ಬಣ್ಣದ ಲೋಕದ ಬೆಡಗಿ ಹಿತಾ ಚಂದ್ರಶೇಖರ್ ಅವರ ಮುದ್ದಾದ ಕುಟುಂಬ ಹೇಗಿದೆ ಗೊತ್ತಾ?

ಕನ್ನಡ ಸಿನಿಮಾರಂಗ ಹಾಗೂ ಕಿರುತೆರೆ ಲೋಕದಲ್ಲಿ ಹಾಸ್ಯ ನಟರಾಗಿ ಗುರುತಿಸಿಕೊಂಡವರಲ್ಲಿ ಸಿಹಿಕಹಿ ಚಂದ್ರು (Sihi Kahi Chandru) ಕೂಡ ಒಬ್ಬರು. ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಸಿಹಿ ಕಹಿ (Sihi Kahi) ಎನ್ನುವ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಈ ಧಾರಾವಾಹಿಯೂ ಚಂದ್ರ ಶೇಖರ್ ಪಾಲಿಗೆ ಜನಪ್ರಿಯತೆ ತಂದುಕೊಟ್ಟಿತು. ಇತ್ತ ನಟಿ ಗೀತಾರವರನ್ನು ಮದುವೆಯಾಗಿದ್ದಾರೆ. ಮದುವೆಯಾಗಿರುವ ಈ ದಂಪತಿಗಳಿಗೆ ಹಿತಾ ಚಂದ್ರಶೇಖರ್ ( Hita Chandrashekhar) ಮತ್ತು ಕೃಷಿ ಚಂದ್ರಶೇಖರ್ (Krushi Chandrashekhar) ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ನಟಿ ಹಿತಾ ಚಂದ್ರಶೇಖರ್ ಅವರಿಗೆ ಈಗಾಗಲೇ ಮದುವೆಯಾಗಿದೆ. ಇದೀಗ ಹಿತಾ ಚಂದ್ರಶೇಖರ್ ಅವರ ಫೋಟೋವೊಂದು ವೈರಲ್ ಆಗಿವೆ. ಈ ಫೋಟೋದಲ್ಲಿ ಸಿಹಿಕಹಿ ಚಂದ್ರಶೇಖರ್ ಹಾಗೂ ಸಿಹಿಕಹಿ ಗೀತಾ ಅವರ ಮಗಳು ಹಿತಾ ಚಂದ್ರಶೇಖರ್ ಹಾಗೂ ‘ಹಾಗೆ ಸುಮ್ಮನೆ’ (Hage Summane) ಸಿನಿಮಾ ಖ್ಯಾತಿಯ ನಟ ಕಿರಣ್ (Kiran) ಜೊತೆಯಾಗಿ ಕ್ಯಾಮೆರಾಗೆಗೆ ಪೋಸ್ ನೀಡಿದ್ದಾರೆ. ಈ ಫೋಟೋಗೆ ನೂರಕ್ಕೂ ಅಧಿಕ ವ್ಯೂಸ್ ಕಂಡಿವೆ.

ಒಂದೆರಡು ವರ್ಷಗಳ ಹಿಂದೆ, ಹಿತಾ ಚಂದ್ರಶೇಖರ್ ಹಾಗೂ ‘ಹಾಗೆ ಸುಮ್ಮನೆ’ ಸಿನಿಮಾ ಖ್ಯಾತಿಯ ನಟ ಕಿರಣ್ ಶ್ರೀನಿವಾಸ್ (Kiran Shreenivas) ಸಪ್ತಪದಿ ತುಳಿದಿದ್ದರು. 2019 ರ ಮೇ ತಿಂಗಳಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಗ್ರಾಂಡ್ ಆಗಿ ಅಲ್ಲದೆ ಸರಳವಾಗಿ ಬಂಧು ಮಿತ್ರರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡಿದ್ದರು. ಈ ಜೋಡಿಯ ನಟ ಯೋಗಿ, ನಿರ್ದೇಶಕರಾದ ನಾಗಾಭರಣ, ಪನ್ನಗ ಭರಣ, ಪಣಿ ರಾಮಚಂದ್ರ, ಮುಖ್ಯಮಂತ್ರಿ ಚಂದ್ರ, ಟಿ.ಎನ್. ಸೀತಾರಾಮ್ ಸೇರಿ ಅನೇಕ ಗಣ್ಯರು ಭಾಗಿಯಾಗಿದ್ದರು.

ಮದುವೆ ಬಳಿಕ ಒಂದು ವಾರ ಬ್ರೇಕ್ ತೆಗೆದುಕೊಂಡು ದ್ವೀಪ ರಾಷ್ಟ್ರ ಸೇಶೆಲ್ಸ್‌ ನಲ್ಲಿ ಹನಿಮೂನ್ ಮುಗಿಸಿಕೊಂಡಿದ್ದರು. ನಟಿ ಹಿತಾ ಚಂದ್ರಶೇಖರ್‌ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಪತಿಯೊಟ್ಟಿಗೆ ಮುಂಬೈನಲ್ಲಿ ನೆಲೆಸಿದ್ದು, ನಟಿಯು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈ ಹಿಂದೆ ತಮ್ಮ ಮನೆಗೆ ಹೊಸ ಅತಿಥಿ ಆಗಮನದ ಫೋಟೋ ಶೇರ್ ಮಾಡಿಕೊಂಡಿದ್ದರು. ಹಿತಾ ಮತ್ತು ಕಿರಣ್‌ ನಾಯಿ ಮರಿಯನ್ನು ದತ್ತು ಪಡೆದುಕೊಂಡಿದ್ದರು.

ಈ ಬಗ್ಗೆ ನಟ ಕಿರಣ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, “ಗೋಲಿ ಎಂಬ ಹೆಸರಿಟ್ಟಿದ್ದು ಆಕೆಗೆ ನಾಚಿಕೆ ಜಾಸ್ತಿ ಆಹಾರವನ್ನು ತುಂಬಾ ಇಷ್ಟ ಪಡುತ್ತಾಳೆ. ಮನೆಯಲ್ಲಿ ಎಲ್ಲಾ ಕಡೆ ಸುಸು ಮಾಡುತ್ತಾಳೆ, ತುಂಬಾ ಮಲಗುತ್ತಾಳೆ. ಭಾಗಶಃ ಕುರುಡಿಯಾಗಿದ್ದು ನಾವು ಕಣ್ಣಿಗೆ ಡ್ರಾಪ್ಸ್‌ ಹಾಕುವುದು ಇಷ್ಟವಿಲ್ಲ ಆದರೆ ತಿನ್ನಲು ಏನಾದರೂ ಸಿಗುತ್ತದೆ ಎಂದು ಹಾಕಿಸಿಕೊಳ್ಳುತ್ತಾಳೆ’ ಎಂದಿದ್ದರು.

ಸಿನಿಮಾ ಮತ್ತು ಜಾಹೀರಾತುಗಳಲ್ಲಿ ಮಾತ್ರವಲ್ಲದೇ ಕ್ರಿಕೆಟ್ ನಿರೂಪಕಿಯಾಗಿ ಫೇಮಸ್ ಆಗಿದ್ದಾರೆ. 1/4 ಕೆಜಿ ಪ್ರೀತಿ (1/4 Kg Preethi) ಎಂಬ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಬಳಿಕ ಇವರಿಗೆ ಅವಕಾಶಗಳು ಬಂದವು. ಒಂದು ಶಾರ್ಟ್ (Ondu Shirt) ಸಿನಿಮಾದಲ್ಲಿ ನಟಿಸಿದ್ದಾರೆ. ಅದಲ್ಲದೇ, ‘ಡ್ಯಾನ್ಸಿಂಗ್ ಸ್ಟಾರ್ ಸೀಸನ್ 3’ (Dancing Star Sisan 3) ರಿಯಾಲಿಟಿ ಶೋನಲ್ಲೂ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ. ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಹಿತಾ ಚಂದ್ರಶೇಖರ್ ಅವರಿಗೆ ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ಗಳಿದ್ದಾರೆ.

Leave a Reply

Your email address will not be published. Required fields are marked *