ಪತಿಯ ಜೊತೆಗೆ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದ ಶ್ರೀರಸ್ತು ಶುಭಮಸ್ತು ನಟಿ ದೀಪಾ ಕಟ್ಟೆ

ಕಳೆದ ಕೆಲವು ವರ್ಷಗಳಲ್ಲಿ ಕಿರುತೆರೆಯ ನಟ ನಟಿಯರು ವೈಯುಕ್ತಿಕ ಜೀವನಕ್ಕೆ ಸಂಬಂಧ ಪಟ್ಟಂತೆ ಗುಡ್ ನ್ಯೂಸ್ ನೀಡುತ್ತಿದ್ದಾರೆ. ಈ ವಿಚಾರದಲ್ಲಿ ಶ್ರೀರಸ್ತು ಶುಭಮಸ್ತು ಸೀರಿಯಲ್ ನಟಿ ದೀಪಾ ಕಟ್ಟೆ (Deepa Katte) ಹೊರತಾಗಿಲ್ಲ. ನಟಿ ದೀಪಾ ಕಟ್ಟೆಯವರು ಕನ್ನಡ ಕಿರುತೆರೆ ಲೋಕದಲ್ಲಿ ಬದುಕು ಕಟ್ಟಿಕೊಂಡವರು. ವೃತ್ತಿ ಜೀವನದ ಜೊತೆಗೆ ವೈಯುಕ್ತಿಕ ಜೀವನದ ಕಡೆಗೆ ಹೆಚ್ಚು ಗಮನ ಕೊಡುವ ನಟಿ ದೀಪಾ ಕಟ್ಟೆಯವರು ಪತಿಯ ಜೊತೆಗೆ ದೇವಸ್ಥಾನಕ್ಕೆ ತೆರಳಿದ್ದಾರೆ.

ಇದೀಗ ಕಿರುತೆರೆ ನಟಿ ದೀಪಾ ಕಟ್ಟೆ ಪತಿ ರಕ್ಷಿತ್ (Rakshit) ಜೊತೆಗೆ ಉಡುಪಿಯ ಅಂಬಲಪಾಡಿ (Ambalapadi) ಯಲ್ಲಿರುವ ಮಹಾಕಾಳಿ ದೇವಸ್ಥಾನ (Mahakali Temple) ಕ್ಕೆ ತೆರಳಿ ದೇವರ ದರ್ಶನ ಪಡೆದಿದ್ದಾರೆ. ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆ (Instragram Account) ಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮುದ್ದು ಮುದ್ದಾಗಿರುವ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಂತೆ ಹತ್ತು ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ.

ಹೌದು, ಶ್ರೀರಸ್ತು ಶುಭಮಸ್ತು (Shreerastu Shubhamastu) ಸೀರಿಯಲ್ ನಟಿ ದೀಪಾ ಕಟ್ಟೆ (Deepa Katte) ಅವರು ವೈವಾಹಿಕ (Wedding) ಜೀವನಕ್ಕೆ ಕಾಲಿಟ್ಟಿದ್ದರು. ಬೆಳ್ತಂಗಡಿಯ ಉಜಿರೆಯಲ್ಲಿ ಸರಳವಾಗಿ ಹೊಸ ಬದುಕಿಗೆ ಮುನ್ನುಡಿ ಬರೆದಿದ್ದರು. 2023 ಮೇ 22ರಂದು ಸಾಫ್ಟ್ವೇರ್ ಇಂಜಿನಿಯರ್ ರಕ್ಷಿತ್ ಜೊತೆ ಬೆಳ್ತಂಗಡಿ ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ಕೃಷ್ಣಾನುಗ್ರಹ ಸಭಾ ಗೃಹದಲ್ಲಿ ಅದ್ದೂರಿಯಾಗಿ ದೀಪಾ ಕಟ್ಟೆ ಅವರು ಮದುವೆಯಾಗಿದ್ದರು.

ವೈವಾಹಿಕ ಜೀವನಕ್ಕೆ ಕಾಲಿಟ್ಟ ದೀಪಾ ಕಟ್ಟೆಯವರಿಗೆ ಚಿತ್ರರಂಗದವರು ಹಾಗೂ ಅಭಿಮಾನಿಗಳು ಶುಭಾಶಯಗಳನ್ನು ಕೋರಿದ್ದರು. ಮಲೆನಾಡಿನಲ್ಲಿ ಹುಟ್ಟಿ ಬೆಳೆದ ದೀಪಾ ಕಟ್ಟೆ ಇಂಜಿನಿಯರ್ ಪದವಿ ಪಡೆದುಕೊಂಡಿದ್ದಾರೆ. ಐಟಿ ಕಂಪನಿಯಲ್ಲಿ (IT company) ಕೆಲಸ ಮಾಡುತ್ತಿದ್ದರು. ಹೀಗಿರುವಾಗ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಅಲ್ಲಿಯೇ ಬದುಕು ಕಟ್ಟಿಕೊಂಡಿದ್ದರು.

ಆದರೆ ನಟನೆಯಲ್ಲಿ ಆಸಕ್ತಿ ಇದ್ದ ಅವರು ಬಳಿಕ ಕಿರುತೆರೆಗೆ ನಿರೂಪಕಿಯಾಗಿ ಎಂಟ್ರಿ ಕೊಟ್ಟರು. ಆ ಬಳಿಕ ನಟಿಸುವ ಅವಕಾಶಗಳು ಬಂದವು. ಈಗಾಗಲೇ ಸಾಕಷ್ಟು ಸೀರಿಯಲ್ ನಲ್ಲಿ ನಟಿಸಿದ್ದಾರೆ. ನಟಿ ದೀಪಾರವರು ‘ಶ್ರೀರಸ್ತು ಶುಭಮಸ್ತು (Shreerastu Shubhamastu) ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಮಿಥುನ ರಾಶಿ (Mithuna Rashi), ಹಿಟ್ಲರ್ ಕಲ್ಯಾಣ (Hitlaer Kalyana), ಜೀವ ಹೂವಾಗಿದೆ (Jeeva Hoovagide) ಮುಂತಾದ ಸೀರಿಯಲ್‌ಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *