ಪತಿಯ ಜೊತೆಗೆ ಥೈಲ್ಯಾಂಡ್‌ ಪ್ರವಾಸ ಎಂಜಾಯ್ ಮಾಡುತ್ತಿರುವ ನಟಿ ಡೈಸಿ ಬೋಪಣ್ಣ, ಫೋಟೋಗಳು ವೈರಲ್

ನಟಿ ಡೈಸಿ ಬೋಪಣ್ಣ (Daisi Bopanna) ಗಾಳಿಪಟ ಸಿನಿಮಾದ ಮೂಲಕ ಸಿನಿ ಪ್ರೇಕ್ಷಕರಿಗೆ ಹತ್ತಿರವಾದವರು. ನಟಿ ಡೈಸಿ ಬೋಪಣ್ಣ ಕನ್ನಡ (Kannada), ತಮಿಳು (Tamil), ತೆಲುಗು (Telug), ಹಿಂದಿ (Hindi) ಮತ್ತು ಮಲಯಾಳಂ (Malayalam) ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಟನೆಯ ಜೊತೆಗೆ ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದಾರೆ.ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿರುವ ಡೈಸಿ ಬೋಪಣ್ಣ ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ನಟಿ ಡೈಸಿ ಬೋಪಣ್ಣನವರಿಗೆ 60 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಹೀಗಾಗಿ ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಫ್ಯಾನ್ಸ್ ಗಳ ಗಮನ ಸೆಳೆಯುತ್ತಿರುತ್ತಾರೆ. ಅದಲ್ಲದೇ ಈ ಸೋಶಿಯಲ್ ಮೀಡಿಯಾದಲ್ಲಿ ಪ್ರಾಡಕ್ಟ್ ಹಾಗೂ ಕೆಲವೊಂದು ಬ್ರ್ಯಾಂಡ್​ಗಳ ಪ್ರಮೋಷನ್ ಪೋಸ್ಟ್​ (Promotion Post) ಹಾಕುತ್ತಿರುತ್ತಾರೆ. ಇದೀಗ ಡೈಸಿ ಬೋಪಣ್ಣನವರು ಮತ್ತೆ ಸುದ್ದಿಯಲ್ಲಿದ್ದಾರೆ. ಡೈಸಿ ಬೋಪಣ್ಣ ಥೈಲ್ಯಾಂಡ್‌ (Thailand) ನಲ್ಲಿದ್ದು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಥೈಲ್ಯಾಂಡ್‌ ಪ್ರವಾಸ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಡೈಸಿ ಬೋಪಣ್ಣ ಹಾಗೂ ಆಕೆಯ ಗಂಡ ಅಮಿತ್ ಥೈಲ್ಯಾಂಡ್ ಗೆ ಹಾರಿದ್ದಾರೆ. ನಟಿ ಡೈಸಿ ಬೋಪಣ್ಣ ಪತಿ ಮುತ್ತಿಡುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಅದರೊಂದಿಗೆ ತನ್ನ ಗಂಡನ ಜೊತೆಗೆ ಎಂಜಾಯ್ ಮಾಡುತ್ತಾ ಇರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಇದನ್ನು ನೋಡಿದ ಡೈಸಿ ಅಭಿಮಾನಿಗಳು ಸೋ ಕ್ಯೂಟ್ ಎಂದು ಪ್ರತಿಕ್ರಿಯೆ ಸೂಚಿಸುತ್ತಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಹಸಿರು ಹಾಗೂ ಕಪ್ಪು ಬಿಕಿನಿ ತೊಟ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದರು. ಥೈಲ್ಯಾಂಡ್‌ನಲ್ಲಿ ಕಾಡಿನ ಮಧ್ಯೆದಲ್ಲಿರುವ ಕೊಳದಲ್ಲಿ ರಿಲ್ಯಾಕ್ಸ್ ಮಾಡುವ ಫೋಟೋ ಶೇರ್ ಮಾಡಿಕೊಂಡಿದ್ದರು. ಥೈಲ್ಯಾಂಡ್‌ನ ಕಾಡಿನಲ್ಲಿ ತಮ್ಮ ಬೋಲ್ಡ್ ಲುಕ್ ಫೋಟೋ ಶೇರ್ ಮಾಡಿಕೊಂಡಿದ್ದು, ” ಕಾಡಿನ ಮಧ್ಯದಲ್ಲಿ ಎಲ್ಲೋ ಇದ್ದೀನಿ. ವಿಶ್ವದ ಪ್ರತಿಯೊಂದು ಸ್ಥಳವೂ ಹೀಗೆ ಇರಲಿ ಎಂದು ಆಶಿಸುತ್ತೇನೆ” ಎಂದು ಬರೆದುಕೊಂಡಿದ್ದರು. ಈ ಫೋಟೋ ನೋಡಿ ನೆಟ್ಟಿಗರು ಶಾಕ್ ಆಗಿದ್ದರು.

ಡೈಸಿ ಬೋಪಣ್ಣ ಅವರು 2011ರಲ್ಲಿ ಅಮಿತ್ ಜಾಜು ಎಂಬುವರನ್ನು ಮದುವೆಯಾದರು. ಮದುವೆ ಆದ ಬಳಿಕ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದ ನಟಿ ಡೈಸಿ ಬೋಪಣ್ಣ ಪತಿಯೊಂದಿಗೆ ಮುಂಬೈನಲ್ಲಿ ನೆಲೆಸಿದ್ದಾರೆ.‌ ಆದರೆ ನಟಿ ಡೈಸಿ ಬೋಪಣ್ಣನವರನ್ನು ತೆರೆ ಮೇಲೆ ನೋಡಬೇಕೆನ್ನುವ ಆಸೆ ಅಭಿಮಾನಿಗಳದ್ದು. ನಟಿ ಡೈಸಿ ಬೋಪಣ್ಣ ಯಾವಾಗ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

Leave a Reply

Your email address will not be published. Required fields are marked *