ಕನ್ನಡ ಕಿರುತೆರೆ ಲೋಕದ ನಟಿ ಲಕ್ಷ್ಮಿ ಸಿದ್ಧಯ್ಯರವರ ಕುಟುಂಬ ಹೇಗಿದೆ ಗೊತ್ತಾ? ಇಲ್ಲಿದೆ ಅಪರೂಪದ ಫೋಟೋಗಳು

ಕನ್ನಡ ಕಿರುತೆರೆ ಲೋಕದಲ್ಲಿ ಕೆಲವು ನಟ ನಟಿಯರೇ ಫ್ಯಾಮಿಲಿಯೇ ನಟನೆಯಲ್ಲಿ ಒಲವನ್ನು ಹೊಂದಿದ್ದಾರೆ. ಈ ವಿಚಾರದಲ್ಲಿ ಕಿರುತೆರೆಯ ನಟಿ ಲಕ್ಷ್ಮಿ ಸಿದ್ಧಯ್ಯ ( Lakshmi Siddayya) ರವರ ಫ್ಯಾಮಿಲಿ ಕೂಡ ಸೇರಿಕೊಳ್ಳುತ್ತದೆ. ಲಕ್ಷ್ಮಿ ಬಾರಮ್ಮ (Lakshmi Baramma) ಖ್ಯಾತಿಯ ಕಲ್ಪನಾ ಪಾತ್ರದಲ್ಲಿ ಮಿಂಚಿದ ನಟಿಯೇ ಈ ಲಕ್ಷ್ಮಿ ಸಿದ್ದಯ್ಯ. ಇದೀಗ ನಟಿ ಲಕ್ಷ್ಮಿ ಸಿದ್ದಯ್ಯರವರ ಫ್ಯಾಮಿಲಿಯ ಫೋಟೋಗಳು ವೈರಲ್ ಆಗಿವೆ.

ಈ ಫೋಟೋದಲ್ಲಿ ಲಕ್ಷ್ಮಿ ಸಿದ್ದಯ್ಯರವರ ಪತಿ ಹಾಗೂ ಮಗನ ಜೊತೆಗೆ ಇರುವುದನ್ನು ಕಾಣಬಹುದು. ಈ ಫೋಟೋ ನೋಡಿದ ಅಭಿಮಾನಿಗಳು ಮುದ್ದಾದ ಫ್ಯಾಮಿಲಿ ಕಂಡು ಖುಷಿ ಪಟ್ಟಿದ್ದಾರೆ. ಈ ಹಿಂದೆಯಷ್ಟೇ ನಟಿ ಲಕ್ಷ್ಮಿ ಸಿದ್ಧಯ್ಯರವರು ತಮ್ಮ ಮಗನ ಜೊತೆಗೆ ಟೆಂಪಲ್ ರನ್ ಶುರು ಮಾಡಿಕೊಂಡಿದ್ದರು. ಬಿಡುವು ಸಿಕ್ಕಿದಾಗ ಮಗನ ಜೊತೆಗೆ ಟೆಂಪಲ್ ರನ್ (Temple Run) ಆರಂಭಿಸಿದ್ದು, ಟೆಂಪಲ್ ಗೆ ಹೋಗಿ ದೇವರ ದರ್ಶನ ಪಡೆಯುತ್ತಿದ್ದರು. ಆ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು.

ಲಕ್ಷ್ಮಿ ಬಾರಮ್ಮ ಧಾರವಾಹಿಯಲ್ಲಿ ಗೊಂಬೆಯ ತಾಯಿಯ ಪಾತ್ರದಲ್ಲಿ ಮಿಂಚಿದ್ದ ಲಕ್ಷ್ಮಿ ಸಿದ್ದಯ್ಯ ಎಲ್ಲರಿಗೂ ಕೂಡ ಚಿರಪರಿಚಿತರಾಗಿದ್ದಾರೆ. ನಟಿ ಲಕ್ಷ್ಮಿ ಸಿದ್ಧಯ್ಯರವರು ರಾಧಾ (Radhaa) ಧಾರಾವಾಹಿಯಲ್ಲಿ ಇವರು ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡರು. ಇಲ್ಲಿಯವರೆಗೆ ಲಕ್ಷ್ಮಿ ಸಿದ್ಧಯ್ಯನವರು ಅನೇಕ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಬಿದಿಗೆ ಚಂದ್ರಮ ( Bidige Chandrama), ಮಾಂಗಲ್ಯ (Mangalya), ಕದನ (Kadana), ಸಂಬಂಧ (Sambandha) ಮುಂತಾದ ಧಾರಾವಾಹಿಗಳಲ್ಲಿ ಲಕ್ಷ್ಮೀ ನಟಿಸಿದ್ದರು. ಬೆಳ್ಳಿತೆರೆಯಲ್ಲಿ ಮಿಂಚಿರುವ ಇವರು 20ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.

ನಟನೆಗೆ ಎಂಟ್ರಿ ಸುಮಾರು ಹದಿನೈದಕ್ಕೂ ಹೆಚ್ಚು ವರ್ಷಗಳಾಗಿದ್ದು, ಕಿರುತೆರೆ ಲೋಕದಲ್ಲಿ ಸಾಕಷ್ಟು ಅವಕಾಶಗಳು ಇವರಿಗೇನು ಕಡಿಮೆ ಇಲ್ಲ. ಲಕ್ಷ್ಮಿ ಬಾರಮ್ಮ ಸೀರಿಯಲ್ ನಲ್ಲಿ ತಾಯಿ ಮಾತ್ರ ಬಹಳನೇ ವಿಭಿನ್ನವಾಗಿತ್ತು ಎಂದೇಳಬಹುದು. ಮೊದಲ ಬಾರಿಗೆ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದ ಹೀಗಾಗಿ ಈ ಪಾತ್ರವನ್ನು ನಿಭಾಯಿಸಲು ಒಪ್ಪಿಕೊಂಡಿದ್ದರು. ಸದ್ಯಕ್ಕೆ ನಟಿ ಲಕ್ಷ್ಮಿ ಸಿದ್ದಯ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.

ಇವರ ಪತಿಯ ಹೆಸರು ಸಿದ್ದಯ್ಯ (Siddayya). ನಟಿ ಲಕ್ಷ್ಮಿಯವರ ಗಂಡ ಸಿದ್ದಯ್ಯ ಅನೇಕ ಸಿನಿಮಾಗಳಲ್ಲಿ ಖಳನಟರಾಗಿ ನಟಿಸಿದ್ದಾರೆ. ರಕ್ಷಿತಾ, ಶ್ರೀಮುರಳಿ ಅಭಿನಯದ ‘ಯಶವಂತ್’ (Yashvanth) ಸಿನಿಮಾದಲ್ಲಿ ಸಿದ್ದಯ್ಯ ಖಳನಟನಾಗಿದ್ದರು. ಹೀಗಾಗಿ ಸತಿ ಪತಿಯರಿಬ್ಬರೂ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸಕ್ರಿಯರಾಗಿದ್ದು, ನಟನೆಯಲ್ಲಿಯೇ ತಮ್ಮ ಖುಷಿಯನ್ನು ಕಾಣುತ್ತಿದ್ದಾರೆ.

Leave a Reply

Your email address will not be published. Required fields are marked *