ಜನಪ್ರಿಯ ಶೋನಲ್ಲಿ ತನ್ನ ಉಡುಗೆ ಹಾಗೂ ಬೋಲ್ಡ್ ಆಗಿ ಮಾತನಾಡಿದ ಗಮನ ಸೆಳೆದ ಶ್ರೀದೇವಿ ಮಗಳು ಜಾಹ್ನವಿ ಕಪೂರ್, ನಟಿಯ ಹೇಳಿಕೆ ಸಿಕ್ಕಾಪಟ್ಟೆ ವೈರಲ್

ಬಾಲಿವುಡ್ ಜನಪ್ರಿಯ ಶೋಗಳ ಪೈಕಿ ಕರಣ್ ಜೋಹರ್ (Karan Johar) ನಡೆಸಿಕೊಡುವ ಫೇಮಸ್‌ ಟಾಕ್‌ಶೋ ‘ಕಾಫಿ ವಿತ್ ಕರಣ್ ಕೂಡ ಒಂದು. ಇದೀಗ ಸೀಸನ್ 8 ಆರಂಭವಾಗಿದ್ದು ಹಲವಾರು ಸೆಲೆಬ್ರಿಟಿಗಳು ಬಂದು ಶೋವನ್ನು ಚಂದಗಾಣಿಸಿಕೊಟ್ಟಿದ್ದಾರೆ. ಕಾಫಿ ವಿತ್​ ಕರಣ್​ (Koffee With Karan) ಶೋನ ಮುಂಬರುವ ಸಂಚಿಕೆಯಲ್ಲಿ ನಟಿ ಶ್ರೀದೇವಿಯವರ ಪುತ್ರಿಯರಾದ ಖುದ್ದು ನಟಿಯರಾದ ಜಾಹ್ನವಿ ಕಪೂರ್‌ (Janhvi Kapoor) ಮತ್ತು ಖುಷಿ ಕಪೂರ್ (Khushi Kapoor) ಕಾಣಿಸಿಕೊಳ್ಳಲಿದ್ದು ಬೋಲ್ಡ್ ಆಗಿಯೇ ಮಾತನಾಡಿದ್ದಾರೆ.

ತಮಗನಿಸಿದ್ದನ್ನು ನೇರವಾಗಿ ಹೇಳುವ ಜಾಹ್ನವಿ ಕಪೂರ್ ಈ ಶೋನಲ್ಲಿಯು ನೇರವಾಗಿ ಹೇಳಿದ್ದಾರೆ. ಇದೀಗ ನಟಿ ಜಾಹ್ನವಿ ಅವರು ಕರಣ್​ ಜೊತೆ ಮಾತನಾಡಿರುವ ವಿಡಿಯೋಗಳು ವೈರಲ್​ ಆಗುತ್ತಿದ್ದು, ನೆಟ್ಟಿಗರು ಶಾಕ್ ಆಗಿದ್ದಾರೆ. ಈ ವಿಡಿಯೋದಲ್ಲಿ ನಟಿ ಜಾಹ್ನವಿ ಕಪೂರ್ ಅವರು ಹುಡುಗರು ತನ್ನನ್ನು ನೋಡುವಾಗ ಎಲ್ಲಿ ನೋಡುತ್ತಾರೆ ಎನ್ನುವ ಬಗ್ಗೆ ಮಾತನಾಡಿದ್ದಾರೆ.ಈ ಶೋನಲ್ಲಿ ಕರಣ್ ಜೋಹರ್ ಅವರು ಹುಡುಗರು ನಿಮ್ಮನ್ನು ನೋಡುವಾಗ ಎಲ್ಲಿ ನೋಡುತ್ತಾರೆ ಎನ್ನುವ ಪ್ರಶ್ನೆಯನ್ನು ಕೇಳಲಾಗಿದೆ.

ಈ ವೇಳೆಯಲ್ಲಿ ನಟಿ ಜಾಹ್ನವಿ ಕಪೂರ್ ಅವರು, “ಹುಡುಗರೆಲ್ಲಾ ನನ್ನನ್ನು ನೋಡಿದಾಗ ನಿಮ್ಮ ಕಣ್ಣುಗಳು ತುಂಬಾ ಅಟ್ರಾಕ್ಟ್​ ಆಗಿದೆ. ಅದನ್ನೇ ನೋಡುತ್ತೇವೆ ಎನ್ನುತ್ತಾರೆ. ಆದರೆ ನಾನು ಅವರನ್ನು ಸರಿಯಾಗಿ ನೋಡಿದಾಗ ತಿಳಿಯುತ್ತದೆ. ಅವರ ಕಣ್ಣುಗಳು ನನ್ನ ಕಣ್ಣುಗಳನ್ನು ನೋಡುತ್ತಿರುವುದಿಲ್ಲ, ಬದಲಿಗೆ ಅವರ ದೃಷ್ಟಿ ಬೇರೆಲ್ಲೋ ನೆಟ್ಟಿರುತ್ತದೆ” ಎಂದಿದ್ದು, ಈ ಮಾತು ಕೇಳಿ ಕರಣ್​ ಜೋಹರ್​ ಶಾಕ್ ಆಗಿದ್ದು ಮತ್ತೆ ಜೋರಾಗಿಯೇ ನಕ್ಕಿದ್ದಾರೆ.

ಅದಲ್ಲದೇ, ಉಡುಗೆಯ ಬಗ್ಗೆ ಸದಾ ಟ್ರೋಲ್ ಆಗುವ ನಟಿಯು ಕಾಫಿ ವಿಥ್ ಕರಣ್ ಶೋನಲ್ಲಿ ಕೆಂಪು ಡ್ರೆಸ್​ನಲ್ಲಿ ಜಾಹ್ನವಿ ಎಲ್ಲರ ಗಮನ ಸೆಳೆದಿದೆ. ಈ ಶೋಗಾಗಿ ನಟಿ ಜಾಹ್ನವಿ ಕಪೂರ್​ ತೊಟ್ಟ ಬಟ್ಟೆಯ ಬೆಲೆಯ ಕುರಿತು ಚರ್ಚೆಯು ಜೋರಾಗಿಯೇ ನಡೆಯುತ್ತಿದೆ. ನಟಿಯು ಧರಿಸಿದ ಈ ಉಡುಗೆಯ ಬೆಲೆಯು ಬರೋಬ್ಬರಿ 1 ಲಕ್ಷದ 63 ಸಾವಿರ ರೂಪಾಯಿಗಳಂತೆ.

ಈ ಬಟ್ಟೆಯಲ್ಲಿ ನಟಿ ಜಾಹ್ನವಿ ಕಪೂರ್ ಸ್ವಲ್ಪ ಹಾಟ್ ಆಗಿಯೇ ಕಾಣಿಸಿಕೊಂಡಿದ್ದು, ತೊಡೆಯ ಭಾಗಗಳೂ ಕಾಣಿಸಿದ್ದು, ಹೀಗಾಗಿ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಕೆಲವರಂತೂ ಬಟ್ಟೆ ಎಲ್ಲಿದೆ ಎಂದು ಪ್ರಶ್ನಿಸಿದ್ದು, ಇನ್ನು ಕೆಲವರು ಬಟ್ಟೆಯೇ ಇಲ್ಲದಿರೋ ಬಟ್ಟೆಗೆ ಇಷ್ಟು ರೇಟಾ ಎಂದು ಕೇಳಿದ್ದಾರೆ. ಒಟ್ಟಿನಲ್ಲಿ ನಟಿ ಜಾಹ್ನವಿ ಕಪೂರ್ ತನ್ನ ನೇರ ಮಾತು ಹಾಗೂ ಬಟ್ಟೆಯ ವಿಚಾರವಾಗಿ ಮತ್ತೆ ಸುದ್ದಿಯಾಗಿದ್ದಾರೆ.

Leave a Reply

Your email address will not be published. Required fields are marked *