ಅವನು ಹೇಳಿದ್ದೆಲ್ಲಾ ಸುಳ್ಳು!! ನನಗೆ ಮೋಸ ಮಾಡಿ ಮದುವೆ ಆಗಿದ್ದಾನೆ. ರವೀಂದರ್ ಚಂದ್ರಶೇಖರ್ ಮಹಾಲಕ್ಷ್ಮಿ ಗೆ ಮೋ-ಸ ಮಾಡಿದ್ರಾ? ಕಣ್ಣೀರು ಹಾಕಿ ಮಹಾಲಕ್ಷ್ಮೀ ಹೇಳಿದ್ದು ಏನು?..

ಕಿರುತೆರೆ ನಟಿ ಕಮ್ ನಿರೂಪಕಿ ಮಹಾಲಕ್ಷ್ಮೀ (Mahalakshmi) ಮತ್ತು ತಮಿಳು ನಿರ್ಮಾಪಕ ರವೀಂದರ್​ ಚಂದ್ರಶೇಖರ್ (Ravindra Chandrasekaran)ಅವರ ಮದುವೆ ವಿಚಾರವು ದೊಡ್ಡ ಮಟ್ಟಕ್ಕೆ ಸುದ್ದಿಯಲ್ಲಿತ್ತು. ಕಳೆದ ವರ್ಷ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದ ಸೆಲೆಬ್ರಿಟಿ ದಂಪತಿಗಳ ಸಾಲಿಗೆ ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ (Ravindra Chandrasekaran) ಮತ್ತು ಕಿರುತೆರೆ ನಿರೂಪಕಿ ಮಹಾಲಕ್ಷ್ಮಿ (Mahalakshmi)ಜೋಡಿಗಳು ಸದಾಟ್ರೋಲ್ ಕೂಡ ಆಗಿದ್ದರು.

ಅದಲ್ಲದೆ, ನಿರೂಪಕಿ ಮಹಾಲಕ್ಷ್ಮಿಯವರು ರವೀಂದರ್ ಚಂದ್ರಶೇಖರ್ ಅವರನ್ನು ಹಣಕ್ಕಾಗಿ ಮದುವೆಯಾದರು ಎಂದು ನೆಟ್ಟಿಗರು ಕಾಮೆಂಟ್ ಕೂಡ ಮಾಡಿದ್ದರು. ಆದರೆ ನೆಟ್ಟಿಗರು ಏನೇ ಹೇಳಲಿ ಆದರೆ ಈ ಜೋಡಿ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳಲೇ ಇಲ್ಲ. ಇತ್ತೀಚೆಗಷ್ಟೇ ಈ ಜೋಡಿ ಮೊದಲ ವಿವಾಹ ವಾರ್ಷಿಕೋತ್ಸವ (Wedding Aniversary) ವನ್ನು ಆಚರಿಸಿಕೊಂಡಿದ್ದರು.

ಆದಾದ ಕೆಲವೇ ದಿನಗಳಲ್ಲಿ ಈ ದಂಪತಿಗಳಿಗೆ ಶಾ-ಕ್ ವೊಂದು ಎದುರಾಗಿತ್ತು. ನಿರ್ಮಾಪಕ ರವೀಂದರ್​ ಚಂದ್ರಶೇಖರನ್ ಅವರನ್ನು ಪೊಲೀಸರು ಅ-ರೆಸ್ಟ್​ ಮಾಡಿದ್ದರು. ಚೆನ್ನೈ (Chennai) ಮೂಲದ ಬಾಲಾಜಿ ಗಾಬಾ (Balaji Gaba) ಎಂಬುವರು ಚೆನ್ನೈ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಣಕಾಸಿನ ವಂ-ಚನೆ ಆರೋಪದ ಮೇಲೆ ದೂರು ನೀಡಿದ್ದರು. ಪ್ರಾಜೆಕ್ಟ್ ನಲ್ಲಿ 200 ಕೋಟಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭವನ್ನು ಕಾಣಬಹುದೆಂದು ಹೇಳಿ ಬಾಲಾಜಿ ಗಾಬಾ ಅವರನ್ನು ನಂಬಿಸಿದ್ದರು.

ಹೀಗಾಗಿ ಬಾಲಾಜಿ ಗಾಬಾ 16 ಕೋಟಿ ರೂ. ವರೆಗೆ ಹೂಡಿಕೆ ಮಾಡಿದ್ದರು. ಹೇಳಿದ ಸಮಯಕ್ಕೆ ಯೋಜನೆ ಆರಂಭಿಸದಿದ್ದಾಗ ಬಾಲಾಜಿ ಗಾಬಾ ಅವರು ರವೀಂದರ್​ ಬಳಿ ಹಣ ವಾಪಸ್​ ಕೇಳಿದ್ದು, ಆದರೆ ಈ ರವೀಂದರ್​ ಬೆ-ದರಿಕೆ ಹಾಕಿದ್ದರಂತೆ. ಅಷ್ಟೇ ಅಲ್ಲದೇ ನೀಡಿದ್ದ ನಾಲ್ಕು ಚೆಕ್​ ಬೌನ್ಸ್​ ಆಗಿದೆ ಎಂದು ಬಾಲಾಜಿ ಗಾಬಾ ಅವರು ದೂರು ನೀಡಿದ್ದರು. ಈ ದೂರಿನ್ವಯಾ ರವೀಂದರ್​​ರನ್ನು ಬಂಧಿಸಲಾಗಿದೆ.

ಅದಲ್ಲದೇ ರವೀಂದರ್​ ಅವರು ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದು ಸದ್ಯಕ್ಕೆ ಕಂಬಿ ಎನಿಸುತ್ತಿದ್ದಾರೆ.ಪತಿ ರವೀಂದರ್​ ಅವರ ವಂಚನೆ ಪ್ರ-ಕರಣಗಳು ಬೆಳಕಿಗೆ ಬರುತ್ತಿದ್ದಂತೆ ನಟಿ ಮಹಾಲಕ್ಷ್ಮೀ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ. ಮದುವೆಗೂ ಮುನ್ನ ಈ ಬಗ್ಗೆ ಹೇಳಿಕೊಳ್ಳದೇ ಮದುವೆ ಮಾಡಿಕೊಂಡರು.

ಆದರೆ ಇದೀಗ ಮದುವೆ ಮಾಡಿಕೊಂಡು ವಂಚನೆ ಮಾಡಿದ್ದಾರೆ ಎಂದು ನೋವಿನಲ್ಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದೀಗ ಮಹಾಲಕ್ಷ್ಮಿ ಅವರು ಮಾನಸಿಕ ಆ-ಘಾತಕ್ಕೆ ಒಳಗಾಗಿದ್ದು, ಒತ್ತಡದಲ್ಲಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.

Leave a Reply

Your email address will not be published. Required fields are marked *