ಸ್ಯಾಂಡಲ್ ವುಡ್ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ವಯಸ್ಸು ಎಷ್ಟು ಗೊತ್ತಾ?

ಕನ್ನಡ ಚಿತ್ರರಂಗದಲ್ಲಿ ರಚಿತಾ ರಾಮ್ (Rachitaa Ram) ಅವರಿಗೆ ಎಲ್ಲಿಲ್ಲದ ಬೇಡಿಕೆಯಿದ್ದು ಸದ್ಯಕ್ಕೆ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಗುಳಿ ಕೆನ್ನೆಯ ಚೆಲುವೆ ಈ ರಚಿತಾ ರಾಮ್ ಅವರು ತಮ್ಮ ನಟನೆ ಹಾಗೂ ನಗು ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.

ಈಗಾಗಲೇ ಸಿನಿಮಾದಲ್ಲಿ ಬ್ಯುಸಿಯಾಗಿರುವ ಈ ಡಿಂಪಲ್ ಕ್ವೀನ್ ರಚಿತಾ ರಾಮ್ (Dimple Queen Rachitaa Ram) ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಯ ಸಿನಿಮಾದಲ್ಲೂ ನಟಿಸಿ ಅಲ್ಲಿಯೂ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಕನ್ನಡ ಕಿರುತೆರೆ ಲೋಕದಿಂದ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟು ಬೆಳ್ಳಿತೆರೆಯಲ್ಲಿಯೂ ಮಿಂಚುತ್ತಿರುವವರು ಈ ರಚಿತಾ ರಾಮ್.

‘ಬೆಂಕಿಯಲ್ಲಿ ಅರಳಿದ ಹೂವು’ (Benkiyali Aralida Hoovu) ಸೀರಿಯಲ್ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟರು. 2013 ರಲ್ಲಿ ತೆರೆಕಂಡ ಬುಲ್‌ಬುಲ್ (Bul Bul) ಚಿತ್ರದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟರು.ಆ ಬಳಿಕ ಗುಳಿ ಕೆನ್ನೆ ಚೆಲುವೆ ಸಾಲು ಸಾಲು ಅವಕಾಶಗಳು ಬಂದವು. ಸ್ಟಾರ್ ನಟರ ಜೊತೆಗೆ ನಟಿಸುವ ಅವಕಾಶಗಳು ಬಂದವು.

ನೋಡಲು ಯಂಗ್ (Young) ಆಗಿ ಕಾಣುವ ನಟಿಯ ವಯಸ್ಸು ಕೇಳಿದರೆ ಶಾಕ್ ಆಗಬಹುದು. ಡಿಂಪಲ್ ಕ್ವೀನ್ ರಚಿತಾ ರಾಮ್ ಅವರಿಗೆ ಇದೀಗ 33 ವರ್ಷ ವಯಸ್ಸಾಗಿದ್ದು, ಯಾವ ಯುವ ನಟಿಗೂ ಕೂಡ ಕಡಿಮೆಯಿಲ್ಲ ಎನ್ನುವಂತೆ ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡು ಹೋಗುತ್ತಿದ್ದಾರೆ. ಇತ್ತೀಚೆಗಷ್ಟೇ ನಟಿ ರಚಿತಾ ರಾಮ್ ಅವರ ನಟನೆಯ ಕ್ರಾಂತಿ (Kranti) ಹಾಗೂ ವೀರಂ (Veeram) ಸಿನಿಮಾ ತೆರೆ ಕಂಡಿದೆ.

ಬೆಳ್ಳಿತೆರೆಯಲ್ಲಿ ನಟಿಯಾಗಿ ಬ್ಯುಸಿಯಾಗಿದ್ದು, ಕಿರುತೆರೆಯ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಭರ್ಜರಿ ಬ್ಯಾಚುಲರ್ಸ್ (Bharjari Bachulors) ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಲ್ಲದೇ, ಸ್ಯಾಂಡಲ್​ವುಡ್​ನ ಬ್ಯುಸಿ ನಟಿ ರಚಿತಾ ರಾಮ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ.

ನಟ ಸತೀಶ್ ನಿನಾಸಂ (Sathish Ninasam) ಜೊತೆಗೆ ಮ್ಯಾಟ್ನಿ (Myatni), ಅಭಿಷೇಕ್ ಅಂಬರೀಶ್ (Abhishek Ambarish) ಅವರ ಜೊತೆಗೆ ಬ್ಯಾಡ್‌ ಮ್ಯಾನರ್ಸ್ (Bad Manners), ಶ್ರೀನಗರ ಕಿಟ್ಟಿ (Shreenagara Kitty) ಜೊತೆಗೆ ಸಂಜು ವೆಡ್ಸ್‌ ಗೀತಾ 2 (Sanju Weds Geetha 2), ಶಬರಿ ಸರ್ಚಿಂಗ್‌ ಫಾರ್‌ ರಾವಣ (Shabari Seraching for Ramana), ಲವ್‌ ಮಿ ಆರ್‌ ಹೇಟ್‌ ಮಿ (Love me Or Hate me) ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

Leave a Reply

Your email address will not be published. Required fields are marked *