ಅವಕಾಶ ಕೊಡ್ತೀವಿ ಮಂಚಕ್ಕೆ ಬಾ ಎಂದು ನಟಿಗೆ ಒತ್ತಾಯ, ಚಿತ್ರರಂಗದ ಇನ್ನೊಂದು ಮುಖ ರಿವಿಲ್ ಮಾಡಿದ ನಟಿ ಲತಾ ರಾವ್!

ಸಿನಿಮಾರಂಗವು ದೂರದಿಂದ ನೋಡಿದಾಗ ಸುಂದರವಾಗಿ ಕಂಡರೂ ಹತ್ತಿರದಿಂದ ನೋಡಿದಾಗಲೇ ಅದರ ಅಸಲಿ ಸತ್ಯ ಹೊರಬರುವುದು. ಈಗಾಗಲೇ ಸಾಕಷ್ಟು ನಟಿಯರು ಸಿನಿಮಾರಂಗದ ಅಸಲಿ ಸತ್ಯವನ್ನು ಬಯಲಿಗೆ ಎಳೆದಿದ್ದಾರೆ. ಕೆಲವು ನಟಿಯರು ತಮಗಾದ ಅನುಭವವನ್ನು ಬಿಚ್ಚಿಡುತ್ತ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದರು.

ಹೌದು ಸಿನಿಮಾರಂಗಕ್ಕೆ ಕಾಸ್ಟಿಂಗ್ ಕೌಚ್ ಎನ್ನುವುದು ಶಾಪವಾಗಿದೆ ಎಂದರೆ ತಪ್ಪಾಗಲಾರದು. ಇದೀಗ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡುತ್ತಾ ನಟಿ ಲತಾ ರಾವ್ (Latha Rao) ತಮಗಾದ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಸದ್ಯಕ್ಕೆ ಅವಕಾಶಗಳಿಲ್ಲದೇ ಸಿನಿಮಾರಂಗದಿಂದ ದೂರ ಉಳಿದಿದ್ದಾರೆ. ಆದರೆ ಅವಕಾಶಗಳು ಸಿಗದೇ ಇರುವುದಕ್ಕೆ ಅಸಲಿ ಕಾರಣಯೇನು ಎನ್ನುವುದನ್ನು ರಿವೀಲ್ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಟಿ ಲತಾ ರಾವ್, “ಪಾತ್ರಕ್ಕಾಗಿ ಪಲ್ಲಂಗ, ಅವಕಾಶಗಳಿಗಾಗಿ ಹೊಂದಾಣಿಕೆ ಸೇರಿದಂತೆ ಸಿನಿ ಇಂಡಸ್ಟ್ರಿಯಲ್ಲಿರುವ ಅನಿಷ್ಟ ಪದ್ಧತಿಯ ಬಗ್ಗೆ ಮಾತನಾಡಿದ್ದಾರೆ. ಕೆಲವು ನಟಿಯರು ಅವಕಾಶವನ್ನು ಗಿಟ್ಟಿಸಿಕೊಳ್ಳಲು ಮಂಚವನ್ನು ಹಂಚಿಕೊಂಡಿದ್ದಾರೆ. ಸಿನಿ ಲೋಕದಲ್ಲಿ ಇದು ಹೊಸದೇನಲ್ಲ. ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ, ಈ ಅನಿಷ್ಟ ಪದ್ಧತಿ ಇತರೆ ಕ್ಷೇತ್ರಗಳಿಗೂ ಆವರಿಸುತ್ತಿರುವುದು ಕಳವಳಕಾರಿಯಾಗಿದೆ” ಎಂದಿದ್ದಾರೆ.

“ರಾಜಿಗಳನ್ನು ಕೆಲವು ವ್ಯಕ್ತಿಗಳು ಒಂದು ಹೆಗ್ಗುರುತನ್ನು ಪಡೆಯಲು ಅಥವಾ ತಮ್ಮ ವೃತ್ತಿಜೀವನದ ಉತ್ತುಂಗಕ್ಕೆ ಏರಲು ಮಾಡುತ್ತಾರೆ” ಎಂದಿದ್ದಾರೆ. ಇಂತಹ ಕೆಟ್ಟ ಆಚರಣೆಯ ಭಾಗವಾಗದಿರುವ ನನ್ನ ನಿರ್ಧಾರದಿಂದ ನಾನು ಅನೇಕ ಅವಕಾಶಗಳನ್ನು ಕಳೆದುಕೊಂಡಿದೆ. ಮಂಚ ಹಂಚಿಕೊಳ್ಳುವಂತೆ ನನಗೂ ಒತ್ತಾಯ ಮಾಡಿದ್ದರು. ಆದರೆ, ನಾನು ಯಾವ ಆಮಿಷಕ್ಕೂ ಬಲಿಯಾಗಲಿಲ್ಲ” ಎಂದಿದ್ದಾರೆ.

ನಟಿ ಲತಾ ರಾವ್ ತಮಿಳು (Tamil), ತೆಲುಗು (Telug), ಮಲಯಾಳಂ (Malayalam) ಮತ್ತು ಕನ್ನಡ (Kannada) ಸೀರಿಯಲ್ಸ್​ ತೆರೆ ಹಂಚಿಕೊಂಡಿದ್ದರು. ಅದಲ್ಲದೆ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡವರು. ಕನ್ನಡ ಕೋಟಿಗೊಬ್ಬ 2 ಹಾಗೂ ತಮಿಳಿನಲ್ಲಿ ಜಯಂ ರವಿ (Jayaram Ravi) ಅಭಿನಯದ ಥಿಲ್ಲಾಲಂಗಡಿ (Thillalangadi) ಸೇರಿದಂತೆ ಕೆಲವು ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಕೊನೆಗೆ ನಟಿ ಲತಾ ರಾವ್ ಅವರಿಗೆ ಅವಕಾಶಗಳು ಸಿಗಲೇ ಇಲ್ಲ. ಹೀಗಾಗಿ ಸಿನಿ ಲೋಕವಾಗಿ ಬಿಟ್ಟರು ಎನ್ನುವುದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *