ಕೊಡಗಿನ ಬೆಡಗಿ ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೊಣಚ್ಚ (Harshika Ponaccha) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ನಟನೆಯ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿ ಹರ್ಷಿಕಾ ಪೊಣಚ್ಚ ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಸುದ್ದಿಯಾಗುತ್ತಿರುತ್ತಾರೆ. ಇದೀಗ ನಟಿಹರ್ಷಿಕಾ ಪೊಣಚ್ಚ ಮತ್ತೆ ಸುದ್ದಿಯಲ್ಲಿದ್ದು, ಹರ್ಷಿಕಾ ಪೂಣಚ್ಚ ಅವರು ಇತ್ತೀಚೆಗಷ್ಟೇ ಬಾಲಿ (Baali) ಗೆ ಸ್ನೇಹಿತೆಯರ ಜೊತೆಯಲ್ಲಿ ಟ್ರಿಪ್ ಹೋಗಿದ್ದಾರೆ.
ಬಾಲಿ ಟ್ರಿಪ್ ಅನ್ನು ಸ್ನೇಹಿತೆಯರ ಜೊತೆಗೆ ಎಂಜಾಯ್ ಮಾಡಿದ್ದಾರೆ. ಹೌದು, ಸ್ನೇಹಿತೆಯರ ಜೊತೆಗೆ ಟ್ರಕ್ಕಿಂಗ್ ಹೋಗಿರುವ ಚಂದದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನಟಿ ಟ್ರಕ್ಕಿಂಗ್ (Trucking) ಹೋಗಿದ್ದು ವೈಟ್ ಕಲರ್ ಟೀಶರ್ಟ್ ಹಾಗೂ ಬ್ಲೂ ಪ್ಯಾಂಟ್ ಧರಿಸಿದ್ದು, ಗಾಗಲ್ಸ್ ಧರಿಸಿ ಕ್ಯಾಪ್ ಹಾಕಿಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋದಲ್ಲಿ ಬೆಟ್ಟದ ತುದಿಯಲ್ಲಿ ನಿಂತು ಸುಂದರ ಸ್ಥಳಗಳಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಈ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, “ಸ್ವಲ್ಪ ಸಾಹಸ, ಸ್ವಲ್ಪ ಮಸ್ತಿ. ಇಂಡೋನೇಷ್ಯಾವನ್ನು ಜೀವನದಲ್ಲಿ ಒಮ್ಮೆಯಾದರೂ ನೀವು ನೋಡಬೇಕು. ಟ್ರಕ್ಕಿಂಗ್ ತುಂಬಾ ಸವಾಲುಕರವಾಗಿತ್ತು. ಆದರೆ ನಾವು ಈ ಟ್ರಕ್ಕಿಂಗ್ ಮುಗಿಸಿದೆವು. ಈ ಟ್ರಕ್ಕಿಂಗ್ ಮಾಡಿದವರು ಯಾರಾದರೂ ಇದ್ದೀರಾ? ನೀವಿದನ್ನು ಎಷ್ಟು ರೇಟ್ ಮಾಡುತ್ತೀರಿ, ನನಗೆ ತಿಳಿಸಿ” ಎಂದು ಬರೆದುಕೊಂಡಿದ್ದಾರೆ. ಕೊಡಗಿನ ಬೆಡಗಿಯ ಫೋಟೋಗೆ ಎಂಟು ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದೆ.
ಕನ್ನಡ ಸೇರಿದಂತೆ ಪರಭಾಷೆಯ ಚಿತ್ರಗಳಲ್ಲಿ ನಟಿಸಿರುವ ನಟಿ ಹರ್ಷಿಕಾ ಪೊಣಚ್ಚ (Actress Harshika Ponaccha) ಬಹುಬೇಡಿಕೆ ಯನ್ನು ಹೊಂದಿದ್ದಾರೆ. ಹರ್ಷಿಕಾ ಪೊಣಚ್ಚ ಕೊಂಕಣಿ (Konkani), ಕೊಡವ (Kodava), ತೆಲುಗು (Telugu), ಮಲಯಾಳಂ (Malayalam) ಮತ್ತು ಭೋಜಪುರಿ (Bhojapuri) ಸಿನಿಮಾಗಳಲ್ಲಿ ನಟಿಸಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ.
ಇತ್ತೀಚೆಗಷ್ಟೇ ಸ್ಯಾಂಡಲ್‌ವುಡ್ ನಟಿ, ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ (Harshika Poonacha Wedding) ತಮ್ಮ ಅಭಿಮಾನಿಗಳಿಗೆ ಮದುವೆ ವಿಚಾರವಾಗಿ ಸಿಹಿ ಸುದ್ದಿ ನೀಡಿದ್ದಾರೆ. ಸದ್ಯದಲ್ಲೇ ತಮ್ಮ ಬಹುಕಾಲದ ಗೆಳೆಯ, ನಟ ಭುವನ್ ಪೊನ್ನಣ್ಣ (Bhuvan Ponnanna) ಜೊತೆ ಹಸೆಮಣೆ ಏರಲು ಸಿದ್ದರಾಗಿದ್ದಾರೆ. ಈಗಾಗಲೇ e ಜೋಡಿಯ ಮದುವೆ ತಯಾರಿಯು ಜೋರಾಗಿಯೇ ನಡೆಯುತ್ತಿದೆ.

ಆಗಸ್ಟ್ 24 ರಂದು ಕೊಡವರ ಸಂಪ್ರದಾಯದಂತೆ, ಕೊಡಗಿನಲ್ಲಿ ಭುವನ್ ಪೊನ್ನಣ್ಣನವರನ್ನು ನಟಿ ಮದುವೆಯಾಗಲಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಕೊಡಗಿನ ಇಗ್ಗುತ್ತಪ್ಪ ದೇವಾಲಯದಲ್ಲಿ ಲಗ್ನಪತ್ರಿಕೆ ಕಾರ್ಯವು ಸರಳವಾಗಿ ಎರಡೂ ಕುಟುಂಬದವರ ಸಮ್ಮುಖದಲ್ಲಿ ನೆರವೇರಿತ್ತು. ಕಳೆದ ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಭುವನ್ ಹಾಗೂ ಹರ್ಷಿಕಾ ತಮ್ಮಿಬ್ಬರ ಪ್ರೀತಿಗೆ ಮದುವೆ ಮುದ್ರೆ ಒತ್ತಲಿದ್ದಾರೆ.