17 ನೇ ವಯಸ್ಸಿಗೆ ಫಸ್ಟ್ ಕಿಸ್ ಮಾಡಿದ್ದರಂತೆ ನಟಿ ಹರಿಪ್ರಿಯಾ,ಆ ಅನುಭವ ಹೇಗಿತ್ತಂತೆ ಗೊತ್ತಾ?!

ಚಂದನವನದ ನಟಿ ಹರಿಪ್ರಿಯಾ (Sandalwood Actress Haripriya) ರವರು ಸಿನಿಮಾ ವೈವಾಹಿಕ ಜೀವನಕ್ಕೆ ಕಾಲಿಟ್ಟು ಪತಿಯ ಜೊತೆಗೆ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಕಳೆದ ವರ್ಷ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹನವರ ನಡುವೆ ಪ್ರೀತಿ ಚಿಗುರಿದೆ, ಮದುವೆಯಾಗಲಿದ್ದಾರೆ ಹೀಗೆ ನಾನಾ ರೀತಿಯ ಸುದ್ದಿಗಳು ಕೇಳಿ ಬಂದಿದ್ದವು.

ಆದರೆ ಯಾವುದಕ್ಕೂ ಕೂಡ ಪ್ರತಿಕ್ರಿಯೆ ನೀಡದೇ ಎಂಗೇಜ್ ಮೆಂಟ್ ಮಾಡಿಕೊಂಡರು. ಆದಾದ ಬಳಿಕ ನಟಿ ಹರಿಪ್ರಿಯಾರವರು ವಸಿಷ್ಟ ಸಿಂಹ (Actor Vasista Simha) ಜೊತೆಗೆ ಜನವರಿ 26 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟು ಇದೀಗ ಫ್ಯಾಮಿಲಿ ಎಂದು ಬ್ಯುಸಿಯಾಗಿದ್ದಾರೆ.

ಇತ್ತೀಚೆಗಷ್ಟೇ ಹರಿಪ್ರಿಯಾ ಸಿಂಹ (Haripriya Simha) ಸಿಂಹ ಎಂಬ ಹೆಸರಿನಲ್ಲಿ ನಟಿ ಹರಿಪ್ರಿಯಾ ತಮ್ಮದೇ ಆದ ಹೊಸ ಯುಟ್ಯೂಬ್ ಚಾನೆಲ್ (Youtube Chanel) ಆರಂಭಿಸಿದ್ದು, ತಮ್ಮ ಚಾನೆಲ್ ಟ್ರೈಲರ್ ಹಾಗೂ ನಿಶ್ಚಿತಾರ್ಥದ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದರು. ತದನಂತರದಲ್ಲಿ ಯುಟ್ಯೂಬ್ ಚಾನೆಲ್ ನಲ್ಲಿ ಹತ್ತು ಹಲವು ವಿಚಾರದ ಬಗ್ಗೆ ಉತ್ತರ ನೀಡಿದ್ದು, ಸಿನಿ ಜರ್ನಿ, ಫಸ್ಟ್ ಲವ್ ಹಾಗೂ ಫಸ್ಟ್ ಕಿಸ್ ಬಗ್ಗೆ ರಿವೀಲ್ ಮಾಡಿದ್ದರು.Actress Haripriya about firts kiss

ಹೌದು, ತನ್ನ ಬಗ್ಗೆ ಯಾರಿಗೂ ಗೊತ್ತಿರದ ಹತ್ತಕ್ಕೂ ಹೆಚ್ಚು ವಿಚಾರಗಳನ್ನು ರಿವೀಲ್ ಮಾಡಿದ್ದರು. ಮೊದಲಿಗೆ ನಟಿ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದು, “2007ರಲ್ಲಿ ‘ಬಡಿ’ (Badi) ಎನ್ನುವ ತುಳು ಸಿನಿಮಾ ಮೂಲಕ ನಟಿ ಹರಿಪ್ರಿಯ ಚಿತ್ರರಂಗ ಪ್ರವೇಶಿಸಿದ್ದೆ. ಹೌದು, ಸಿನಿಮಾ ನಟಿಯಾಗುವ ಆಸೆ ಇರಲಿಲ್ಲ. ಪಿಯುಸಿ ಓದು ಸಮಯದಲ್ಲಿ ತಾವು ಮಾಡಿದ ಡ್ಯಾನ್ಸ್ ನೋಡಿ ಸಿನಿಮಾ ಮ್ಯಾನೇಜರ್ ತುಳು ಸಿನಿಮಾದಲ್ಲಿ ನಟಿಸುವ ಅವಕಾಶ ಕೊಟ್ಟರು.

ಆಗಿನ್ನು ನನಗೆ 16 ವರ್ಷ ವಯಸ್ಸು. ಮೊದಲಿಗೆ ನಟಿಸಲ್ಲ ಎಂದು ಹೇಳಿದ್ದೆ. ಕೊನೆಯ ಪೋಷಕರ ಒಪ್ಪಿಗೆ ಪಡೆದು ಒಪ್ಪಿದೆ. ಮಂಗಳೂರಿನಲ್ಲಿ ಫಿಶ್‌ ಕರಿ ತಿಂದು ಮೊದಲಿಗೆ ಸಿನಿಮಾ ಚಿತ್ರೀಕರಣ ಆರಂಭಿಸಿದ್ದು ನೆನಪಿದೆ. ಅಲ್ಲಿಂದ ಮುಂದೆ 15 ವರ್ಷಗಳಿಂದ ಈ ಜರ್ನಿ ಮುಂದುವರೆದಿದೆ. ಅಯ್ಯೋ ಬಾಯ್ತಪ್ಪಿ ನನ್ನ ವಯಸ್ಸು ಹೇಳಿಬಿಟ್ನಾ ಪರವಾಗಿಲ್ಲ” ಎಂದಿದ್ದರು.

ಅಷ್ಟೇ ಅಲ್ಲದೇ ತನ್ನ ಫಸ್ಟ್ ಲವ್ ಬಗ್ಗೆ ಮಾತನಾಡಿದ್ದು,’17 ವರ್ಷ ವಯಸ್ಸಿನಲ್ಲಿ ಕೆಲವು ತಿಂಗಳ ಕಾಲ ಒಬ್ಬರ ಮೇಲೆ ಲವ್ವಾಗಿತ್ತು. ಅದು ಟೀನೆಜ್‌ನಲ್ಲಿ ಆಗಿದ್ದ ಲವ್. ಅದನ್ನು ಲವ್, ಇನ್‌ಪ್ಯಾಕ್ಚುಯೇಷನ್ ಏನ್ ಬೇಕಾದರೂ ಕರೆಯಬಹುದು. ಇನ್ನು ತಮ್ಮ ಬಗ್ಗೆ ಯಾರಿಗೂ ಗೊತ್ತಿಲ್ಲದ ಒಂದು ವಿಷಯ ಹೇಳಿ ಎನ್ನುವ ಪ್ರಶ್ನೆಗೆ ಹರಿಪ್ರಿಯಾ ನಾಚಿಕೊಂಡಿದ್ದಾರೆ. ಇದು ಬಹಳ ಜನಕ್ಕೆ ಗೊತ್ತಿಲ್ಲ. ಏನೇನೋ ಕಾಮೆಂಟ್ ಮಾಡಬೇಡಿ.Actress Haripriya about firts kiss

ಹೇಳಿಬಿಡ್ತೀನಿ ಎಂದಿದ್ದು. ಕೊನೆಗೆ, ನನ್ನ ಕ್ಲೋಸ್‌ ಫ್ರೆಂಡ್ಸ್ ಒಬ್ಬಿಬ್ಬರಿಗೆ ಮಾತ್ರ ಇದು ಗೊತ್ತು. ಅವರು ರೇಗಿಸುತ್ತಿರ್ತಾರೆ. ನನಗೆ ಅಮ್ಮನ ಪಕ್ಕ ಮಲಗಿಕೊಳ್ಳುವುದು ಎಂದರೆ ಇಷ್ಟ. ಹೌದು ಅದನ್ನು ಎಲ್ಲರೂ ಮಾಡ್ತಾರೆ. ರಾತ್ರಿ ಅವರವರ ರೂಮ್‌ ಅಲ್ಲಿ ಅವರು ಮಲಗಬೇಕು ಅಂತ ಎಲ್ಲರೂ ಹೇಳ್ತಾರೆ. ನನಗೆ ನನ್ನ ಅಮ್ಮನ ಜೊತೆ ಮಲಗುವುದು ಎಂದರೆ ಇಷ್ಟ. ಆಕೆಯನ್ನು ತಬ್ಬಿ ಮಲಗುವುದು ಅಭ್ಯಾಸ. ಆಕೆಯನ್ನು ತಬ್ಬಿ ಮಲಗಿದರೆ ಧೈರ್ಯ ಇರುತ್ತದೆ” ಎಂದಿದ್ದರು.

ಕೊನೆಗೆ ನಟಿ ಹರಿಪ್ರಿಯಾರವರು ತನ್ನ ಫಸ್ಟ್ ಕಿಸ್ ಬಗ್ಗೆ ರಿವೀಲ್ ಮಾಡಿದ್ದು, “ನನ್ನ ಆರಂಭದ ದಿನಗಳಲ್ಲಿ ಚಿತ್ರವೊಂದರಲ್ಲಿ ನಾನು ಫಸ್ಟ್ ಕಿಸ್ ಮಾಡಿದ್ದೆ. ನಾನು ಕಂಫರ್ಟಬಲ್ ಆಗಿರಲಿಲ್ಲ. ಮೇಕರ್ಸ್ ನನಗೆ ಬಹಳ ಒತ್ತಾಯ ಮಾಡಿದರು. ಆ ಸೀನ್‌ನಲ್ಲಿ ನೀವು ನೋಡಿರ್ತಾರೆ. ಬರೀ ಕಿಸ್ ಆಗುತ್ತೆ. ಆದರೆ ಅದರ ಹೊರಗೆ ನಾನು ಅಳ್ತಾ ಇದ್ದೆ. ಕಿಸ್ ಮಾಡ್ಬೇಕಂತೆ. ಶಾಟ್‌ನಲ್ಲಿ ಸಿನಿಮಾಗಾಗಿ ಮಾಡ್ಬೇಕಂತೆ ಅಂತ ಅಳ್ತಿದ್ದೆ ಎಂದು ಆ ದಿನವನ್ನು ನೆನೆದು ನಕ್ಕಿದ್ದಾರೆ. ಫಸ್ಟ್ ಕಿಸ್ ಹಂಗಿರುತ್ತೆ ಹಿಂಗಿರುತ್ತೆ ಅಂತ ಎಲ್ಲರೂ ಅಂದುಕೊಳ್ತಾರೆ. ಆದರೆ ಅದು ನನಗೆ ಕೆಟ್ಟ ನೆನಪು” ಎಂದಿದ್ದರು. ನಟಿಯ ಹತ್ತು ಹಲವು ಇಂಟರೆಸ್ಟಿಂಗ್ ವಿಚಾರಗಳನ್ನು ಕೇಳಿ ಫುಲ್ ಖುಷಿ ಪಟ್ಟಿದ್ದರು.

 

Leave a Reply

Your email address will not be published. Required fields are marked *