ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ ಅವರ ಜೋತೆ ಆದ ಕಹಿ ಅನುಭವದ ಬಗ್ಗೆ ಮಾತನಾಡಿದ ಕಿರುತೆರೆಯ ನಟಿ ಇಳಾ ವಿಟ್ಲಾ, ನಟಿ ಹೇಳಿದ್ದೇನು ಇಲ್ಲಿದೆ ನೋಡಿ..

ಬಿಗ್ ಬಾಸ್ ಕನ್ನಡ ಹತ್ತನೇ ಆವೃತ್ತಿಯ (Bigg boss Sisan 10) ಶೋಯಶಸ್ವಿಯಾಗಿ ನಡೆಯುತ್ತಿದ್ದು ಆದರೆ ಸ್ಪರ್ಧಿಗಳಿಂದ ಈ ಬಾರಿಯ ಶೋ ಸದ್ದು ಮಾಡುತ್ತಿದೆ . ಅದಲ್ಲದೇ ಬಿಗ್ ಬಾಸ್ ಶೋನಲ್ಲಿ ಜ-ಗಳಗಳು , ಕಿ-ತ್ತಾಟಗಳೇಗಳೇ ಹೆಚ್ಚಾಗಿ ಸೌಂಡ್ ಮಾಡುತ್ತಿದೆ. ಅದರಲ್ಲಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿರುವ ವಿನಯ್ ಗೌಡ (Vinay Gowda) ರವರು ಬೇಡದ ವಿಚಾರಗಳಿಂದ ಸುದ್ದಿಯಾಗುತ್ತಿದ್ದಾರೆ.

ತಾನೇ ಗ್ರೇಟ್, ತಾನು ಮಾಡುವುದೆಲ್ಲವು ಸರಿ, ತಾನೇ ಶಕ್ತಿಶಾಲಿ ಎಂದು ಮೆರೆಯುತ್ತಿದ್ದಾರೆ. ಹೀಗಾಗಿ ಇತರ ಸ್ಪರ್ಧಿಗಳ ಮೇಲೆ ತನ್ನ ವರ್ತನೆಯನ್ನು ತೋರಿಸುತ್ತಿದ್ದಾರೆ. ವಾರದ ಪಂಚಾಯತಿಯನ್ನು ಕಿಚ್ಚ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡರೂ, ಮತ್ತೆ ಆ ರೀತಿ ಮಾಡಲ್ಲ ಎಂದು ಹೇಳಿದರೂ ಕೂಡ ವಿನಯ್ ಅವರ ವರ್ತನೆಯು ಅ-ತೀರೇಕಕ್ಕೆ ಹೋಗುತ್ತಿದೆ. ಆದರೆ ಇದೀಗ ಕಿರುತೆರೆಯ ನಟಿಯೊಬ್ಬರು ವಿನಯ್ ಗೌಡರ ಮೇಲೆ ಗಂ-ಭೀರ ಆ-ರೋಪವನ್ನು ಮಾಡಿದ್ದಾರೆ.

2015ರಲ್ಲಿ ‘ಸೂಪರ್ ಜೋಡಿ’ ರಿಯಾಲಿಟಿ ಶೋ (Super Jodi Reality Show) ನಲ್ಲಿ ವಿನಯ್ ದಂಪತಿಯವರು ಭಾಗಿಯಾಗಿದ್ದರು. ಅದೇ ಶೋನಲ್ಲಿ ಕಿರುತೆರೆಯ ನಟಿ ಇಳಾ ದಂಪತಿಗಳು ಕೂಡ ಭಾಗವಹಿಸಿದ್ದು , ಈ ವೇಳೆ ತಮಗಾದ ಕ-ಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಫೇಸ್ ಬುಕ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಕಿರುತೆರೆಯ ನಟಿ ಇಳಾ ವಿಟ್ಲಾ (ila Vitla) , ನಾನೊಬ್ಬಳು ಕಲಾವಿದೆ. ರಿಯಾಲಿಟಿ ಶೋಗಳನ್ನ ಮಾಡಿದ್ದಕ್ಕೆ ಹಾಗೂ ‘ಬಿಗ್ ಬಾಸ್’ ನೋಡುತ್ತಿರುವುದರಿಂದ ವಿನಯ್ ಅವರನ್ನ ಹತ್ತಿರದಿಂದ ನೋಡಿ, ಅನುಭವಿಸಿರುವುದಕ್ಕೆ ಈ ಪೋಸ್ಟ್ ಮಾಡುತ್ತಿದ್ದೇನೆ.

ವಿನಯ್ ನನಗೇನಾದ್ರೂ ಆದ್ರೆ ನಾನು ಸುಮ್ನೆ ಬಿಡಲ್ಲ ಅಂತಾನೇ ಇರ್ತಾರಲ್ವಾ? ಆದ್ರೆ ಅವರಿಂದ ಬೇರೆಯವರಿಗೆ ತೊಂದರೆ ಆದ್ರೆ ಏನ್ ಮಾಡ್ಬೇಕಿತ್ತು? ಆಟ ಅಂದ್ಮೇಲೆ ಹೆಚ್ಚು ಕಡಿಮೆ ಇದ್ದೇ ಇರುತ್ತದೆ. ಸ್ವಲ್ಪ ಗಾಯಗಳು ಆಗೋದು ಸಾಮಾನ್ಯ. ಬೇರೆಯವರು ಯಕ್ಕುಟೋದ್ರು ಪರ್ವಾಗಿಲ್ಲ. ನಾನು ಗೆಲ್ಲಲೇಬೇಕು ಅನ್ನೋ ಮನಸ್ಥಿತಿ ಇರೋರು ಯಾವತ್ತಿಗೂ ಉದ್ಧಾರ ಆಗಿಲ್ಲ. ಬಿಗ್ ಬಾಸ್ ಶೋ ಎಂದರೆ ನನಗೆ ಮೊದಲಿಂದಲೂ ಇಷ್ಟ.

ಕಿರುತೆರೆ ಅಂತ ತಾತ್ಸಾರ ಮಾಡಿದವರನ್ನು ಕಿರುತೆರೆಗೆ ಕರೆದುಕೊಂಡ ಬಂದಿರುವ ಹೆಮ್ಮೆಯ ಶೋ. ‘ಕಿಚ್ಚ’ ಸುದೀಪ್ ಅವರು ಹೇಳುವ ಬುದ್ಧಿಮಾತು ನಮ್ಮ ಜೀವನಕ್ಕೂ ಅನ್ವಯಿಸುತ್ತದೆ. ಇದೇ ವಿನಯ್ ‘ಸೂಪರ್ ಜೋಡಿ’ ಟೈಮ್‌ನಲ್ಲಿ ನನ್ನ ಕಣ್ಣೆದುರಿಗೆ ಪ್ಲ್ಯಾನ್ ಮಾಡ್ಕೊಂಡು ಬಂದು, ‘ನನಗೇನಾದ್ರೂ ಆದ್ರೆ, ನಾನ್ ಯಾರನ್ನೂ ಸುಮ್ಮನೆ ಬಿಡಲ್ಲ’ ಅಂತ ನಮ್ಮ ಹತ್ತಿರ ಹೇಳುತ್ತ ಹೆ-ದರಿಸುತ್ತಿದ್ದರು.

ಅವತ್ತು ನಮ್ಮೆಜಮಾನರ ಜೊತೆ ವಿನಯ್ ಆಟ ಆಡುವಾಗ, ದವಡೆ ಹಲ್ಲು ಮುರಿದರು. ಅಷ್ಟು ಸಾಲದೆಂಬಂತೆ, ರಿಬ್ ಫ್ರ್ಯಾಕ್ಚರ್ ಮಾಡಿದ್ದರು. ಆದರೂ ಅವರಿಗೆ ನಾವು ಒಂದು ಮಾತನ್ನೂ ಹೇಳಲಿಲ್ಲ. ಶೋ ಮುಗಿದಮೇಲೆ ನೋವು ಜಾಸ್ತಿ ಆಯ್ತು. ಆರು ತಿಂಗಳು ಸರಿಯಾಗಿ ಕೆಲಸ ಮಾಡಕ್ಕಾಗದೇ ಆರ್ಯನ್ ಒದ್ದಾಡಿದ್ದಾರೆ. ಡಾಕ್ಟರ್ ಏನು ಮಾಡಬಾರದು, ರೆಸ್ಟ್ ಮಾಡಿ ಅಂತ ಸೂಚಿಸಿದ್ದರು. ನಾನು ಅವತ್ತು ಎಷ್ಟು ಕಣ್ಣೀರು ಹಾಕಿದ್ದೆ ಅನ್ನೋದು ಭಗವಂತನಿಗೆ ಮಾತ್ರ ಗೊತ್ತು.

ಇದೇ ಪರಿಸ್ಥಿತಿ ಅವರಿಗೆ ಬಂದಿದ್ರೆ ಏನ್ ಮಾಡುತ್ತಿದ್ದರು? ನಾವು ಕಲಾವಿದರು. ಆಗಿ ಹೋಗಿರುವ ಘಟನೆಗಳಿಗೆ ಪ್ರತಿಕ್ರಿಯೆ ಕೊಡುವುದು, ದುರಹಂಕಾರದ ಮಾತುಗಳನ್ನು ಆಡೋದು, ಒಬ್ಬರಿಗೊಬ್ರು ಜಗಳ ಮಾಡ್ಕೊಂಡು ಲೈಫ್ ಹಾಳು ಮಾಡಿಕೊಳ್ಳೋದು ಬೇಡ, ಎಲ್ಲರೂ ಚೆನ್ನಾಗಿರಲಿ ಅಂತ ಸುಮ್ನೆ ಇದ್ದೆ. ಯಾಕೆಂದರೆ, ನಮ್ಮಿಂದಾಗಿ ಎಲ್ಲ ಫ್ಯಾಮಿಲಿಯವರು ಅನುಭವಿಸುವುದು ಒಳ್ಳೆಯ ಲಕ್ಷಣ ಅಲ್ಲ. ಅವರ ಫ್ಯಾಮಿಲಿ ಮಾತ್ರ ಚೆನ್ನಾಗಿರಬೇಕು ಉಳಿದವರು ಹಾಳಾಗಿ ಹೋದರೂ, ಅವರಿಗೆ ತೊಂದರೆ ಇಲ್ಲ ಅನ್ಸುತ್ತೆ.

ಈ ಥರ ಹೆದರಿಸುವವರಿಗೆ ನಂದೊಂದು ಮಾತು. ಒಂದು ವೇಳೆ, ನೀವೇನಾದ್ರೂ ಮಾಡಿದರೆ ಬೇರೆಯವರು ಕಡ್ಲೆಪುರಿ ತಿಂದುಕೊಂಡು ಕೂತಿರ್ತಾರಾ? ಗೊತ್ತಿಲ್ಲದೆ ಆಟದಲ್ಲಿ ಏನೋ ಒಂದಾದರೆ, ಈ ಮನುಷ್ಯನ ಯೋಗ್ಯತೆನೇ ಇಷ್ಟು, ಹಾಳಾಗೋಗ್ಲಿ ಅಂತ ಬಿಡಬಹುದು. ಆಟದಿಂದ ಹೊರಗೆ ಬಂದ ಮೇಲೆ, ‘ನಾ ನಿನ್ನ ಸುಮ್ನೆ ಬಿಡಲ್ಲ’ ಎಂದು ಹೇಳಿದರೆ, ಎದುರು ಇರುವವರು ಕೈಕಟ್ಟಿ ಕೂತ್ಕೊಂಡಿರ್ತಾರಾ? ಇವರೆಲ್ಲ ಲೈಫ್ ಹಾಳು ಮಾಡಿಕೊಳ್ಳುವುದಕ್ಕೆ ಬಂದಿದ್ದಾರಾ? ಅಥವಾ ಜೀವನ ಮಾಡಿಕೊಳ್ಳೋಕೆ ಬಂದಿದ್ದರೋ, ಒಂದು ಅರ್ಥ ಆಗುತ್ತಿಲ್ಲ.

ಫ್ಯಾಮಿಲಿ ಮುಖ್ಯ ಅಂತ 50 ಸಲ ಹೇಳ್ತಾರಲ್ಲ, ಒಂದು ವೇಳೆ ನೀವೇನಾದರೂ ಮಾಡಿದ್ರಿ ಅಂತ ಇಟ್ಕೊಳಿ, ಎದರುಗಡೆ ಇರುವವರು ನಿಮ್ಮನ್ನು ಏನೋ ಒಂದು ಮಾಡ್ತಾರೆ. ಅಲ್ಲಿಗೆ ಯಾರಿಂದ ಯಾರ ಫ್ಯಾಮಿಲಿ ಹಾಳ್ ಆಯ್ತು? ಅಷ್ಟು ತಲೆ ಇಲ್ವಾ ಇವರಿಗೆ ಕರ್ಮ. ಎಲ್ಲಾ ಆದಮೇಲೆ ಏನು ಗೊತ್ತಿಲ್ಲದಂಗೆ ‘ಸಾರಿ ಸರ್, ಸಾರಿ ಸರ್’ ಅಂತ ಹೇಳುವುದು ಅಷ್ಟೇ. ನಾನು ಬದಲಾಗಿದ್ದಾರೆ ಅನ್ಕೊಂಡಿದ್ದೆ. ಯಾಕೆಂದರೆ, ಒಬ್ಬ ಮನುಷ್ಯ ಅಂದಮೇಲೆ ತಪ್ಪು ಮಾಡೋದು ಸಹಜ. ಆದರೆ ಇವರು ಬದಲಾಗಲ್ಲ.

‘ಬಿಗ್ ಬಾಸ್’ ಅಂಥ ಶೋನಲ್ಲೂ ಕಂಟ್ರೋಲ್ ಇಲ್ಲದೇ ಮಾತನಾಡುತ್ತಿದ್ದಾರೆ ಅಂದ್ರೆ, ಹೊರಗಡೆ ಹೇಗಿರಬಹುದು? ಭಗವಂತ ಇನ್ನಾದರೂ ಒಳ್ಳೆಯ ಬುದ್ಧಿ ಕೊಡಲಿ. ನನ್ ಜೀವನದಲ್ಲಿ ನಾನು ಯಾರಿಗೂ ಹೆದರೋ ಮಾತಿಲ್ಲ. ನಾನು ಯಾರ ಸುದ್ದಿಗೂ ಹೋಗಲ್ಲ. ಯಾಕೆಂದರೆ, ಎಲ್ಲರ ಕುಟುಂಬವು ಚೆನ್ನಾಗಿರಬೇಕು. ನಾವು ಹೋಗುವಾಗ ಏನು ತೆಗೆದುಕೊಂಡು ಹೋಗುವುದಿಲ್ಲ ಅಂತ ತಿಳಿದುಕೊಂಡಿರುವವಳು ನಾನು.

ಬದುಕಿರುವಷ್ಟು ದಿನ ಪ್ರೀತಿ, ವಿಶ್ವಾಸ, ನಂಬಿಕೆಯಿಂದ ಜೀವನ ಮಾಡಬೇಕು. ಕೆಟ್ಟ ಕೆಲಸ ಮಾಡಿ ನೂರು ದಿನ ಬದುಕುವುದಕ್ಕಿಂತ, ಒಳ್ಳೆಯ ಕೆಲಸ ಮಾಡಿ ಒಂದು ದಿನ ಬದುಕುವುದು ಗ್ರೇಟ್. ಮನಸ್ಸಿನಲ್ಲಿ ಇರುವುದನ್ನು ಹೇಳಲೇಬೇಕು, ಆಗಲೇ ನನಗೆ ಸಮಾಧಾನ..’ ಎಂದು ಬರೆದುಕೊಂಡಿದ್ದಾರೆ. ಸದ್ಯಕ್ಕೆ ನಟಿ ಇಳಾರವರ ಪೋಸ್ಟ್ ವೊಂದು ಎಲ್ಲರ ಗಮನ ಸೆಳೆಯುತ್ತಿದೆ.

Leave a Reply

Your email address will not be published. Required fields are marked *