ನಾನಾ ಬಗೆಯ ಬಟ್ಟೆಗಳನ್ನು ಹಾಕಿ ಮಾದಕ ನೋಟ ಬೀರಿದ ಕಿರುತೆರೆಯ ನಟಿ ಜ್ಯೋತಿ ರೈ, ಫೋಟೋಗಳನ್ನು ನೋಡಿ ಎದ್ದು ಕುಂತ ಪಡ್ಡೆ ಹುಡುಗರು!!

ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಬದುಕು ಕಟ್ಟಿಕೊಂಡವರು ಹಲವರು. ಆದರೆ ಕೆಲವು ನಟಿಯರು ಬಣ್ಣದ ಲೋಕದಲ್ಲಿ ಸಾಕಷ್ಟು ವರ್ಷಗಳಿಂದಲೇ ಬೇಡಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ. ತನ್ನ ಸೌಂದರ್ಯ ಹಾಗೂ ನಟನೆಯಿಂದಲೇ ಅಭಿಮಾನಿಗಳ ಮನಸ್ಸನ್ನು ಗೆದ್ದುಕೊಂಡಿದ್ದಾರೆ. ಈ ವಿಚಾರದಲ್ಲಿ ಕಿರುತೆರೆಯಲ್ಲಿ ಕೆಲವು ವರ್ಷಗಳಿಂದ ಸಕ್ರಿಯರಾಗಿರುವ ಜ್ಯೋತಿ ರೈ (Jyothi Rai) ಕೂಡ ಹೊರತಾಗಿಲ್ಲ ಎನ್ನಬಹುದು.ಉಳಿದ ನಟಿಯರಂತೆ ಈ ನಟಿಯು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿಲ್ಲ. ಆದರೆ ಅಪರೂಪಕ್ಕೊಮ್ಮೆ ಒಂದು ಫೋಟೋವನ್ನು ಶೇರ್ ಮಾಡಿಕೊಳ್ಳುವುದಿದೆ.

ಇತ್ತೀಚೆಗಷ್ಟೇ ನಟಿ ಮಾಡ್ರನ್ ಉಡುಗೆ (Modern Dress) ಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ನಟಿ ಜ್ಯೋತಿರೈಯವರ ಈ ಮಾಡ್ರನ್ ಉಡುಗೆಯಲ್ಲಿ ಕಂಡು ನೆಟ್ಟಿಗರು ಶಾಕ್ ಕೂಡ ಆಗಿದ್ದರು. ಅಷ್ಟೇ ಈ ಫೋಟೋವನ್ನು ಶೇರ್ ಮಾಡಿಕೊಂಡು ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದ ನಟಿಯ ಫೋಟೋ ನೆಟ್ಟಿಗರಿಗೆ ಪ್ರತಿಕ್ರಿಯೆ ನೀಡಲು ಆಗಿರಲಿಲ್ಲ. ಆದರೆ ಇದು ಜ್ಯೋತಿ ರೈ ಎಂದು ಪ್ರಶ್ನೆ ಮಾಡುವ ಮಟ್ಟಿಗೆ ಈ ಫೋಟೋ ಶಾಕ್ ನೀಡಿತ್ತು.

ಆದರೆ ಇದೀಗ ನಟಿ ಜ್ಯೋತಿ ರೈ ಮತ್ತೆ ಸುದ್ದಿಯಾಗಿದ್ದಾರೆ. ನಟಿಯು ಸೀರೆಯಲ್ಲಿ ಯಾವ ಯುವ ನಟಿಗೂ ಕಡಿಮೆಯಿಲ್ಲ ಎನ್ನುವಂತೆ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಸೀರೆಯುಟ್ಟಿದ್ದು ಮಾದಕ ನೋಟ ಬೀರಿದ್ದಾರೆ. ಈ ಫೋಟೋವನ್ನು ಶೇರ್ ಮಾಡಿಕೊಂಡಿದ್ದು , ‘ನೀವು ಗ್ಲಾಮರಸ್ ಅನ್ನು ಅನುಭವಿಸಿದರೆ ನೀವು ಖಂಡಿತವಾಗಿಯೂ ಗ್ಲಾಮರಸ್ ಆಗುತ್ತೀರಿ’ ಎಂದು ಬರೆದುಕೊಂಡಿದ್ದಾರೆ.

ಈ ಫೋಟೋಗೆ 19 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ. ಸದ್ಯಕ್ಕೆ ನಟಿಯ ಸೀರೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ನಟಿ ಜ್ಯೋತಿ ರೈಯವರು ಬ್ಯುಸಿಯಾಗಿರುವ ನಟಿ. ಜ್ಯೋತಿ ರೈಯವರ ಹಿನ್ನಲೆಯನ್ನು ಗಮನಿಸಿದರೆ, ಬಂದೇ ಬರತಾವ ಕಾಲ ಧಾರಾವಾಹಿಯಿಂದ ಕಿರುತೆರೆಲೋಕದಲ್ಲಿ ಪಯಣ ಶುರು ಮಾಡಿದರು. ನಂತರದ ದಿನಗಳಲ್ಲಿ ಪರಭಾಷೆಯತ್ತ ಮುಖ ಮಾಡಿದರು.

ನಟಿ ಜ್ಯೋತಿ ರೈ , ‘ಬಂದೆ ಬರತಾವ ಕಾಲ, ( Bande Barataava Kala), ಗೆಜ್ಜೆಪೂಜೆ (Gejje Pooje), ಅನುರಾಗ ಸಂಗಮ (Anuaraga Sangama), ಕನ್ಯಾದಾನ (Kanyadana), ಜೋಗುಳ (Jogula), ಲವಲವಿಕೆ (Lavalavike), ಮೂರುಗಂಟು (Murugantu), ಪ್ರೇರಣಾ (Prerana), ಕಿನ್ನರಿ (Kinnari), ಕಸ್ತೂರಿ ನಿವಾಸ ( Kasturi Nivasa) ಸೇರಿದಂತೆ ಹದಿನೈದಕ್ಕೂ ಹೆಚ್ಚು ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ನಟಿ ಜ್ಯೋತಿ ರೈಯವರಿಗೆ ಬೆಳ್ಳಿತೆರೆಯಲ್ಲಿ ಅವಕಾಶಗಳು ಬಂದಿದ್ದು, ನಿಖಿಲ್ ಕುಮಾರಸ್ವಾಮಿ ನಟನೆಯ ‘ಸೀತಾರಾಮ ಕಲ್ಯಾಣ’ (Seetharama Kalyana) ನಟಿಸಿದ್ದಾರೆ. ನಟಿ ಜ್ಯೋತಿ ರೈಯವರು ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದು ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *