ಮೈ ತುಂಬಾ ಬಟ್ಟೆ ಹಾಕೋಕೆ ಆಗಲ್ವಾ ಎಂದು ಕೇಳಿದ್ದಕ್ಕೆ ನಟಿ ಕಮ್ ಗಾಯಕಿ ಚೈತ್ರಾ ಜೆ ಆಚಾರ್ ಕೊಟ್ಟ ಉತ್ತರ ಏನು ಗೊತ್ತಾ!! ನೆಟ್ಟಿಗರ ಬಾಯಿ ಮುಚ್ಚಿಸಿದ ನಟಿ!!

ಚಂದನವನದ (Sandalwood) ನಟಿ ಚೈತ್ರಾ ಆಚಾರ್ (Chaithra Achar) ಅವರು ಗಾಯಕಿ (Singer) ಕಮ್ ನಟಿ (Actress) ಯಾಗಿ ಗುರುತಿಸಿಕೊಂಡವರು. ಸದ್ಯಕ್ಕೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದು ಸಿನಿ ಕೆರಿಯರ್ ನಲ್ಲಿ ಕೂಡ ಬ್ಯುಸಿಯಾಗಿದ್ದಾರೆ. ಅದಲ್ಲದೇ ನಟಿ ಬೋಲ್ಡ್ ಫೋಟೋ ಶೂಟ್ ಮೂಲಕ ಪಡ್ಡೆ ಹೈಕಳ ನಿದ್ದೆ ಕದಿಯುತ್ತಾರೆ. ನಟಿಯ ಬೋಲ್ಡ್ ಅವತಾರ ಕಂಡು ನೆಟ್ಟಿಗರು ಅನೇಕರು ಗರಂ ಆಗುವುದಿದೆ. ನಾನಾ ರೀತಿಯಾಗಿ ಕಾಮೆಂಟ್ ಮಾಡುವುದಿದೆ. ಆದರೆ ಹಾಟ್ ಫೋಟೋಗಳ ಬಗ್ಗೆ ನಟಿ ಚೈತ್ರಾ ಜೆ ಆಚಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಖಾಸಗಿ ಸುದ್ದಿವಾಹಿನಿಯ ಜೊತೆಗೆ ಮಾತನಾಡಿರುವ ನಟಿ ಚೈತ್ರಾ ಜೆ ಆಚಾರ್ (Chaithra J Achar) ಹಾಟ್ ಫೋಟೋ ಶೂಟ್ ಖಡಕ್ ಆಗಿ ಮಾತನಾಡಿದ್ದಾರೆ. ಹಾಟ್ ಆಗಿ ಫೋಟೋ ಶೂಟ್ ಮಾಡಿಸ್ತಾ ಇದ್ದೀರಾ, ವೈರಲ್ ಆಗುತ್ತಿದೆ ಎಂದಿದ್ದಕ್ಕೆ ನಟಿ ಚೈತ್ರಾ ಜೆ ಆಚಾರ್ ಉತ್ತರಿಸಿದ್ದು, “ಪಡ್ಡೆ ಹುಡುಗರು ನಿದ್ದೆ ಮಾಡುವ ಟೈಮ್ ನಲ್ಲಿ ಫೋಟೋಸ್ ಯಾಕೆ ನೋಡ್ತಾ ಇದ್ದೀರಾ ಎಂದು ತಮಾಷೆ ಮಾಡಿದ್ದಾರೆ.

ಬಳಿಕ ಮಾತನಾಡಿದ ನಟಿಯು, ನನಗೆ ಡಿಫರೆಂಟ್ ಲುಕ್ ಮಾಡುವುದು ಇಷ್ಟ. ಅದಲ್ಲದೇ ನನ್ನ ಪಾತ್ರಗಳ ಆಯ್ಕೆಯು ಡಿಫರೆಂಟ್ ಆಗಿರುತ್ತದೆ” ಎಂದಿದ್ದಾರೆ.”ಇಷ್ಟು ವರ್ಷಗಳಲ್ಲಿ ನಾನು ಮಾಡಿರುವ ಪಾತ್ರಗಳಲ್ಲಿ ಒಂದಾ ಗ್ರಾಮೀಣ ಪಾತ್ರಗಳನ್ನು ತೆಗೆದುಕೊಂಡಿದ್ದೆ. ನಾನು ಕೆಲವೇ ಒಂದಕ್ಕೆ ಸೀಮಿತವಾಗಬಾರದು. ನಾನು ಪಾತ್ರಗಳಲ್ಲಿ ಕೆಲವೊಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತೇನೋ ಫೋಟೋ ಶೂಟ್ ಕೂಡ ಸುಮ್ನೆ ಮಾಡಿದ ಹಾಗೆ ಇರ್ಬಾರ್ದು. ಫೋಟೋಗ್ರಾಫರ್ ಸಿಕ್ಕಿದ್ರು, ಮೇಕ್ ಅಪ್ ಹಾಕಿದ್ದೇನೆ ಅನ್ನೋ ಹಾಗೆ ಇರ್ಬಾರ್ದು. ಫೋಟೋ ಶೂಟ್ ಕೂಡ ನೀಟ್ ಆಗಿ ಇರ್ಬೇಕು ಎಂದು ಅದಕ್ಕೂ ಎಫರ್ಟ್ ಹಾಕ್ತೇನೆಎಂದಿದ್ದರು.

ಕೆಟ್ಟದಾಗಿ ಕಾಮೆಂಟ್ ಮಾಡೋರಿಗೆ ಖಡಕ್ ಆಗಿ ಉತ್ತರ ನೀಡಿರುವ ನಟಿ ಚೈತ್ರಾ ಜೆ ಆಚಾರ್ ಅವರು, “ಇದೆಲ್ಲಾ ನಮ್ಮ ಸಂಸ್ಕೃತಿ ಅಲ್ಲ ಎಂದು ನೆಗೆಟಿವ್ ಕಾಮೆಂಟ್ ಮಾಡುವವರ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾನು ಕೇಳಿದ ಪ್ರಕಾರ ನಮ್ಮ ಸಂಸ್ಕೃತಿಯಲ್ಲಿ ಬ್ಲೌಸ್ ಎಲ್ಲಾ ಹಾಕ್ತಾ ಇರ್ಲಿಲ್ಲ. ಇವಾಗ ನಾವು ಯಾವುದನ್ನೂ ಫಾಲೋ ಮಾಡ್ಬೇಕು” ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೂ ಮೊದಲು ಸಂದರ್ಶನವೊಂದರಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡುವವರಿಗೆ ಚಳಿ ಬಿಡಿಸಿದ್ದರು.

ಸಂದರ್ಶನವೊಂದರಲ್ಲಿ ನಟಿ ಚೈತ್ರಾ ಜೆ ಆಚಾರ್, “ನನಗೆ ಯಾವ ವಿಚಾರ ತಪ್ಪು ಅಥವಾ ಸರಿ. ಎಲ್ಲಿ ಯಾವ ತರಹ ಇರಬೇಕು ಅನ್ನೋದು ಚೆನ್ನಾಗಿ ಗೊತ್ತು. ನಾನು ಬೆಳೆದು ಹಾದಿಯಲ್ಲಿ ನನ್ನ ಪೋಷಕರು ಮತ್ತು ಶಿಕ್ಷಕರು ನನಗೆ ಕಲಿಸಿ ಕೊಟ್ಟಿದ್ದಾರೆ. ನನ್ನ ಸಿನಿಮಾಗಳ ಮೂಲಕ ಜನಕ್ಕೆ ರೀಚ್ ಆಗುತ್ತೀದ್ದಿನಿ. ನಾನು ಏನೋ ಕೆಲಸ ಮಾಡಿದಾಗ ಒಳ್ಳೆತನದಿಂದ ಹಾರೈಸೋದು ತುಂಬಾ ಕಮ್ಮಿ. ಅವರನ್ನ ಕೆಳಗೆ ಇಳಿಸುವಂತಹ ಮನಸ್ಥಿತಿ ಇರೋರು. ಯಾವುದೇ ರೀತಿಯ ಪೋಸ್ಟ್ ಇದ್ದರು ಕೆಟ್ಟ ಕಾಮೆಂಟ್ ಮಾಡುತ್ತಾರೆ ನಾನು ನನ್ನ ಆಪ್ತರಿಂದ ಕಲಿತಿರೋದು ಏನೆಂದರೆ ನೆಗ್‌ಲೇಟ್ ಮಾಡಿ ಮುಂದಕ್ಕೆ ಹೋಗೋದು ಅಷ್ಟೇ” ಎಂದಿದ್ದರು. ಒಟ್ಟಿನಲ್ಲಿ ಯಾರು ಏನೇ ಕಾಮೆಂಟ್ ಮಾಡಿದರೂ ಕೂಡ ನಟಿ ಚೈತ್ರಾ ಜೆ ಆಚಾರ್ ಅವರು ತಮ್ಮ ಇಷ್ಟದಂತೆ ಬದುಕುತ್ತಿದ್ದಾರೆ.

Leave a Reply

Your email address will not be published. Required fields are marked *