ಮಾಜಿ ಸಿಎಂ ಯಡಿಯೂರಪ್ಪರವರನ್ನು ಭೇಟಿಯಾದ ಚಂದನ ವನದ ಬೆಡಗಿ ಕಾರುಣ್ಯ ರಾಮ್, ಇಲ್ಲಿದೆ ಅಪರೂಪದ ಕ್ಷಣದ ಫೋಟೋಗಳು

ಚಂದನ ವನದ ಬೆಡಗಿ ಕಾರುಣ್ಯ ರಾಮ್ (Karunya Ram) ಸಿನಿಮಾರಂಗದಲ್ಲಿ ಬೇಡಿಕೆ ಹೊಂದಿರುವ ನಟಿಮಣಿಯರಲ್ಲಿ ಒಬ್ಬರು. ನಟಿ ಕಾರುಣ್ಯ ರಾಮ್ ಅವರು 2010 ರಲ್ಲಿ ಬಿಡುಗಡೆಯಾದ ಸೀನಾ (Seena) ಚಿತ್ರದ ಮೂಲಕ ನಟಿಯಾಗಿ ಎಂಟ್ರಿ ಕೊಟ್ಟರು. ಸದ್ಯಕ್ಕೆ ಅಷ್ಟಾಗಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲವಾದರೂ, ಆಗಾಗ ಪ್ರವಾಸದಲ್ಲಿ ಬ್ಯುಸಿಯಾಗುವ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಅದಲ್ಲದೇ ಈ ಬೆಡಗಿ ಫೋಟೋ ಶೂಟ್ ನಲ್ಲಿಯು ಎಲ್ಲರ ಗಮನ ಸೆಳೆಯುವುದಿದೆ.

ಆದರೆ ಇದೀಗ ನಟಿ ಕಾರುಣ್ಯ ರಾಮ್ ಅವರು ಮಾಜಿ ಸಿಎಂ ಯಡಿಯೂರಪ್ಪ (Ex CM Yadiyurappa) ರವರನ್ನು ಭೇಟಿ ಮಾಡಿದ್ದಾರೆ. ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡು, “ನಮ್ಮ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪ ಸರ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆಯುವ ಅವಕಾಶ ಸಿಕ್ಕಿತು” ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗೆ ಏಳು ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ.

ಇತ್ತೀಚೆಗಷ್ಟೇ ಸ್ಯಾಂಡಲ್‌ವುಡ್‌ನ ನವ ನಟಿ ಕಾರುಣ್ಯ ರಾಮ್ ಹೊಸ ರೀತಿಯ ಫೋಟೋ ಶೂಟ್ (Photoshoot) ಮಾಡಿಸಿದ್ದರು. ಕಪ್ಪು ಮತ್ತು ಕೆಂಪು ಬಣ್ಣದ ಉಡುಗೆ ತೊಟ್ಟು ಕಾರುಣ್ಯ ಕ್ಯಾಮೆರಾಗೆ ಪೋಸ್ ನೀಡಿದ್ದರು. ಅಕ್ಕನ ಈ ಒಂದು ಫೋಟೋ ಶೂಟ್‌ಗೆ ಕಾರುಣ್ಯ ಸಹೋದರಿ ಕೂಡ ಸಹಾಯ ಮಾಡಿದ್ದರು. ಗ್ಲಾಮರಸ್ (Glamours) ಮತ್ತು ಸ್ಟೈಲಿಶ್ (Stylish) ಎರಡು ಇರುವ ಹಾಗೆ ಕಾರ್ಪೋರೇಟ್ ಲುಕ್ ನಲ್ಲಿ ಫೋಟೋ ಶೂಟ್ ಮಾಡಿಸಲಾಗಿತ್ತು. ನಟಿಯ ಹೊಸರೀತಿಯ ಫೋಟೋಶೂಟ್ ಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು.

ಸೀನಾ ಸಿನಿಮಾದಿಂದ ಬಣ್ಣದ ಲೋಕಕ್ಕೆ ಮರಳಿದರೂ ಕೂಡನಟಿಗೆ ಅವಕಾಶಗಳು ಬಂದವು. ಮದುವೇನಾ, ವಜ್ರಕಾಯ, ಕಿರಗೂರಿನ ಗಯ್ಯಾಳಿಗಳು, ಎರಡು ಕನಸು, ಕೇಫ್ ಗ್ಯಾರೇಜ್, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಮನೆ ಮಾರಾಟಕ್ಕಿದೆ ಹೀಗೆ ಅನೇಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಕನ್ನಡದ ಜೊತೆಗೆ ತಮಿಳಿನಲ್ಲಿ ಎರಡು ಸಿನಿಮಾಗಳನ್ನು ಮಾಡಿದ್ದಾರೆ. ಕಿರುತೆರೆಯ ರಿಯಾಲಿಟಿ ಶೋ ಬಿಗ್ ಬಾಸ್ (Big Boss) ನಲ್ಲಿ ಭಾಗವಹಿಸಿದ್ದರು.

ಗೋಲ್ಡನ್ ಮಿನಿಟ್ ಶೋ (Golden Minute Show) ನಲ್ಲಿಯು ಭಾಗವಹಿಸಿದ್ದರು. ಆದರೆ ಇತ್ತೀಚೆಗಷ್ಟೇ ನಟಿ ಕಾರುಣ್ಯ ರಾಮ್ ಅವರು ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಹೀಗಾಗಿ ನಟಿ ಕಾರುಣ್ಯ ರಾಮ್ ಅವರನ್ನು ತೆರೆ ಮೇಲೆ ನೋಡುವ ಆಸೆ ಫ್ಯಾನ್ಸ್ ಗಳಿಗಿದೆ. ಹೀಗಾಗಿ ಅಭಿಮಾನಿಗಳಿಗೆ ಯಾವಾಗ ಹೊಸ ಸಿನಿಮಾದ ಮೂಲಕ ಗುಡ್ ನ್ಯೂಸ್ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

Leave a Reply

Your email address will not be published. Required fields are marked *