50 ವರ್ಷ ಆದರು ಕೂಡ ಚಡ್ಡಿ ಹಾಕಿ ಕೊಂಡು ಸೆಲ್ಫಿ ತೆಗೆದು ಮಗಳಿಗಿಂತ ನಾನು ಏನು ಕಮ್ಮಿ ಇಲ್ಲ ಎಂದು ಸಾಬೀತು ಮಾಡಿದ ಕನಸಿನ ರಾಣಿ ಮಾಲಾಶ್ರೀ, ನಟಿಯ ಅವತಾರ ಕಂಡು ಫ್ಯಾನ್ಸ್ ಶಾಕ್?!!!!

ಚಂದನವನದ ಕನಸಿನ ರಾಣಿ ಮಾಲಾಶ್ರೀ (Malashree) ಯವರಿಗೆ ವಯಸ್ಸು ನಲವತ್ತು ಒಂಬತ್ತು ಆದರೂ ಕೂಡ ಇವತ್ತಿಗೂ ಚಂದನವನದಲ್ಲಿ ಅಷ್ಟೇ ಬೇಡಿಕೆಯನ್ನು ಹೊಂದಿದ್ದಾರೆ. ಕನ್ನಡ ಸಿನಿಮಾರಂಗದಲ್ಲಿ ಮಾಲಾಶ್ರೀಯವರು ನಟಿ ಕಮ್ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ನಟಿ ಮಾಲಾಶ್ರೀಯವರ ಮಗಳು ರಾಧನಾ ರಾಮು (Radhana Ramu) ಕೂಡ ಎಂಟ್ರಿ ಕೊಟ್ಟಿದ್ದು, ಆದರೆ ಇದೀಗ ನಟಿ ಮಾಲಾಶ್ರೀಯವರು ಉಡುಗೆಯ ವಿಚಾರವಾಗಿ ಸುದ್ದಿಯಾಗಿದ್ದಾರೆ.

ಕನಸಿನ ರಾಣಿ ಮಾಲಾಶ್ರೀ ಇತ್ತೀಚಿಗಷ್ಟೇ ಶಾರ್ಟ್ ಡ್ರೆಸ್ (Short Dress) ಹಾಕಿ ಫ್ಯಾನ್ಸ್ ಗಳಿಗೂ ಶಾಕ್ ನೀಡಿದ್ದಾರೆ. ಹೌದು, ಮುಂಬೈ (Mumbai) ಗೆ ತೆರಳಿರುವ ನಟಿ ಮಾಲಾಶ್ರೀ ಇತ್ತೀಚಿಗಷ್ಟೇ ಶಾಪಿಂಗ್ ಮಾಲ್ (Shopping Mal) ಒಂದರಲ್ಲಿ ಕೋ ಆರ್ಡರ್ ಡ್ರೆಸ್ ಹಾಕಿ ಕನ್ನಡಿ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ನಟಿ ಮಾಲಾಶ್ರೀಯ ಶಾರ್ಟ್ ಡ್ರೆಸ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನಟಿಯ ಈ ಲುಕ್ ಫಿದಾ ಆಗಿದ್ದಾರೆ. ಅದಲ್ಲದೇ ಈ ಫೋಟೋಗೆ ಕಾಮೆಂಟ್ ಮಾಡಿದ್ದು, ಮಗಳಿಗೆ ಕಾಂಪಿಟೇಶನ್ ಕೊಡ್ತಿದ್ದಾರೆ ಕನಸಿನ ರಾಣಿ ಎಂದಿದ್ದಾರೆ.

ಚಂದನವನದಲ್ಲಿ 90 ರ ದಶಕದ ವೇಳೆ ಕನಸಿನ ರಾಣಿಯಾಗಿ ಮೆರೆದ ಮಾಲಾಶ್ರೀಯವರಿಗೆ ಫ್ಯಾನ್ಸ್ ಬಳಗ ದೊಡ್ಡದಿದೆ. ಒಂದು ಕಾಲದಲ್ಲಿ ನಟರಷ್ಟೇ ಬೇಡಿಕೆ ಮಾಲಾಶ್ರೀಗೂ ಇತ್ತು. ಹಳ್ಳಿ ಹುಡುಗಿ, ಸಿಟಿ ಹುಡುಗಿ, ಬಬ್ಲಿ ಹುಡುಗಿ ಹಾಗೂ ಸಾಹಸ ಪಾತ್ರಗಳಲ್ಲಿ ಮಿಂಚಿದ ಚೆಲುವೆ ಈ ಮಾಲಾಶ್ರೀ. ಪ್ರೇಮಕಥೆ ಆಧಾರಿತ ಸಿನಿಮಾದಲ್ಲಿ ಕಾಣಿಸಿಕೊಂಡರೂ ಕೂಡ ಸಾಹಸಮಯ ಚಿತ್ರಗಳಲ್ಲಿ ಇವರಿಗೆ ಬೇಡಿಕೆ ಇತ್ತು.

ನಟಿ ಮಾಲಾಶ್ರೀಯವರು ಮೊದಲಿಗೆ ಬಾಲ ನಟಿಯಾಗಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಈವರೆಗೆ ಸುಮಾರು 34 ಚಿತ್ರಗಳಲ್ಲಿ ಬಾಲ ನಟಿಯಾಗಿ ನಟಿಸಿದರು. ಬಳಿಕ 1989ರಲ್ಲಿ ಸಾರ್ವಕಾಲಿಕ ಜನಪ್ರಿಯ “ನಂಜುಂಡಿ ಕಲ್ಯಾಣ” (Nanjundi Kalyana) ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ತದನಂತರದಲ್ಲಿ ನಟಿ ಮಾಲಾಶ್ರೀಯವರಿಗೆ ಸಾಲು ಸಾಲು ಅವಕಾಶಗಳು ಬಂದವು.

ಗಜಪತಿ ಗರ್ವಭಂಗ, ಪ್ರತಾಪ್, ಕಿತ್ತೂರಿನ ಹುಲಿ ಮತ್ತು ತವರುಮನೆ, ಚಾಮುಂಡಿ, ಕಿರಣ್ ಬೇಡಿ ಶಕ್ತಿ, ವೀರ ಸೇರಿದಂತೆ ಇನ್ನು ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವತ್ತಿಗೂ ಕೂಡ ಅಷ್ಟೇ ಬೇಡಿಕೆಯನ್ನು ಹೊಂದಿದ್ದು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದಲ್ಲದೆ ನಟಿಯ ಮಗಳು ಕೂಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಮಗಳು ಕೂಡ ಸಿನಿಮಾಗಳಲ್ಲಿ ನಟಿಸುವ ವಿಚಾರದಲ್ಲಿ ಬೆಂಬಲ ನೀಡುತ್ತಿದ್ದಾರೆ.

Leave a Reply

Your email address will not be published. Required fields are marked *