ಗೀತಾ ಸೀರಿಯಲ್ ಖ್ಯಾತಿಯ ಭವ್ಯ ಗೌಡ ಹಾಗೂ ಧನುಷ್ ಅವರ ಫೋಟೋಗಳು ವೈರಲ್

ಕಿರುತೆರೆ ಲೋಕದ ಒಂದೇ ಒಂದು ಧಾರಾವಾಹಿಯೂ ನಟ ನಟಿಯರಿಗೆ ದೊಡ್ಡ ಮಟ್ಟಿಗಿನ ಜನಪ್ರಿಯತೆಯನ್ನು ತಂದುಕೊಡುತ್ತದೆ. ಕಿರುತೆರೆ ಲೋಕದಲ್ಲಿ ಜೊತೆಯಾಗಿ ಒಂದೇ ಸೀರಿಯಲ್ ನಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡ ನಟ ನಟಿಯರು ನಿಜ ಜೀವನದಲ್ಲಿ ರಿಯಲ್ ಜೋಡಿಗಳಾಗುವುದು ಹೊಸದೇನಲ್ಲ. ಹೀಗಾಗಿ ನಟಿ ಭವ್ಯ ಗೌಡ (Bhavya Gowda) ಹಾಗೂ ಧನುಷ್ (Dhanush) ಕೂಡ ಸುದ್ದಿಯಾಗುತ್ತಿರುತ್ತಾರೆ. ಈ ಇಬ್ಬರೂ ಕೂಡ ಕಲರ್ಸ್ ಕನ್ನಡ (Colours Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ (Geetha) ಧಾರಾವಾಹಿಯಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಆದರೆ ಈ ಜೋಡಿಯ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡುತ್ತಿರುತ್ತದೆ.

ಗೀತಾ ಧಾರಾವಾಹಿಯಲ್ಲಿ ಟಿಕ್ ಟಾಕ್ ಸ್ಟಾರ್ (Tik Tok Star) ಭವ್ಯಾಗೌಡ ನಾಯಕಿಯಾದರೆ, ಧನುಷ್ ಗೌಡ ನಾಯಕನ ಪಾತ್ರದಲ್ಲಿ ಮಿಂಚುತ್ತಿದ್ದು ಪ್ರೇಕ್ಷಕ ವರ್ಗಕ್ಕೆ ಹತ್ತಿರವಾಗಿದ್ದಾರೆ. ಗೀತಾ ಸೀರಿಯಲ್ ನಲ್ಲೂ ನಟಿಸುತ್ತಿರುವ ಧನುಷ್ ಹಾಗೂ ಭವ್ಯಾ ಗೌಡರವರು ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಇದೀಗ ಭವ್ಯಾ ಗೌಡ ಹಾಗೂ ಧನುಷ್ ಜೊತೆಯಾಗಿ ಫೋಟೋಗೆ ಪೋಸ್ ಕೊಟ್ಟಿರುವ ಫೋಟೋಗಳು ವೈರಲ್ (Viral) ಆಗಿವೆ. ಈ ಫೋಟೋಗಳಿಗೆ ನೂರಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ.

ಗೀತಾ ಧಾರಾವಾಹಿಯಿಂದ ಕಿರುತೆರೆ ಪ್ರೇಕ್ಷಕ ವರ್ಗಕ್ಕೆ ಹತ್ತಿರವಾಗಿದ್ದ ಈ ಜೋಡಿಯು ಈ ಹಿಂದೆ ಬಿಗ್ ಬಾಸ್ ಮಿನಿ ಸೀಸನ್ (Big Boss Mini Sisan) ನಲ್ಲಿ ಗೀತಾ ಹಾಗೂ ವಿಜಯ್ ಭಾಗವಹಿಸಿದ್ದರು. ಬಿಗ್ ಬಾಸ್ ಮಿನಿ ಸೀಸನ್ ನಲ್ಲಿ ಈ ಜೋಡಿಯ ಅನ್ಯೋನ್ಯತೆ ಕಂಡು ಕಿರುತೆರೆ ಪ್ರೇಕ್ಷಕರು ಶಾಕ್ ಆಗಿದ್ದರು. ನಟಿ ಭವ್ಯಾ ಗೌಡ ಹಾಗೂ ಧನುಷ್ ಇವರಿಬ್ಬರೂ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಲೇ ಇವೆ. ಈ ಹಿಂದೆ ತಮ್ಮ ಹಾಗೂ ಭವ್ಯಾ ಗೌಡರವರ ಮದುವೆಯ ಕುರಿತು ಸ್ಪಷ್ಟನೆ ನೀಡಿದ್ದ ಧನುಷ್ , ‘ ನಾನು ಇನ್ನೂ ಸಿಂಗಲ್, ನಾನು ಯಾರ ಜೊತೆ ಕೂಡ ಲವ್ ನಲ್ಲಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ನಟ ಧನುಷ್ ಅವರು ಒಳ್ಳೆಯ ವ್ಯಕ್ತಿತ್ವವುಳ್ಳ ಹುಡುಗ, ಗೀತಾ ಧಾರಾವಾಹಿ ಬಿಟ್ಟು ಬೇರೆ ಯಾವುದರಲ್ಲಿ ನಟಿಸುತ್ತಿಲ್ಲ. ಬಿಡುವು ಸಿಕ್ಕಾಗಲೆಲ್ಲ ಜಿಮ್ ವರ್ಕ್ ಔಟ್ ಎಂದು ಬ್ಯುಸಿಯಾಗಿರುತ್ತಾರೆ. ಅದಲ್ಲದೇ ತಮ್ಮ ಕೆರಿಯರ್ ಬಗ್ಗೆ ಸಾಕಷ್ಟು ಕನಸು ಹೊತ್ತುಕೊಂಡಿದ್ದು, ಆ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಇತ್ತ ನಟಿ ಭವ್ಯಾ ಗೌಡರವರು ಗೀತಾ ಸೀರಿಯಲ್ ಬಳಿಕ ಬೆಳ್ಳಿತೆರೆಯಲ್ಲಿಯೂ ಸಕ್ರಿಯರಾಗಿದ್ದಾರೆ.

ಆಗಾಗ ನಟಿ ಭವ್ಯಾ ಗೌಡರವರ ರೀಲ್ಸ್ ಮಾಡುತ್ತಿರುತ್ತಾರೆ. ಡಿಯರ್ ಕಣ್ಮಣಿ (Dear Kanmani)ಎಂಬ ಸಿನಿಮಾ ಮೂಲಕ ಭವ್ಯ ಗೌಡ ಬೆಳ್ಳಿತೆರೆಗೆ ಕಾಲಿಟ್ಟರು. ಸದ್ಯಕ್ಕೆ ಗೀತಾ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ನಟಿ ಭವ್ಯಾ ಗೌಡರವರಿಗೆ ಅವಕಾಶಗಳು ಬರುತ್ತಿದೆ. ಹೀಗಾಗಿ ನಟಿ ಭವ್ಯಾ ಗೌಡ ವೃತ್ತಿ ಜೀವನದದಲ್ಲಿ ಬ್ಯುಸಿಯಾಗಿದ್ದು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *