ಒಂದು ತಿಂಗಳ ಮಗುವನ್ನು ಎತ್ತಿಕೊಂಡು ಶೂಟಿಂಗ್ ಗೆ ಹೋಗುತ್ತಿರುವ ನಟಿ ದಿವ್ಯಾ ಶ್ರೀಧರ್, ಮುಸ್ಲಿಂ ವ್ಯಕ್ತಿಯನ್ನು ಮದುವೆಯಾದ ನಟಿಯ ಪರಿಸ್ಥಿತಿ ಹೇಗಿದೆ ಗೊತ್ತಾ?

ಬಣ್ಣದ ಲೋಕದಲ್ಲಿ ಸಕ್ರಿಯರಾಗಿರುವ ನಟ ನಟಿಯರ ಬದುಕು ಉತ್ತಮವಾಗಿರುತ್ತದೆ ಎಂದು ಹೇಳುವುದು ಕಷ್ಟ. ಆದರೆ ಕೆಲವು ನಟ ನಟಿಯರು ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಾರೆ. ಈ ವಿಚಾರದಲ್ಲಿ ಕನ್ನಡ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿರುವ ನಟಿ ದಿವ್ಯಾ ಶ್ರೀಧರ್ ಅವರು ಹೊರತಾಗಿಲ್ಲ. ಕಳೆದ ಕೆಲವು ತಿಂಗಳ ಹಿಂದೆ ವೈವಾಹಿಕ ಜೀವನದ ವಿಚಾರವಾಗಿ ಸುದ್ದಿಯಾಗಿದ್ದ ಇವರು ಇದೀಗ ಮತ್ತೆ ಸುದ್ದಿಯಾಗಿದ್ದಾರೆ.

ಆದರೆ ಇದೀಗ ಜೀವನ ಸಾಗಿಸುವುದಕ್ಕಾಗಿ ಒಂದು ತಿಂಗಳ ಮಗುವನ್ನು ಹಿಡಿದುಕೊಂಡು ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ಏಪ್ರಿಲ್ 7ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗು ಹುಟ್ಟಿ ಒಂದು ತಿಂಗಳು ಆಗಿದೆಯಷ್ಟೇ. ಆದರೆ ಮೇ 21ರಿಂದಲೇ ಮತ್ತೆ ಶೂಟಿಂಗ್ ಗೆ ತೆರಳಿದ್ದು ಮಗುವನ್ನು ಶೂಟಿಂಗ್ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಈ ವಿಡಿಯೋವನ್ನು ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಅದಲ್ಲದೇ, ನಟಿ ದಿವ್ಯಾ ಶ್ರೀಧರ್ ಅವರು ವರ್ಕಿಂಗ್ ವುಮೆನ್ (Working Women) ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಒಂದು ತಿಂಗಳ ಮಗುವನ್ನು ಕೂಡ ಶೂಟಿಂಗ್ ಸ್ಥಳಕ್ಕೆ ಕರೆದುಕೊಂಡು ಹೋಗಬೇಕಾದ ಅನಿವಾರ್ಯತೆಯಿದೆ. ಕೆಲಸ ಮಾಡುವ ಮಹಿಳೆ ಮಾಡದಿರುವ ಕೆಲಸ ಇಲ್ಲ, ಮರಳಿ ಕೆಲಸಕ್ಕೆ ಎಂದಿದ್ದಾರೆ. ಈ ವಿಡಿಯೋದಲ್ಲಿ ತನ್ನ ಮೊದಲ ಗಂಡನ ಮಗು ಹಾಗೂ ಒಂದು ತಿಂಗಳ ಮಗುವನ್ನು ಎತ್ತಿಕೊಂಡು ಶೂಟಿಂಗ್ ಸ್ಥಳಕ್ಕೆ ತೆರಳುವುದಿದೆ. ಈ ವಿಡಿಯೋ ನೋಡುತ್ತಿದ್ದಂತೆ ಶಾಕ್ ಆಗಿದ್ದು ಬೇಸರ ವ್ಯಕ್ತಪಡುಸುತ್ತಿದ್ದಾರೆ.

ಈ ಹಿಂದೆಯಷ್ಟೇ ಆಕಾಶದೀಪ ಧಾರವಾಹಿ ಖ್ಯಾತಿಯ ನಟಿ ದಿವ್ಯಾ ಶ್ರೀಧರ್ ಮೇಲೆ ಪತಿ ಅಮ್ಜದ್ ಖಾನ್ (Amjad Khan) ಹ-ಲ್ಲೆ ನಡೆಸಿರುವ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ದಿವ್ಯಾ ಶ್ರೀಧರ್ ಪತಿ ಅಮ್ಜದ್ ಖಾನ್ ಪ್ರೀತಿಸಿ ಮದುವೆಯಾದವರು. 2015ರಲ್ಲಿ ಪ್ರಸಾರವಾದ ತಮಿಳು ಧಾರಾವಾಹಿ ʻಕೇಳಡಿ ಕಣ್ಮಣಿʼಯಲ್ಲಿ ಸಹನಟನಾಗಿದ್ದ ಅಮ್ಜದ್‌ ಖಾನ್‌ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಪ್ರೀತಿಸುತ್ತಿದ್ದ ದಿನಗಳಲ್ಲಿ ದಿವ್ಯಾ ಅವರು ಅರ್ನವ್‌ (Arnav) ಎಂದೇ ತಿಳಿದಿದ್ದರು. ಆದರೆ ನಂತರದಲ್ಲಿ ಸುಮಾರು ಐದು ವರ್ಷ ಕಾಲ ಇವರಿಬ್ಬರೂ ಲಿವ್‌ ಇನ್‌ ರಿಲೇಷನ್‌ಷಿಪ್‌ನಲ್ಲಿದ್ದರು.

ಕೊನೆಗೆ ಆತ ಅಮ್ಜದ್‌ ಖಾನ್‌ ಎಂದು ಆಕೆಗೆ ತಿಳಿದಿದೆ ಎನ್ನಲಾಗಿತ್ತು. 2022ರ ಜೂನ್‌ನಲ್ಲಿ ಅವರ ಮದುವೆ ನಡೆದಿದ್ದು, ಗರ್ಭಿಣಿಯಾಗಿದ್ದರು. ಗರ್ಭಿಣಿ ಲೆಕ್ಕಿಸದೇ ಹೊಟ್ಟೆಗೆ ಒದ್ದು ಅಮ್ಜನ್ ಖಾನ್ ಹ-ಲ್ಲೆ ನಡೆಸಿದ್ದರು ಎನ್ನಲಾಗಿತ್ತು. ಇತ್ತೀಚೆಗಷ್ಟೇ ಮೂರು ತಿಂಗಳ ಗರ್ಭೀಣಿ ಆಗಿರುವ ನನ್ನ ಮೇಲೆ ಪತಿ ಅಮ್ಜದ್ ಖಾನ್ ಹ-ಲ್ಲೆ ಮಾಡಿದ್ದಾರೆ ಎಂದು ದಿವ್ಯಾ ಶ್ರೀಧರ್ ಆರೋಪಿಸಿ ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದಂಪತಿಗಳು ಆರೋಪ ಪ್ರತ್ಯಾರೋಪ ಮಾಡುವ ಮೂಲಕ ಸುದ್ದಿಯಾಗಿದ್ದರು. ಇದೀಗ ಪತಿಯಿಂದ ದೂರವಾಗಿದ್ದು, ತನ್ನ ಇಬ್ಬರೂ ಮಕ್ಕಳ ಜೊತೆಗೆ ವಾಸಿಸುತ್ತಿದ್ದು, ಮತ್ತೆ ಶೂಟಿಂಗ್ ಗೆ ತೆರಳಿ ಜೀವನ ನಡೆಸಲು ಮುಂದಾಗಿದ್ದಾರೆ.

Leave a Reply

Your email address will not be published. Required fields are marked *