ಕನ್ನಡ ಕಿರುತೆರೆಯ ಮುದ್ದಾದ ಜೋಡಿ ಕವಿತಾ ಗೌಡ ಹಾಗೂ ಚಂದನ್ ಅವರ ಮದುವೆಯ ಕ್ಷಣ ಹೇಗಿತ್ತು ಗೊತ್ತಾ? ಅದ್ಭುತ ಕ್ಷಣವನ್ನ ಕಣ್ಣು ತುಂಬಿಕೊಳ್ಳಿ

ಕನ್ನಡ ಕಿರುತೆರೆ ಲೋಕ ರೀಲ್ ಹಾಗೂ ರಿಯಲ್ ಜೋಡಿಯೆಂದರೆ ಅದುವೇ ಕವಿತಾ ಗೌಡ (Kavitha Gowda) ಹಾಗೂ ಚಂದನ್ (Chandan). ಸದ್ಯಕ್ಕೆ ಈ ಜೋಡಿ ನಟನೆ ಹಾಗೂ ಉದ್ಯಮ ಎಂದು ಬ್ಯುಸಿಯಾಗಿದ್ದಾರೆ. ಅದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಚಂದನ್ ದಂಪತಿಗಳು ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಸುದ್ದಿಯಲ್ಲಿರುತ್ತಾರೆ. ಇದೀಗ ಈ ಜೋಡಿಯ ವಿಶೇಷ ಫೋಟೋಗಳು ವೈರಲ್ ಆಗಿವೆ.

ಸದ್ಯಕ್ಕೆ ವೈರಲ್ ಆಗಿರುವ ಫೋಟೋಗಳು ಈ ಜೋಡಿಯ ಮದುವೆಯ ಫೋಟೋಗಳು. ಈ ಫೋಟೋಗಳಿಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಲೈಕ್ಸ್ ಬಟನ್ ಒತ್ತಿದ್ದಾರೆ. ಈ ಜೋಡಿಯ ಮದುವೆಯ ಸುಂದರ ಕ್ಷಣಗಳ ಫೋಟೋ ನೋಡಿ ಖುಷಿ ಪಟ್ಟಿದ್ದಾರೆ.

ಕೊರೋನ ಸಮಯದಲ್ಲಿ ಅಂದರೆ 2021 ಮೇ 13 ಹಾಗೂ 14 ರಂದು ಸರಳವಾಗಿ ಮದುವೆ ಮಾಡಿಕೊಳ್ಳುವ ಮೂಲಕ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕೊರೊನಾ ವೈರಸ್​ ಮಿತಿಮೀರಿ ಹರಡುತ್ತಿದ್ದ ಕಾರಣ ಸರ್ಕಾರ ಲಾಕ್​ಡೌನ್​ (Lock down) ಘೋಷಿಸಿದ್ದ ಕಾರಣ ಸರ್ಕಾರದ ನಿಯಮವನ್ನು ಪಾಲಿಸಿಕೊಂಡು ಸಿಂಪಲ್ ಆಗಿ ಮದುವೆ ಮಾಡಿಕೊಂಡರು. ಈ ಜೋಡಿಯ ಮದುವೆ ಕಾರ್ಯಕ್ರಮಕ್ಕೆ ಕುಟುಂಬದವರು ಹಾಗೂ ಆಪ್ತರಷ್ಟೇ ಭಾಗಿಯಾಗಿದ್ದರು.

ಲಕ್ಷ್ಮಿ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ಜೊತೆಯಾಗಿ ನಟಿಸಿದ್ದ ಈ ಜೋಡಿಗಳನ್ನು ರಿಯಲ್ ಜೋಡಿ ಎನ್ನುವಂತೆ ಒಪ್ಪಿಕೊಂಡರು. ಈ ಧಾರಾವಾಹಿಯಿಂದ ಇದಾದ ಬಳಿಕ ಇವರಿಬ್ಬರ ಕುರಿತು ಸಾಕಷ್ಟು ಗಾಸಿಫ್ ಗಳು ಕೇಳಿ ಬಂದಿದ್ದವು. ಇವರಿಬ್ಬರೂ ರಿಲೇಷನ್ಶಿಪ್ ನಲ್ಲಿ ಇದ್ದಾರೆ ಎನ್ನಲಾಗಿತ್ತು. ಅನೇಕ ಸಲ ಕವಿತಾ ಗೌಡ ಹಾಗೂ ಚಂದನ್ ಕುಮಾರ್ ಅವರ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಪ್ರೀತಿ ಹಾಗೂ ಮದುವೆಯ ವಿಚಾರದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿತ್ತು.

ಆದರೆ ಈ ಕುರಿತು ಎಲ್ಲಿಯೂ ತಾವಿಬ್ಬರು ಪ್ರೀತಿ ಮಾಡುತ್ತಿದ್ದೇವೆ ಎಂಬುದನ್ನು ಬಹಿರಂಗ ಪಡಿಸಲೇ ಇಲ್ಲ. ಆದರೆ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಗುಡ್ ನ್ಯೂಸ್ ನೀಡಿದ್ದಾರೆ ಎನ್ನಬಹುದು. ಮದುವೆಯ ಬಳಿಕ ಕುಕ್ ವಿಥ್ ಕಿರಿಕ್ಕು ಶೋ ನಲ್ಲಿ ಇಬ್ಬರೂ ಕಾಣಿಸಿಕೊಂಡು ಕಿರುತೆರೆ ಪ್ರೇಕ್ಷಕರಿಗೆ ಮನೋರಂಜನೆ ನೀಡಿದ್ದರು. ಈ ಶೋ ವಿನ್ನರ್ ಆಗಿ ಚಂದನ್ ಕುಮಾರ್ ಅವರು ಹೊರ ಹೊಮ್ಮಿದ್ದರು.

ಸದ್ಯಕ್ಕೆ ನಟಿ ಕವಿತಾ ಗೌಡ ಪತಿಯ ಜೊತೆಗೆ ಸೇರಿ ಉದ್ಯಮವನ್ನು ನಡೆಸುತ್ತಿದ್ದಾರೆ. ಈ ಹಿಂದೆಯಷ್ಟೇ ಮೈಸೂರು ಮಂಡಿಪೇಟೆ ಹೋಟೆಲ್ (Mysore Mandipete Hotel) ಉದ್ಘಾಟನೆ ಕಾರ್ಯಕ್ರಮಕ್ಕೆ ಆಪ್ತರು ಭಾಗಿಯಾಗಿದ್ದರು. ಈ ʻಮೈಸೂರು ರೋಡ್ ಮಂಡಿಪೇಟೆ ಪಲಾವ್ʼ (Mysore Road Mandipete Palav) ಈ ಹೋಟೆಲ್‌ ಫೋಟೊವನ್ನು ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದರು. ಹೀಗೆ ನಟನೆ, ಉದ್ಯಮ ಹಾಗೂ ವೈಯಕ್ತಿಕ ಬದುಕನ್ನು ಬ್ಯಾಲೆನ್ಸ್ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *