ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ(Harshika Poonachcha)-ಭುವನ್ (Bhuvan) ಮದುವೆ (Wedding) ಸಂಭ್ರಮ ಮನೆ ಮಾಡಿದ್ದು, ಕಳೆದ ಕೆಲವು ತಿಂಗಳಿನಿಂದಲೇ ಮದುವೆ ತಯಾರಿಯು ನಡೆಯುತ್ತಿತ್ತು. ಆಗಸ್ಟ್ 24ರಂದು (ಇಂದು) ಕೊಡವ (Kodava) ಪದ್ಧತಿಯಂತೆ ಭುವನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಮದುವೆಗೂ ಮುನ್ನ ತಯಾರಿ ಮತ್ತು ಪೂಜಾ ವಿಧಾನಗಳು ನಟಿಯ ಮನೆಯಲ್ಲಿ ಜರಗುತ್ತಿವೆ. ಮದುವೆಗೂ ಮೊದಲು ಹರ್ಷಿಕಾ ಮತ್ತು ಭುವನ್ ಗೃಹಪ್ರವೇಶ (House Warming Ceremony) ಮಾಡಿದ್ದಾರೆ. ಹೌದು, ಭುವನ್ ಅವರು ಕೊಡಗಿನಲ್ಲಿ ಹೊಸ ಮನೆ ಕಟ್ಟಿಸಿದ್ದಾರೆ. ನಟಿ ಹರ್ಷಿಕಾ ಪೂಣಚ್ಚರವರು ಕೊಡವ ಸಂಪ್ರದಾಯದಂತೆ ದೀಪ ಹಿಡಿದು ಹೊಸ ಮನೆಗೆ ಹರ್ಷಿಕಾ ಪ್ರವೇಶ ಮಾಡಿದ್ದಾರೆ.

ನಿನ್ನೆ (ಆಗಸ್ಟ್ 23) ಸಂಜೆ 7 ಗಂಟೆಗೆ ಊರ್ಕುಡುವ ಕಾರ್ಯಕ್ರಮವನ್ನೂ ಆಯೋಜನೆ ಮಾಡಲಾಗಿತ್ತು. ಈ ವೇಳೆಯಲ್ಲಿ ಮದುವೆ ಮಂಟಪಕ್ಕೆ ಹರ್ಷಿಕಾ (Harshika) ಹಾಗೂ ಭುವನ್ (Bhuvan) ಅವರು ಮದುಮಕ್ಕಳ ಉಡುಗೆ ತೊಡುಗೆಯಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಅದಲ್ಲದೇ ನಟಿ ಹರ್ಷಿಕಾ ಪೂಣಚ್ಚರವರ ಮೆಹಂದಿ ಕಾರ್ಯಕ್ರಮ (Mehandi Function) ವು ಅದ್ದೂರಿಯಾಗಿ ನಡೆದಿದೆ.

ಕೈ ತುಂಬಾ ಮೆಹೆಂದಿ ಹಾಕಿಕೊಂಡು ಕ್ಯಾಮೆರಾಗೆ ಪೋಸ್ ನೀಡಿರುವ ಫೋಟೋಗಳು ವೈರಲ್ ಆಗಿವೆ. ಈ ಫೋಟೋದಲ್ಲಿ ನಟಿಯು ಮನೆಯ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು ಎರಡು ಕೈಗೆ ಮೆಹೆಂದಿ ಹಾಕಿದ್ದು ಕ್ಯಾಮೆರಾಗೆ ಎರಡು ಕೈಯನ್ನು ತೋರಿಸಿದ್ದಾರೆ. ನಟಿಯ ಈ ಫೋಟೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹರ್ಷಿಕಾ-ಭುವನ್ 12 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಲು ಸಜ್ಜಾಗಿದ್ದಾರೆ. ಇಂದು ಹೊಸ ಬದುಕಿಗೆ ಕಾಲಿಡುತ್ತಿರುವ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಅವರ ಮದುವೆಗೆ ಸ್ಯಾಂಡಲ್ ವುಡ್ ಗಣ್ಯರು ಸಾಕ್ಷಿಯಾಗಲಿದ್ದಾರೆ. ತಮ್ಮಿಬ್ಬರ ಪ್ರೀತಿಯನ್ನು ಎಲ್ಲಿಯೂ ರಿವೀಲ್ ಮಾಡದ ಜೋಡಿಯು ಗುಟ್ಟಾಗಿ ಕಳೆದ ಹನ್ನೆರಡು ವರ್ಷಗಳಿಂದ ಪ್ರೀತಿಸುತ್ತಿದ್ದರು.
ಫ್ಯಾಶನ್ ಶೋ (Fashion Show) ವೊಂದರಲ್ಲಿ ಭುವನ್- ಹರ್ಷಿಕಾ ಭೇಟಿಯಾಗಿದ್ದು, ಆ ಪರಿಚಯವೇ ಪ್ರೀತಿಯಾಗಿ ಬದಲಾಗಿತ್ತು. ಭುವನ್, ಹರ್ಷಿಕಾಗೆ ಮೊದಲು ಪ್ರಪೋಸ್ ಮಾಡಿ ಒಂದೇ ದಿನದಲ್ಲಿ ಉತ್ತರ ಹೇಳಬೇಕು ಅಂತಾ ಟೈಂ ಫಿಕ್ಸ್ ಮಾಡಿದ್ದರಂತೆ. ಹೀಗಿರುವಾಗ ಫಸ್ಟ್ ಇಂಪ್ರೆಶನ್‌ನಲ್ಲೇ ಭುವನ್ ಇಷ್ಟವಾದ ಕಾರಣ ಒಂದೇ ದಿನದಲ್ಲಿ ಭುವನ್ ಪ್ರಪೋಸಲ್‌ಗೆ ಹರ್ಷಿಕಾ ಸಮ್ಮತಿ ನೀಡಿದ್ದರಂತೆ.

ಕುಟುಂಬದವರಿಗೂ ಕೂಡ ಭುವನ್ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದ ಕಾರಣ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ದರಂತೆ. ಕೊನೆಗೂ ಹನ್ನೆರಡು ವರ್ಷದ ಪ್ರೀತಿಯು ಮದುವೆಗೆ ಬಂದು ನಿಂತಿದ್ದು, ಇಂದಿನಿಂದ ಈ ಜೋಡಿ ದಾಂಪತ್ಯಜೀವನವನ್ನು ಆರಂಭಿಸುತ್ತಿದ್ದಾರೆ.
