ಥೈಲ್ಯಾಂಡ್‌ ಟ್ರಿಪ್ ಎಂಜಾಯ್ ಮಾಡುತ್ತಿರುವ ನಟಿ ಡೈಸಿ ಬೋಪಣ್ಣ, ನಟಿಯ ಹಾಟ್ ಫೋಟೋಗಳು ವೈರಲ್

ನಟಿ ಡೈಸಿ ಬೋಪಣ್ಣ (Daisi Bopanna) ಈ ನಟಿ ಯಾರಿಗೆ ಹೇಳಿ?. ಪಂಚ ಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಇವರು ಗಾಳಿ ಪಟ ಸಿನಿಮಾದ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಹತ್ತಿರವಾದವರು. ನಟಿ ಡೈಸಿ ಬೋಪಣ್ಣ ಕನ್ನಡ (Kannada), ತಮಿಳು (Tamil), ತೆಲುಗು (Telug), ಹಿಂದಿ (Hindi) ಮತ್ತು ಮಲಯಾಳಂ (Malayalam) ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ನಟಿ ಮಾತ್ರವಲ್ಲದೆ ಮಾಡೆಲ್ ಕೂಡ.

ನಟನೆಯಿಂದ ಸ್ವಲ್ಪ ದೂರ ಉಳಿದಿರುವ ನಟಿ ಡೈಸಿ ಬೋಪಣ್ಣ ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ನಟಿಗೆ 60 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದು ನಟಿ ಬಹಳಷ್ಟು ವಿಡಿಯೋ ಹಾಗೂ ಫೋಟೋಗಳನ್ನು ಫ್ಯಾನ್ಸ್ ಜೊತೆಗೆ ಶೇರ್ ಮಾಡುತ್ತಲೇ ಇರುತ್ತಾರೆ. ನಟನೆಯಿಂದ ದೂರ ಉಳಿದಿದ್ದೂ, ಪ್ರಾಡಕ್ಟ್, ಕೆಲವೊಂದು ಬ್ರ್ಯಾಂಡ್​ಗಳ ಪ್ರಮೋಷನ್ ಪೋಸ್ಟ್​ (Promotion Post) ಗಳನ್ನು ಹಾಕುವುದನ್ನು ಕಾಣುತ್ತೇವೆ. ಇದೀಗ ಡೈಸಿ ಬೋಪಣ್ಣನವರು ತಮ್ಮ ಗ್ಲಾಮರಸ್ ಫೋಟೋದ ಮೂಲಕ ಸುದ್ದಿಯಾಗಿದ್ದಾರೆ.ಡೈಸಿ ಬೋಪಣ್ಣ ಥೈಲ್ಯಾಂಡ್‌ (Thailand) ನಲ್ಲಿದ್ದು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಥೈಲ್ಯಾಂಡ್‌ ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಇದೀಗ ಹಸಿರು ಹಾಗೂ ಕಪ್ಪು ಬಿಕಿನಿ ತೊಟ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಥೈಲ್ಯಾಂಡ್‌ನಲ್ಲಿ ಕಾಡಿನ ಮಧ್ಯೆದಲ್ಲಿರುವ ಕೊಳದಲ್ಲಿ ರಿಲ್ಯಾಕ್ಸ್ ಮಾಡುತ್ತಿದ್ದಾರೆ. ಥೈಲ್ಯಾಂಡ್‌ನ ಕಾಡಿನಲ್ಲಿ ತಮ್ಮ ಬೋಲ್ಡ್ ಲುಕ್ ಫೋಟೋ ಶೇರ್ ಮಾಡಿಕೊಂಡಿದ್ದು, ” ಕಾಡಿನ ಮಧ್ಯದಲ್ಲಿ ಎಲ್ಲೋ ಇದ್ದೀನಿ. ವಿಶ್ವದ ಪ್ರತಿಯೊಂದು ಸ್ಥಳವೂ ಹೀಗೆ ಇರಲಿ ಎಂದು ಆಶಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಪಂಚಭಾಷಾ ನಟಿ ಡೈಸಿ ಬೋಪಣ್ಣ ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಗಳ ಮೂಲಕ ಪ್ರಶ್ನೆಗಳನ್ನು ಕೇಳಿದ್ದಾರೆ. ನೆಟ್ಟಿಗನೊಬ್ಬ ” ಮಿಂಚಾಗಿ ನೀನು ಬರಲು..” ಎಂದು ಹಾಡಿದ್ದಾನೆ. ಮತ್ತೊಬ್ಬನು ” ನಾನು ನಿಮ್ಮನ್ನು ಕನ್ನಡ ಸಿನಿಮಾಗಳಲ್ಲಿ ನೋಡಿದ್ದೇನೆ. ಐಶ್ವರ್ಯಾ ಹಾಗೂ ಗಾಳಿಪಟದಲ್ಲಿ ನಿಮ್ಮ ಆಕ್ಟಿಂಗ್‌ ಅನ್ನು ಇಷ್ಟಪಟ್ಟಿದ್ದೇನೆ. ತುಂಬಾ ಚೆನ್ನಾಗಿ ಕಾಣುತ್ತೀದ್ದೀರಿ” ಎಂದಿದ್ದಾನೆ.

ಇನ್ನೊಬ್ಬ ” ಬನ್ನಿ ಕನ್ನಡ ಇಂಡಸ್ಟ್ರಿಗೆ” ಎಂದರೆ, ಮತ್ತೊರ್ವ “ನೀವು ಹಾಗೂ ನೀವು ಇರುವ ಸ್ಥಳ ಎರಡು ಸುಂದರವಾಗಿದೆ” ಎಂದಿದ್ದಾನೆ. ಒಟ್ಟಿನಲ್ಲಿ ನಟಿಯ ಬೋಲ್ಡ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಡೈಸಿ ಬೋಪಣ್ಣ ಫ್ಯಾನ್ಸ್ ನಟಿಯನ್ನು ತೆರೆ ಮೇಲೆ ಕಾಣಲು ಕಾತುರರಾಗಿದ್ದು, ಮತ್ತೆ ಸಿನಿಮಾದಲ್ಲಿ ನಟಿಸುವ ಮೂಲಕ ಯಾವಾಗ ಗುಡ್ ನ್ಯೂಸ್ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

Leave a Reply

Your email address will not be published. Required fields are marked *