ಸ್ಯಾಂಡಲ್ ವುಡ್ ನಲ್ಲಿ ಪ್ರೇಮ ವಿವಾಹಗಳು ಸರ್ವೇ ಸಾಮಾನ್ಯವಾಗಿದೆ. ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿರುವ ಅನೇಕ ನಟ ನಟಿಯರು ಪ್ರೀತಿಸಿ ಮದುವೆಯಾಗಿ ಸುಖವಾಗಿ ಸಂಸಾರ ಮಾಡುತ್ತಿದ್ದಾರೆ. ಇದೀಗ ಸ್ಯಾಂಡಲ್ ವುಡ್ ನ ಮತ್ತೊಂದು ಜೋಡಿಯಾಗಿರುವ ಹರ್ಷಿಕಾ ಪೂಣಚ್ಚ (Harshika Ponaccha) ಮತ್ತು ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ (Bhuvan Ponanna) ಸೇರಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ(harshika poonacha) ಹಾಗೂ ಭುವನ್ ಪೊನ್ನಣ್ಣ(bhuvan ponnanna) ಅವರು ಆಗಸ್ಟ್ 24ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹರ್ಷಿಕಾ ಪೂಣಚ್ಚ ಅವರು ಸುಂದರವಾದ ರೆಡ್ ಸೀರೆಯಲ್ಲಿ ಮಿಂಚಿದ್ದು, ಭುವನ್ ಕೂಡ ಬಿಳಿ ಬಣ್ಣದ ಕೊಡವ ಉಡುಗೆಯಲ್ಲಿ ಗಮನ ಸೆಳೆದಿದ್ದರು.


ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೂನ್ನಣ್ಣ ಮದುವೆಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿಎಸ್ ಬೊಮ್ಮಾಯಿ, ನಟ ಗೋಲ್ಡನ್ ಸ್ಟಾರ್ ಗಣೇಶ್, ಪೂಜಾಗಾಂಧಿ, ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಅನೇಕರು ಭಾಗಿಯಾಗಿ ಶುಭಾಶಯಗಳನ್ನು ಕೋರಿದ್ದರು. ಆದರೆ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ನಟಿ ಹರ್ಷಿಕಾ ಪೂಣಚ್ಚರವರಿಗೆ ದುಬಾರಿ ಬೆಲೆಯ ನೆಕ್ಲೆಸ್ ಅನ್ನು ಉಡುಗೊರೆಯಾಗಿ ನೀಡಿದ್ದರು.
ನಟಿ ಹರ್ಷಿಕಾ ಪೂಣಚ್ಚ (Harshika Ponaccha) ಮದುವೆಯ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದು, ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ. ” ಶ್ರೀ ಮತ್ತು ಶ್ರೀಮತಿ ಉಲಿಯದ ಭುವನ್ ಪೊನ್ನಣ್ಣ ಎಂದೆಂದಿಗೂ. ವರ್ಷಗಳ ಕಾಲ ಸ್ನೇಹಿತರಾಗಿದ್ದು, ನನ್ನ ಆತ್ಮೀಯ ಸ್ನೇಹಿತನನ್ನು ಮದುವೆಯಾಗುವುದಕ್ಕೆ ಇನ್ನು ಕಾಯಲು ಸಾಧ್ಯವಾಗಲಿಲ್ಲ.


ನನ್ನ ಮದುವೆ ಹೇಗಿರಬೇಕು ಎಂದು ಯಾವಾಗಲೂ ಕನಸು ಕಂಡಿದೆ. ಇದಕ್ಕಿಂತ ಸುಂದರವಾದ ಮದುವೆಯನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ನನ್ನ ಜೀವನದ ಈ ಸುಂದರ ಮತ್ತು ಪ್ರಮುಖ ಘಟನೆಯನ್ನು ನಾನು ಇಷ್ಟಪಟ್ಟ ರೀತಿಯಲ್ಲಿ ಮಾಡಿರುವುದಕ್ಕೆ ನನ್ನ ಇಡೀ ತಂಡಕ್ಕೆ ಧನ್ಯವಾದಗಳು” ಎಂದು ನಟಿ ಹರ್ಷಿಕಾ ಬರೆದುಕೊಂಡಿದ್ದಾರೆ. ನಟಿಯ ಈ ಪೋಸ್ಟ್ ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಮಾತನಾಡಿದ್ದ ಹರ್ಷಿಕಾ (Harshika), ಒಳ್ಳೆಯದ್ದು, ಕೆಟ್ಟದ್ದು ಎಲ್ಲವನ್ನು ಭುವನ್ ನಲ್ಲಿ ಅರ್ಥ ಮಾಡಿಕೊಂಡಿದ್ದೇನೆ. ಗೆಳೆಯನನ್ನೇ ಮದುವೆಯಾಗಿದ್ದು ತುಂಬಾ ಖುಷಿ ಕೊಟ್ಟಿದೆ. ಇನ್ಮೇಲೆ ನಾನು ಅವರ ಕುಟುಂಬದಲ್ಲಿ ಒಬ್ಬಳು. ಒಳ್ಳೆಯ ಅತ್ತೆ, ಮಾವ ಸಿಕ್ಕಿದ್ದಾರೆ. ಈಗ ಭುವನ್ ನನ್ನ ಪ್ರೊಡ್ಯೂಸರ್ ಮಾಡಿದ್ದಾರೆ. ಸದ್ಯ ಆ ಕೆಲಸ ನಿರ್ವಹಿಸುತ್ತೇನೆ. ಸಿನಿಮಾ ರಂಗವನ್ನು ಖಂಡಿತ ಬಿಡಲ್ಲ. ಅದರ ಜೊತೆಗೆ ನಮ್ಮ ಸಮಾಜಮುಖಿ ಕೆಲಸಗಳು ನಿಲ್ಲಲ್ಲ ಪ್ರತಿ ತಂದೆಗೂ ಒಂದು ಆಸೆ ಇರುತ್ತೆ. ನಮ್ಮ ತಂದೆಗೂ ಆಸೆ ಇತ್ತು. ನಮ್ಮ ತಂದೆಯನ್ನು ಈ ಸಂದರ್ಭದಲ್ಲಿ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದಿದ್ದರು.
ಆ ಬಳಿಕ ಭುವನ್ ಪೊನ್ನಣ್ಣ ಕೂಡ ಮಾತನಾಡಿದ್ದು , “ನಾವು ಕರೆದ ಪ್ರತಿಯೊಬ್ಬರು ಮದುವೆಗೆ ಬಂದಿದ್ರು ಎಂದಿದ್ದಾರೆ. ನಾವು ಇಲ್ಲಿವರೆಗೂ ಏನೆಲ್ಲಾ ಕೆಲಸ ಮಾಡಿಕೊಂಡು ಬಂದಿದ್ದೇವೋ ಅದನ್ನೆಲ್ಲ ಮುಂದುವರೆಸುತ್ತೇವೆ. ಕೊಡಗಿನಲ್ಲಿ ಮದುವೆ ಅನ್ನೋದು ತುಂಬಾ ಡಿಫ್ರೆಂಟ್ ಆಗಿರುತ್ತೆ ಅಂತ ಎಲ್ಲರೂ ಬಂದ್ರು. ಯಡಿಯೂರಪ್ಪ ಸರ್, ನಿರಾಣಿ ಸರ್ ಬಂದಿದ್ದು ತುಂಬಾ ಖುಷಿ ಆಯ್ತು” ಎಂದಿದ್ದರು. ಒಟ್ಟಿನಲ್ಲಿ ನಟಿ ಹರ್ಷಿಕಾ ಹಾಗೂ ಭುವನ್ ಅವರ ಸುಂದರ ಕ್ಷಣದ ಫೋಟೋಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
