ಕನ್ನಡ ಕಿರುತೆರೆ ಲೋಕದಲ್ಲಿ ಪ್ರಸಾರವಾಗಿರುವ ಕೆಲವು ಧಾರಾವಾಹಿಗಳು ಮುಕ್ತಾಯವಾಗಿದ್ದರೂ ಕಿರುತೆರೆ ಪ್ರೇಕ್ಷಕರು ಆ ಧಾರಾವಾಹಿಯನ್ನು ನೆನಪಿಸಿಕೊಳ್ಳುತ್ತಾರೆ. ಅಂತಹ ಧಾರಾವಾಹಿಗಳಲ್ಲಿಗಳಲ್ಲಿ ಜೋಡಿ ಹಕ್ಕಿ (Jodi Hakki) ಧಾರಾವಾಹಿ ಕೂಡ ಒಂದು. ಆರೂರು ಜಗದೀಶ್ ನಿರ್ದೇಶನದ ಈ ಸೀರಿಯಲ್ ಒಳ್ಳೆಯ ಪ್ರತಿಕ್ರಿಯೆ ಪಡೆದಿತ್ತು. ಈ ಧಾರಾವಾಹಿಯಲ್ಲಿ ಅನು ಪಾತ್ರದಲ್ಲಿ ಮಧುಶ್ರೀ ನಟಿಸಿದ್ದರು. ನಾಯಕಿ ಚೈತ್ರಾ ರಾವ್ (Chaitra Rao) ಗೆ ಸ್ನೇಹಿತೆಯಾಗಿ ಮಧುಶ್ರೀ ಅಯ್ಯರ್ (Madhushree Ayyar) ನಟಿಸಿದ್ದು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದರು.
ಇದೀಗ ಜೋಡಿ ಹಕ್ಕಿ ಸೀರಿಯಲ್ ಖ್ಯಾತಿಯ ನಟಿ ಮಧುಶ್ರೀಯವರು ಪತಿ ಹಾಗೂ ಮಗಳ ಜೊತೆಗೆ ಸಮಯ ಕಳೆದಿದ್ದಾರೆ. ನಟಿ ಮಧುಶ್ರೀ ದಂಪತಿಗಳು ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ನಟಿಯ ಕ್ಯೂಟ್ ಕುಟುಂಬದ ಫೋಟೋಗೆ ಕಾಮೆಂಟ್ ಜೊತೆಗೆ ನೂರಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ.
2018ರಲ್ಲಿ ಮಧುಶ್ರೀ ಅವರು ಯಶ್ ಅಯ್ಯರ್ (Yash Ayyar) ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಯಶ್ ಟಿಕ್ ಟಾಕ್ ಮಾಡುತ್ತ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು. ಪತಿಯ ಜೊತೆಗೆ ಮಧು ಕೂಡ ಸಾಥ್ ನೀಡಿದ್ದರು. ಮದುವೆಯಾಗಿ ಎರಡು ವರ್ಷ ಕಳೆಯುತ್ತಿದ್ದಂತೆ ಗುಡ್ ನ್ಯೂಸ್ ನೀಡಿದ್ದರು. ತಂದೆ ತಾಯಿಯಾಗುತ್ತಿರುವ ವಿಚಾರವನ್ನು ಮಧು ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಅದರ ಜೊತೆಗೆ ಸೀಮಂತದ ಫೋಟೋಗಳನ್ನು ಕೂಡ ಶೇರ್ ಮಾಡಿಕೊಂಡಿದ್ದರು. ವೈಯುಕ್ತಿಕ ಜೀವನದ ಬಗ್ಗೆ ಅಪ್ಡೇಟ್ ನೀಡುತ್ತಿದ್ದ ಮಧುಶ್ರೀ 2020 ಜುಲೈ 3ರಂದು ಹೆಣ್ಣುಮಗುವಿಗೆ ಜನನ ನೀಡಿದ್ದು, ಆ ಬಗ್ಗೆಯೂ ಇನ್‌ಸ್ಟಾಗ್ರಾಮ್ (Instagram) ನಲ್ಲಿ ಶೇರ್ ಮಾಡಿಕೊಂಡಿದ್ದರು. ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿರುವ ನಟಿ ಮಧುಶ್ರೀಯವರು ನಟಿ ಮಧುಶ್ರೀಯವರ ಹಿನ್ನಲೆ ಗಮನಿಸುವುದಾದರೆ, ಬಿಕಾಂ ಪದವೀಧರೆ (Bcom Degree) ಯಾಗಿ ಶಿವಮೊಗ್ಗದಿಂದ ಬೆಂಗಳೂರಿಗೆ ಬ್ಯಾಂಕ್ ಎಕ್ಸಾಂ (Bank Exam) ಬರೆಯಲು ಬಂದಿದ್ದರು.
ಈ ವೇಳೆಯಲ್ಲಿ ಮಧುಶ್ರೀಗೆ ಸಂಬಂಧಿಕರೊಬ್ಬರು ಧಾರಾವಾಹಿಯೊಂದಕ್ಕೆ ಆಡಿಷನ್ ನೀಡಲು ಹೇಳಿದ್ದು, ಸಿಕ್ಕ ಅವಕಾಶವನ್ನು ಮಧುಶ್ರೀ ಬಳಸಿಕೊಂಡರು. ಆ ಬಳಿಕ.’ಜೋಡಿ ಹಕ್ಕಿ (Jodi Hakki), ರಾಧಾ ರಮಣ (Radha Ramana), ಅವಳು (Avalu) ಧಾರಾವಾಹಿಯಲ್ಲಿ ಪೋಷಕ ಪಾತ್ರದಲ್ಲಿ ನಟಿ ಕಿರುತೆರೆ ಪ್ರೇಕ್ಷಕರ ಮನಸ್ಸು ಗೆದ್ದುಕೊಂಡರು.