ಫ್ಯಾಮಿಲಿ ಜೊತೆಗೆ ಸಮಯ ಕಳೆಯುತ್ತಿರುವ ಕಿರುತೆರೆಯ ನಟಿ ಹಂಸ ನಾರಾಯಣ್ ಅವರ ಅಪರೂಪದ ಫೋಟೋ ವೈರಲ್!!

ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿರುವ ನಟಿ ಹಂಸ ಪ್ರತಾಪ್ (Hamsa Prathap) ಅವರು ಬಹುಬೇಡಿಕೆಯ ನಟಿ ಮಣಿಯರಲ್ಲಿ ಒಬ್ಬರು. ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಹಂಸ ಪ್ರತಾಪ್ ಅವರು ಪಾಸಿಟಿವ್ ಹಾಗೂ ನೆಗೆಟಿವ್ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿಯಲ್ಲಿ ರಾಜೇಶ್ವರಿ ಪಾತ್ರವನ್ನು ನಿಭಾಯಿಸುತ್ತಿದ್ದು, ನೆಗೆಟಿವ್ ಶೇಡ್ ನಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿ ಹಂಸ ಪ್ರತಾಪ್ ಅವರು ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದು, ಹಂಸ ನಾರಾಯಣಸ್ವಾಮಿ ಅವರು ಕುಟುಂಬದ ಜೊತೆ ಹೋಟೆಲ್‌ವೊಂದರಲ್ಲಿ ಊಟ ಮಾಡಿದ್ದಾರೆ.

ಹೌದು, ಧಾರಾವಾಹಿಯ ಶೂಟಿಂಗ್‌ ನಡುವೆ ಬಿಡುವು ಮಾಡಿಕೊಂಡು ಕುಟುಂಬದ ಜೊತೆ ಹೊರಗಡೆ ಸಮಯ ಕಳೆದಿದ್ದಾರೆ. ಪತಿ ಹಾಗೂ ಮಗನ ಜೊತೆಗೆ ಸಮಯ ಕಳೆದಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಅಭಿಮಾನಿಗಳ ಮನಸ್ಸು ಗೆದ್ದುಕೊಂಡಿದ್ದಾರೆರೆ. ಈ ಫೋಟೋಗಳನ್ನು ನೋಡಿದಾಗ ನೆಟ್ಟಿಗರು ನಟಿಯ ಕ್ಯೂಟ್ ಫ್ಯಾಮಿಲಿ ಫೋಟೋ (Family Photo) ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಟಿ ಹಂಸ ಪ್ರತಾಪ್ ಅವರು ಬಗೆಬಗೆಯ ಡ್ರೆಸ್​ ತೊಟ್ಟು ಹಂಸ ಇನ್​ಸ್ಟಾಗ್ರಾಮ್​ (Instagram) ನಲ್ಲಿ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಲೇ ಇದ್ದಾರೆ. ಇತ್ತೀಚೆಗಷ್ಟೇ ವಿಭಿನ್ನ ಉಡುಗೆ ತೊಟ್ಟು ಫೋಟೋಶೂಟ್​ (Photoshoot) ಮಾಡಿಸಿಕೊಂಡು ಅದನ್ನು ಶೇರ್​ ಮಾಡಿಕೊಂಡಿದ್ದರು. ರೆಡ್ ಬ್ಲೇಜರ್ ತೊಟ್ಟು, ಬ್ಲಾಕ್ ಕಲರ್ ಸೂಟ್, ಮಿಡಿ, ಮಿನಿ, ಫ್ರಾಕ್​, ಸಲ್ವಾರ್​, ಸೀರೆ ಹೀಗೆ ವಿವಿಧ ಉಡುಗೆಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡ ಬಳಿಕ ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.

ಈ ಫೋಟೋಗಳಿಗೆ ಸಕತ್​ ಕಮೆಂಟ್​ ಗಳು ಹರಿದು ಬಂದಿತ್ತು. ಹಾರ್ಟ್​ ಎಮೋಜಿಗಳನ್ನು ಕಳುಹಿಸಿದರೆ, ಇನ್ನು ಕೆಲವರು ಸೋ ಸ್ವೀಟ್​ ಎಂದಿದ್ದರು. ಅದಲ್ಲದೇ ನೀವೇ ನಮ್​ ಕ್ರಷ್​ ಎಂದಿದ್ದರು. ಕನ್ನಡದ ಸಿನಿಮಾಗಳಾದ ಧ್ರುವ (Dhruva), ಅಮ್ಮ (Amma), ರಾಜಾಹುಲಿ (Rajahuli) ಹಾಗೂ ಜೇಮ್ಸ್ (James) ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಅದಲ್ಲದೇ ಕಿರುತೆರೆ ಲೋಕದಲ್ಲಿ ಬ್ಯುಸಿಯಾಗಿದ್ದು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗುತ್ತಿದ್ದಾರೆ.

Leave a Reply

Your email address will not be published. Required fields are marked *