ಕೆಟ್ಟದಾಗಿ ಕಾಮೆಂಟ್ ಮಾಡುವವರಿಗೆ ಖಡಕ್ ಆಗಿ ಉತ್ತರ ಕೊಟ್ಟ ಚಂದನವನದ ನಟಿ ಚೈತ್ರಾ ಕೆ ಆಚಾರ್

ಸಿನಿಮಾರಂಗದಲ್ಲಿರುವ ನಟ ನಟಿಯರು ಸಿನಿಮಾ ಹೊರತು ಪಡಿಸಿ ಇನ್ನಿತ್ತರ ವಿಚಾರಗಳಿಂದ ಸುದ್ದಿಯಾಗುತ್ತಿರುತ್ತಾರೆ. ನಟಿಯರಂತೂ ಬೋಲ್ಡ್ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಸುದ್ದಿಯಾಗುವುದೇ ಹೆಚ್ಚು. ಚಂದನವನದ (Sandalwood) ನಟಿ ಚೈತ್ರಾ ಆಚಾರ್ (Chaithra Achar) ಮತ್ತೆ ಸುದ್ದಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿರುವ ನಟಿ ಚೈತ್ರಾ ಆಚಾರ್ ಅವರು, ಗಾಯಕಿ (Singer) ಕಮ್ ನಟಿ (Actress) ಯಾಗಿ ಗುರುತಿಸಿಕೊಂಡವರು. ನಟಿ ಬೋಲ್ಡ್ ಫೋಟೋ ಶೂಟ್ ಮೂಲಕ ಸುದ್ದಿಯಾಗುತ್ತಿರುತ್ತಾರೆ.

ಶೂಟಿಂಗ್ ನಡುವೆ ಬಿಡುವು ಮಾಡಿಕೊಂಡು ಆಗಾಗ ಬೋಲ್ಡ್ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ನಟಿಯ ಬೋಲ್ಡ್ ಅವತಾರ ಕಂಡು ನೆಟ್ಟಿಗರು ಅನೇಕರು ಗರಂ ಆಗುತ್ತಿರುತ್ತಾರೆ, ನಾನಾ ರೀತಿಯಾಗಿ ಕಾಮೆಂಟ್ ಮಾಡುತ್ತಿರುತ್ತಾರೆ. ನೆಗೆಟಿವ್ (Negative Comments) ಕಾಮೆಂಟ್ ಮಾಡುವವರ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಬೇರೇ ಮನೆ ಹೆಣ್ಣು ಮಗಳ ಮರ್ಯಾದೆ ತೆಗೆಯಬೇಕು ಎಂದು ಪಣ ತೊಟ್ಟವರಿಗೆ ಏನು ಹೇಳೋದು ಎಂದು ಗರಂ ಆಗಿದ್ದಾರೆ.

ಖಾಸಗಿ ಸುದ್ದಿವಾಹಿನಿಯ ಜೊತೆಗೆ ಮಾತನಾಡಿರುವ ನಟಿ ಚೈತ್ರಾ ಕೆ ಆಚಾರ್ (Chaithra K Achar) ಅವರು, ನೆಗೆಟಿವ್ ಕಾಮೆಂಟ್ ಮಾಡುವವರ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ನನಗೆ ಯಾವ ವಿಚಾರ ತಪ್ಪು ಅಥವಾ ಸರಿ. ಎಲ್ಲಿ ಯಾವ ತರಹ ಇರಬೇಕು ಅನ್ನೋದು ಚೆನ್ನಾಗಿ ಗೊತ್ತು. ನಾನು ಬೆಳೆದು ಹಾದಿಯಲ್ಲಿ ನನ್ನ ಪೋಷಕರು ಮತ್ತು ಶಿಕ್ಷಕರು ನನಗೆ ಕಲಿಸಿ ಕೊಟ್ಟಿದ್ದಾರೆ. ನನ್ನ ಸಿನಿಮಾಗಳ ಮೂಲಕ ಜನಕ್ಕೆ ರೀಚ್ ಆಗುತ್ತೀದ್ದಿನಿ. ನಾನು ಏನೋ ಕೆಲಸ ಮಾಡಿದಾಗ ಒಳ್ಳೆತನದಿಂದ ಹಾರೈಸೋದು ತುಂಬಾ ಕಮ್ಮಿ. ಅವರನ್ನ ಕೆಳಗೆ ಇಳಿಸುವಂತಹ ಮನಸ್ಥಿತಿ ಇರೋರು. ಯಾವುದೇ ರೀತಿಯ ಪೋಸ್ಟ್ ಇದ್ದರು ಕೆಟ್ಟ ಕಾಮೆಂಟ್ ಮಾಡುತ್ತಾರೆ” ಎಂದಿದ್ದಾರೆ.

ನಾನು ನನ್ನ ಆಪ್ತರಿಂದ ಕಲಿತಿರೋದು ಏನೆಂದರೆ ನೆಗ್‌ಲೇಟ್ ಮಾಡಿ ಮುಂದಕ್ಕೆ ಹೋಗೋದು ಅಷ್ಟೇ. ನಾನು ನನ್ನ ಸಂಪಾದನೆಯಲ್ಲಿ ನನಗೆ ಹೇಗೆ ಬೇಕೋ ಹಾಗೇ ಖುಷಿಯಿಂದ ಬದುಕುತ್ತಾ ಇದ್ದೀನಿ. ನನ್ನ ಫಸ್ಟ್ ಸೈಮಾ ಕಾರ್ಯಕ್ರಮಕ್ಕೆ ನಾನೇ ಡಿಸೈನರ್ ತಿಳಿಸಿ ಆ ತರಹ ಬೋಲ್ಡ್ ಬಟ್ಟೆಯನ್ನ ಡಿಸೈನ್ ಮಾಡಿಸಿದ್ದೆ, ನಾನು ಮಾಡುವ ಪ್ರತಿ ಪಾತ್ರನೂ ಗ್ಲ್ಯಾಮರಸ್ ಆಗಿ ಇರೋದಿಲ್ಲ. ನಾನು ನಿಜ ಜೀವನದಲ್ಲಿ ತುಂಬಾ ಗ್ಲ್ಯಾಮರಸ್ ವ್ಯಕ್ತಿ. ನಾನು ಎಲ್ಲಾ ತರಹದ ಬಟ್ಟೆಯನ್ನ ಹಾಕುತ್ತೀನಿ. ಎಲ್ಲಿ ಯಾವ ತರಹದ ಬಟ್ಟೆ ಹಾಕಬೇಕು ಅನ್ನೋದು ನನಗೆ ಗೊತ್ತು. ನನಗೂ ಕೊಂಚ ಫ್ಯಾಷನ್ ಬಗ್ಗೆ ಅರಿವಿದೆ” ಎಂದು ಹೇಳಿದ್ದಾರೆ ನಟಿ ಚೈತ್ರಾ ಕೆ ಆಚಾರ್.

ಮಾತು ಮುಂದುವರೆಸಿರುವ ನಟಿ ಚೈತ್ರಾರವರು, ” ಹಾಡಿರೋದು ಹಾಡು ದೇವರದ್ದು, ಆದರೆ ಹಾಕುವ ಬಟ್ಟೆ ಈ ತರಹ ಅಂತಾ ಕಾಮೆಂಟ್ ಮಾಡಿದ್ದುಯಿದೆ. ಇವರೆಲ್ಲಾ ಯಾಕೆ ಹೀಗೆ.? ನಾನೇನು ಮಾಡೇಯಿಲ್ಲಾ ಅವರಿಗೆ, ಈ ನೆಗೆಟಿವ್ ಕಾಮೆಂಟ್‌ಗಳ ಬಗ್ಗೆ ಎರಡು ದಿನ ಭಾರಿ ಯೋಚನೆ ಮಾಡಿದ್ದುಂಟು. ನಾನು ಬೇಸರದಲ್ಲಿರೋದನ್ನ ನೋಡಿ ನನ್ನ ಸ್ನೇಹಿತರು ಪಾಸಿಟಿವ್ ಆಗಿ ನನ್ನ ಬೆಂಬಲಿಸಿದರು.

ನನಗೆ ನೆಗೆಟಿವ್ ಕಾಮೆಂಟ್ ಮಾಡೋವವರಿಗೆ ಒಳ್ಳೆಯ ಬುದ್ಧಿ ಕೊಡಲಿ ಅಂತಾ ಆಶಿಸುತ್ತೇನೆ. ಬೇರೇ ಮನೆ ಹೆಣ್ಣು ಮಕ್ಕಳ ಮೇಲೆ ಇಸಿಯಾಗಿ ಕಾಮೆಂಟ್ ಮಾಡಬಾರದು. ಪಾಸಿಟಿವ್ ಕಾಮೆಂಟ್ ಮಾಡುವ ಹೆಚ್ಚುವ ಜನರಿದ್ದಾರೆ. ನಾನ್ಯಾಕೆ ನೆಗೆಟಿವ್ ಕಡೆ ಯೋಚನೆ ಮಾಡಲಿ. ನಾನು ಬೆಳಿತಾ ಇರುತ್ತೀನಿ ಅವರು ಕಾಮೆಂಟ್ಸ್ ಮಾಡಿಕೊಂಡು ಕೂತಿರುತ್ತಾರೆ ಅಷ್ಟೇ ಜೀವನ ಅಂತಾ” ಎಂದು ಖಡಕ್ ಆಗಿ ಉತ್ತರ ನೀಡಿದ್ದಾರೆ.

Leave a Reply

Your email address will not be published. Required fields are marked *