ಅತ್ತೆ- ಮಾವ ಜೊತೆ ಜ್ಯೋತಿಕಾ ಜಗಳ ಮಾಡಿಕೊಂಡು ಸೂರ್ಯನಿಂದ ದೂರವಾಗಿದ್ದಾರಾ? ಕೊನೆಗೆ ಸಿಕ್ತು ಉತ್ತರ!

ಸಿನಿಮಾರಂಗದಲ್ಲಿ ಗುರುತಿಸಿಕೊಂಡವರು ವೈಯಕ್ತಿಕ ಜೀವನದ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಕೆಲವೊಮ್ಮೆ ನಟ ನಟಿಯರ ವೈಯುಕ್ತಿಕ ಜೀವನದ ವಿಚಾರವು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುವುದಿದೆ. ಈ ವಿಚಾರದಲ್ಲಿ ನಟಿ ಜ್ಯೋತಿಕಾ (Jyothika) ಕೂಡ ಹೊರತಾಗಿಲ್ಲ ಎನ್ನಬಹುದು. ಹೌದು, ನಟಿ ಜ್ಯೋತಿಕಾ ಸಿನಿಮಾರಂಗದಲ್ಲಿ ಖ್ಯಾತ ನಟಿಯಾಗಿ ಗುರುತಿಸಿಕೊಂಡವರು.

ಅವಕಾಶಗಳು ಇದ್ದಾಗಲೇ ತಮಿಳು ಸ್ಟಾರ್ ನಟ ಸೂರ್ಯ (Surya) ಅವರನ್ನು ಮದುವೆಯಾಗಿ ಸಿನಿಮಾ ನಟನೆಗೆ ಬ್ರೇಕ್ ತೆಗೆದುಕೊಂಡಿದ್ದರು. ಆದರೆ ಇದೀಗ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಿದ್ದು ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ತಮಿಳು (Tamil) ಮತ್ತು ಮಲಯಾಳಂ (Malayalam) ಚಿತ್ರರಂಗದ ಸಿಂಪಲ್ ನಟಿ ಜ್ಯೋತಿಕಾ ಕೆಲವು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಮುಂಬೈ (Mumbai) ಕಡೆಗೆ ಹೊರಟಿದ್ದರು.

ಆ ಬಳಿಕ ಅಲ್ಲಿಯೇ ಮನೆ ಮಾಡಿಕೊಂಡು ವಾಸಿಸುತ್ತಿದ್ದಾರೆ. ಹೀಗಿರುವಾಗ ತವರು ಸೇರಿಕೊಂಡ ಕಾರಣದಿಂದಾಗಿ ಅತ್ತೆ- ಮಾವ ಜೊತೆ ಜ್ಯೋತಿಕಾ ಜಗಳ ಮಾಡಿಕೊಂಡು ದೂರವಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಈ ಬಗ್ಗೆ ನಟಿ ಜ್ಯೋತಿಕರವೇ ಸ್ಪಷ್ಟನೆ ನೀಡಿದ್ದು, ಕೊನೆಗೂ ಅಭಿಮಾನಿಗಳ ಮನಸ್ಸಿನಲ್ಲಿದ್ದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ.

ತಮಿಳು ಯುಟ್ಯೂಬ್ ಚಾನೆಲ್ (Youtube Chanel) ಸಂದರ್ಶನದಲ್ಲಿ ಮಾತನಾಡಿರುವ ನಟಿ ಜ್ಯೋತಿಕಾ, ‘ಕೊರೋನಾ ಪ್ಯಾಂಡಮಿಕ್ ಸಮಯದಲ್ಲಿ ನನ್ನ ತಂದೆ ತಾಯಿಗೆ ಎರಡು ಮೂರು ಸಲ ಕೊ-ರೋನಾ ವೈರಲ್ ತಗುಲಿತ್ತು. ಅಲ್ಲದೆ ಆ ಸಮಯದಲ್ಲಿ ಹೆಚ್ಚಿಗೆ ಪ್ರಯಾಣ ಮಾಡುವಂತೆ ಇರಲಿಲ್ಲ. ಅವರೊಟ್ಟಿಗೆ ಇರಲು ಸಹಾಯ ಮಾಡಲು ಆಗುತ್ತಿರಲಿಲ್ಲ.

ಸುಮಾರು 25ರಿಂದ 27 ವರ್ಷಗಳ ಕಾಲ ಚೆನ್ನೈನಲ್ಲಿ ಗಂಡ ಜೊತೆ ಇದ್ದೆ ಆಗ ಫ್ಯಾಮಿಲಿನ ಮಿಸ್ ಮಾಡಿಕೊಂಡೆ. ಕೆಲಸ ಏನೂ ಮಾಡುವಂತೆ ಇರಲಿಲ್ಲ ಮಕ್ಕಳಿಗೆ ಸ್ಕೂಲ್‌ ಕೂಡ ಆನ್‌ಲೈನ್‌ ಇದ್ದ ಕಾರಣ ಫ್ಯಾಮಿಲಿ ಜೊತೆ ಸಮಯ ಕಳೆಯಲು ಒಳ್ಳೆಯ ಕ್ಷಣ ಎಂದು ಮುಂಬೈ ಕಡೆ ಪ್ರಯಾಣ ಮಾಡಿದೆ. ಸೂರ್ಯ ತುಂಬಾ ಸಪೋರ್ಟಿವ್ ಗಂಡ. ನಾನು ಸದಾ ಖುಷಿಯಾಗಿರಬೇಕು ಅಂತ ಇಷ್ಟ ಪಡುತ್ತಾರೆ. ಸದಾ ಮಕ್ಕಳ ಬಗ್ಗೆ ಚಿಂತಿಸುತ್ತಾರೆ.

ಮಕ್ಕಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಪ್ರಪಂಚವನ್ನು ವಿಭಿನ್ನ ರೀತಿಯಲ್ಲಿ ಸೂರ್ಯ ನೋಡುತ್ತಾರೆ. ಮುಂಬೈನಲ್ಲಿ ಇದ್ದಾಗ ಅತ್ತೆ-ಮಾವನ ಜೊತೆ ದೀಪಾವಳಿ ಆಚರಿಸಬೇಕು ಎಂದು ತುಂಬಾ ಆಸೆ ಪಟ್ಟಿದ್ದೆ. ಆಗ ಅತ್ತೆಗೆ ಕರೆ ಮಾಡಿ ಆಸೆ ಹೇಳಿಕೊಂಡಾಗ ಎಲ್ಲರೂ ಒಟ್ಟಿಗೆ ಆಚರಿಸಿದೆವು. ಅತ್ತೆ-ಮಾವ, ಕಾರ್ತಿ ಮತ್ತು ಅವರ ಪತ್ನಿ ….ಕುಟುಂಬದ ಪ್ರತಿಯೊಬ್ಬರ ಜೊತೆಗೂ ನಾನು ಚೆನ್ನಾಗಿದ್ದೇನೆ. ಅತ್ತೆ – ಮಾವ ವೃತ್ತಿ ಜೀವನಕ್ಕೆ ಸಖತ್ ಸಪೋರ್ಟ್ ಮಾಡುತ್ತಾರೆ ಎಂದಿದ್ದಾರೆ.

Leave a Reply

Your email address will not be published. Required fields are marked *