ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ಬಹುಭಾಷಾ ನಟಿ ಹರ್ಷಿಕಾ ಪೊಣಚ್ಚ, ಹುಡುಗ ಯಾರು ಗೊತ್ತಾ? ಕೊನೆಗೂ ಕನ್ಫಮ೯ ಆಯ್ತು!!

ಕನ್ನಡ ಸೇರಿದಂತೆ ಪರಭಾಷೆಯ ಚಿತ್ರಗಳಲ್ಲಿ ನಟಿಸಿರುವ ನಟಿ ಹರ್ಷಿಕಾ ಪೊಣಚ್ಚ (Actress Harshika Ponaccha) ಬಹುಬೇಡಿಕೆ ಯನ್ನು ಹೊಂದಿದ್ದಾರೆ. ಹರ್ಷಿಕಾ ಪೊಣಚ್ಚ ಕೊಂಕಣಿ (Konkani), ಕೊಡವ (Kodava), ತೆಲುಗು (Telugu), ಮಲಯಾಳಂ (Malayalam) ಮತ್ತು ಭೋಜಪುರಿ (Bhojapuri) ಚಿತ್ರಗಳಲ್ಲಿ ನಟಿಸಿ ಸಿನಿ ಪ್ರೇಕ್ಷಕರ ಮನಸ್ಸು ಗೆದ್ದುಕೊಂಡಿದ್ದಾರೆ. ಇದೀಗ ತನ್ನ ಫ್ಯಾನ್ಸ್ ಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

ಸದ್ದಿಲ್ಲದೇ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.ಹರ್ಷಿಕಾ ಪೂಣಚ್ಚನವರು ನಟ ಭುವನ್ ಪೊನ್ನಣ್ಣನವರನ್ನು ಮದುವೆಯಾಗಲಿದ್ದಾರೆ. ಆಗಸ್ಟ್ 24 ರಂದು ಕೊಡವರ ಸಂಪ್ರದಾಯದಂತೆ, ಕೊಡಗಿನಲ್ಲಿ ಮದುವೆ ನಡೆಯಲಿದೆ. ಈಗಾಗಲೇ ಕೊಡಗಿನ ಇಗ್ಗುತ್ತಪ್ಪ ದೇವಾಲಯದಲ್ಲಿ ಲಗ್ನಪತ್ರಿಕೆ ಕಾರ್ಯವು ಸರಳವಾಗಿ ನೆರವೇರಿದೆ. ಲಗ್ನ ಪತ್ರಿಕೆ ಕಾರ್ಯದಲ್ಲಿ ಎರಡೂ ಕುಟುಂಬದವರು ಭಾಗಿಯಾಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿ ಹರ್ಷಿಕಾ ಪೊಣಚ್ ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಸೆಲೆಬ್ರೇಶನ್ ಮಾಡಿದ್ದರು. ಕೊಡಗಿನ ಬೆಡಗಿ ಬರ್ತ್ಡೇ ಸೆಲೆಬ್ರೇಶನ್ ನಲ್ಲಿ ದಿವ್ಯಾ ಉರುಡುಗ (Divya Uruduga), ಅನು ಪ್ರಭಾಕರ್ ( Anu Prabhakar) ಹಾಗೂ ಐಂದ್ರಿತಾ ರೇ (Indrita Ray) ಸೇರಿದಂತೆ ಇನ್ನಿತ್ತರರು ಭಾಗಿಯಾಗಿದ್ದರು. ಪಿಂಕ್ ಬಣ್ಣದ ಉಡುಗೆ ತೊಟ್ಟಿದ್ದ ನಟಿ ಹರ್ಷಿಕಾರವರ ಬರ್ತ್ಡೇ ಸೆಲೆಬ್ರೇಶನ್ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ನಟಿ ಹರ್ಷಿಕಾ ಪೊಣಚ್ಚರವರ ಹಿನ್ನಲೆ ಗಮನಿಸುವುದಾದರೆ, 2008 ರಲ್ಲಿ ಕನ್ನಡದ ಪಿಯುಸಿ (PUC) ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟರು. ಆದಾದ ಬಳಿಕ, 2009ರಲ್ಲಿ ಪೊನ್ನಮ್ಮ ಎಂಬ ಕೊಡವ ಚಿತ್ರ, ಆ ವರ್ಷದಲ್ಲೇ ಕಜಾರ್ ಎಂಬ ಕೊಂಕಣಿ ಚಿತ್ರ, ಜೊತೆಗೆ ಎಡುಕೊಂಡಲವಾಡ ವೆಂಕಟರಮಣ ಅಂದರು ಬಾಗುಂಡಲಿ ಎಂಬ ತೆಲುಗು ಚಿತ್ರದಲ್ಲಿ ನಟಿಸಿದರು. ಆದಾದ ಬಳಿಕ 2010ರಲ್ಲಿ ಸುಗ್ರೀವ (Sugriva)ಎಂಬ ಕನ್ನಡ ಚಿತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಂಡರು.

ಆದಾದ ಬಳಿಕ ಹ್ಯಾಟ್ರಿಕ್ ಶಿವರಾಜ್ ಕುಮಾರ್ ಅವರ ಜೊತೆಗೆ ತಮಸ್ಸು (Tamassu) ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಿಕೊಂಡರು. 2010 ರಲ್ಲಿ, ಪುನೀತ್ ರಾಜ್‌ಕುಮಾರ್ ಅವರ ಜೊತೆಗೆ ಜಾಕಿ (Jaki) ಸಿನಿಮಾದಲ್ಲಿ ಹರ್ಷಿಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಸಾಲು ಸಾಲು ಸಿನಿಮಾಗಳನ್ನು ನಟಿಸಿದ ನಟಿಗೆ ಅವಕಾಶಗಳು ಬರತೊಡಗಿದವು. ಸದ್ಯಕ್ಕೆ ವೃತ್ತಿ ಜೀವನದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *