ವೈಟ್ ಅಂಡ್ ವೈಟ್ ಉಡುಗೆಯಲ್ಲಿ ಫೋಟೋ ಶೂಟ್ ಮಾಡಿಸಿದ ನಗು ಮೊಗದ ಚೆಲುವೆ ಕೃಷಿ ತಾಪಂಡ

ಕನ್ನಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಕೃಷಿ ತಾಪಂಡ ( Krishi Taapanda). ಮುಖದ ತುಂಬಾ ನಗು ತುಂಬಿಕೊಂಡು ಲವಲವಿಕೆಯಲ್ಲಿರುವ ಕೃಷಿ ತಾಪಂಡರವರಿಗೆ ಫ್ಯಾನ್ಸ್ ಫಿದಾ ಆಗುತ್ತಾರೆ. ಅದರಲ್ಲಿಯು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿಯು ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಮತ್ತೆ ಅಭಿಮಾನಿಗಳನ್ನು ಖುಷಿ ಪಡಿಸುವ ಪ್ರಯತ್ನ ಮಾಡುತ್ತಾರೆ.

ಕೃಷಿ ತಾಪಂಡ ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿರುವುದಾದರೂ ತನ್ನ ನಗುವಿನಿಂದಲೇ ಎಲ್ಲಾ ಮನಸ್ಸು ಕದ್ದ ಚೆಲುವೆ ಈ ನಟಿ. ನಟನೆ ಹಾಗೂ ನಗುವಿಗೆ ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ಬಳಗವಿದ್ದು, ಕೃಷಿ ತಾಪಂಡ ಸಿನಿಮಾಗಳ ಜೊತೆಗೆ ಫೋಟೋಶೂಟ್ ಬಗ್ಗೆ ಭಾರಿ ಕ್ರೇಜ್ ಎಂದರೆ ತಪ್ಪಾಗಲಾರದು. ಹೀಗಾಗಿ ಫೋಟೋ ಶೂಟ್ (Photo Shoot) ಮಾಡಿಸಿಕೊಳ್ಳುತ್ತಿರುತ್ತಾರೆ. ಇದೀಗ ವಿಶೇಷವಾದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.

ವೈಟ್ ಅಂಡ್ ವೈಟ್ (White And White) ತುಂಡುಗೆಯಲ್ಲಿ ಕಾಣಿಸಿಕೊಂಡಿದ್ದು ಕೂದಲು ಹರಿಬಿಟ್ಟಿದ್ದಾರೆ. ಹೈ ಹೀಲ್ಡ್ ಹಾಕಿಕೊಂಡು ಸೋಫಾ ಮೇಲೆ ಕುಳಿತುಕೊಂಡು ವಿವಿಧ ರೀತಿಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಆದಾಗಲೇ ಹದಿನೇಳು ಸಾವಿರಕ್ಕೂ ಅಧಿಕ ವ್ಯೂಸ್ ಕಂಡಿದೆ.

ಕಳೆದ ಕೆಲವು ತಿಂಗಳ ಹಿಂದೆ ನಟಿ ಕೃಷಿ ತಾಪಂಡರವರು ಹೊಸ ಮನೆಯಲ ಗೃಹಪ್ರವೇಶಮಾಡಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದರು. ಕುಟಂಬದವರೊಂದಿಗೆ ಸೇರಿಕೊಂಡು ಮೈಸೂರಿ(Mysore) ನಲ್ಲಿ ಹೊಸ ಮನೆ ಗೃಹ ಪ್ರವೇಶ ಮಾಡಿದ್ದರು. ಮೈಸೂರಿನಲ್ಲಿ ಕಟ್ಟಿದ ನೂತನ ಕನಸಿನ ಮನೆಗೆ ಪ್ರವೇಶ ಮಾಡಿದ್ದು, ತಂದೆ, ತಾಯಿ ಮತ್ತು ಸಹೋದರನ ಜೊತೆಗೆ ನೂತನ ಮನೆಯ ಪೂಜೆಯ ಕಾರ್ಯವನ್ನು ನೆರವೇರಿಸಿದ್ದರು. ಈ ಸುಂದರ ಕ್ಷಣದ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡು, ಹೊಸ ಮನೆ, ಹೊಸ ಆರಂಭ ಎಂಬ ಬರಹ ಬರೆದುಕೊಂಡಿದ್ದರು. ಈ ಫೋಟೋಗೆ ಲೈಕ್ಸ್ ಹಾಗೂ ಕಾಮೆಂಟ್ ಗಳ ಮಹಾಪೂರವೇ ಹರಿದು ಬಂದಿತ್ತು.

ಕೃಷಿ ತಾಪಂಡರವರ ಸಿನಿ ಬದುಕಿನ ಹಿನ್ನಲೆಯನ್ನು ಗಮನಿಸಿದರೆ, ತಮಿಳಿನ Nae ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ತದನಂತರದಲ್ಲಿ ಕಹಿ (Kahi), ಎರಡು ಕನಸು (Eradu Kanasu), ಇರ (Era), ಕನ್ನಡಕ್ಕಾಗಿ ಒಂದನ್ನು ಒತ್ತಿ (Kannadakkagi Ondannu otti), ಭರಾಟೆ (Bharate), ಲಂಕೆ (Lanke), ಬ್ಲ್ಯಾಂಕ್‌ (Blank), ರೂಪಾಯಿ (Rupee) ಮುಂತಾದ ಸಿನಿಮಾಗಳಲ್ಲಿ ನಟಿಸಿ ಸಿನಿಪ್ರಿಯರಿಗೆ ಹತ್ತಿರವಾಗಿದ್ದಾರೆ. ಸದ್ಯಕ್ಕೆ ನಗು ಮೊಗದ ಚೆಲುವೆ ಸಿನಿ ಕೆರಿಯರ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *