿಂಗಳಿನಲ್ಲಿ ನಟಿ ಮಾನಸ ಜೋಶಿ ಹಾಗೂ ಸಂಕರ್ಷಣ ಪ್ರಸಾದ್ (Sankarshana Prasad) ಅವರ ವಿವಾಹ ಮಹೋತ್ಸವ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಿತು. ಹಿರಿಯರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಸಂಪ್ರದಾಯ ಬದ್ದವಾಗಿ ನಟಿ ಮಾನಸ ಜೋಶಿ ಹಾಗೂ ಸಂಕರ್ಷಣ ಪ್ರಸಾದ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಕಳೆದ ವರ್ಷ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಮಾನಸ ಜೋಶಿ (Manasa Joshi)ಯವರು ಹೆಣ್ಣು ಮಗುವಿಗೆ (Baby Girl) ಜನ್ಮ ನೀಡಿದ್ದರು. ನಟಿ ಮಾನಸ ಜೋಶಿ ಹಾಗೂ ಸಂಕರ್ಷಣ ಪ್ರಸಾದ್ ಅವರು ಹೆಣ್ಣು ಮಗುವಿನ ಆಗಮನದಿಂದ ಫುಲ್ ಖುಷ್ ಆಗಿದ್ದರು. ಈ ವಿಚಾರವನ್ನು ನಟಿ ಮಾನಸ ಜೋಶಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನಟಿ ಮಾನಸ ಜೋಶಿ, ‘’ಹೆಣ್ಣು ಮಗುವಿಗೆ ಹೆಮ್ಮೆಯ ಪೋಷಕರಾಗಿದ್ದೇವೆ’’ ಎಂದು ನಟಿ ಮಾನಸ ಜೋಶಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ನಟಿ ಮಾನಸ ಜೋಶಿ ಹಾಗೂ ಸಂಕರ್ಷಣ ಪ್ರಸಾದ್ ದಂಪತಿಗೆ ನಟ ನಟಿಯರು ಶುಭಾಶಯಗಳನ್ನು ಕೋರಿದ್ದರು.

ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸಕ್ರಿಯರಾಗಿದ್ದ ನಟ ಮಾನಸ ಜೋಶಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಮಹಾದೇವಿ’ (Mahadevi) ಧಾರಾವಾಹಿಯಲ್ಲಿ ನಟಿ ಮಾನಸ ಜೋಶಿ ಅವರು ದೇವಿ ಪಾತ್ರದಲ್ಲಿ ಮಿಂಚಿದ್ದರು. ‘ಮಂಗಳಗೌರಿ ಮದುವೆ’ (Mangala Gowri) ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಅದರ ಜೊತೆಗೆ ಕನ್ನಡ ಸಿನಿಮಾಗಳಾದ ಲಾಸ್ಟ್ ಬಸ್, ಅಮೃತ ಅಪಾರ್ಟ್‌ಮೆಂಟ್ಸ್, ಯಶೋಗಾಥೆ, ಹರಿವು, ಹಜ್, ಕಿರಗೂರಿನ ಗಯ್ಯಾಳಿಗಳು’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.