ಡಿ ಬಾಸ್ ಅವರ ಜೊತೆಗೆ ಕಾಣಿಸಿಕೊಂಡ ಜೊತೆ ಜೊತೆಯಲಿ ಖ್ಯಾತಿಯ ನಟಿ ಆಶಿತಾ ಚಂದ್ರಪ್ಪ, ಈ ಅಪರೂಪದ ಫೋಟೋಗಳು ವೈರಲ್

ಕನ್ನಡ ಕಿರುತೆರೆ ಲೋಕದಲ್ಲಿ ಕೇವಲ ಒಂದೇ ಒಂದು ಧಾರಾವಾಹಿ ಮೂಲಕ ಜನಪ್ರಿಯತೆಯನ್ನು ಗಳಿಸಿಕೊಂಡವರು ನಟಿ ಆಶಿತಾ ಚಂದ್ರಪ್ಪ ( Ashitaa Chandrappa). ಆಶಿತಾ ಚಂದ್ರಪ್ಪ ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯ ನಟಿಮಣಿಯರಲ್ಲಿ ಒಬ್ಬರಾಗಿದ್ದಾರೆ. ನೀಲೀ (Neeli), ಜೊತೆ ಜೊತೆಯಲಿ (Jote Joteyali) ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು. ಕನ್ನಡ ಬಿಗ್ ಬಾಸ್ (Big Boss) ನಲ್ಲಿ ಭಾಗವಹಿಸಿದ್ದಾರೆ. ರಾಧಾ ರಮಣ (Radha Ramana) ದಲ್ಲಿ ನಟಿಸಿದ್ದರೂ ಕೂಡ ಹೆಸರು ತಂದುಕೊಟ್ಟದ್ದು ಮಾತ್ರ ಜೊತೆ ಜೊತೆಯಲ್ಲಿ ತಂದುಕೊಟ್ಟದ್ದು ಎಂದರೆ ತಪ್ಪಾಗಲಾರದು.

ಆದರೆ ಇದೀಗ ನಟಿ ಆಶಿತಾ ಚಂದ್ರಪ್ಪನವರ ವಿಶೇಷ ಫೋಟೋವೊಂದು ವೈರಲ್ ಆಗಿವೆ. ಈ ಫೋಟೋದಲ್ಲಿ ಚಂದನವನದ ಸ್ಟಾರ್ ನಟ ದರ್ಶನ್ (Darshan) ಅವರ ಜೊತೆಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ನಟಿ ಆಶಿತಾ ಚಂದ್ರಪ್ಪನವರು ಡಿ ಬಾಸ್ ಜೊತೆಗೆ ಕಾಣಿಸಿಕೊಂಡಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಫೋಟೋಗೆ ಎಂಟುನೂರಕ್ಕೂ ಅಧಿಕ ವ್ಯೂಸ್ ಕಂಡಿದೆ.

ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ನಟಿ ಆಶಿತಾ ಚಂದ್ರಪ್ಪರವರು 2021 ರಲ್ಲಿ ಮಾರ್ಚ್ 31ರಂದು ರೋಹನ್ ರಾಘವೇಂದ್ರ (Rohan Raghavendra) ರವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಹೌದು, ಈ ರೋಹನ್ ರಾಘವೇಂದ್ರ ಹಾಗೂ ಆಶಿತಾ ಚಂದ್ರಪ್ಪ ಬಹುಕಾಲದಿಂದ ಸ್ನೇಹಿತರಾಗಿದ್ದರು. ಕೊನೆಗೂ ತಮ್ಮಿಬ್ಬರ ಸ್ನೇಹಕ್ಕೆ ಮದುವೆ ಎನ್ನುವ ಮುದ್ರೆ ಒತ್ತಿದ್ದು, ನಟಿಯ ಮದುವೆಗೆ ಸ್ನೇಹಿತರು ಸೇರಿದಂತೆ ಕುಟುಂಬದ ಸದಸ್ಯರು ಮಾತ್ರ ಭಾಗಿಯಾಗಿದ್ದರು.

ನಟಿಯ ವಿವಾಹ ಕಾರ್ಯಕ್ರಮದಲ್ಲಿ ಕಿರುತೆರೆ ನಟ ಕಾರ್ತಿಕ್ ಜಯರಾಂ, ನಟಿ ತೇಜಸ್ವಿನಿ ಪ್ರಕಾಶ್, ಜಗನ್ನಾಥ್ ಚಂದ್ರಶೇಖರ್ ಸೇರಿದಂತೆ ಕೆಲವು ನಟ ನಟಿಯರು ಆಗಮಿಸಿ ಮದುವೆಗೆ ಸಾಕ್ಷಿಯಾಗಿದ್ದರು. ನಟಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟಿವ್ ಆಗಿರುವ ಆಶಿತಾ ಚಂದ್ರಪ್ಪ ಅಮ್ಮನ ಬಗ್ಗೆ ಆಗಾಗ ಪೋಸ್ಟ್ ಹಾಕುವುದು ಮಾಮೂಲಿ. ಹೀಗಾಗಿ ನಟಿ ಮದುವೆಯ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದರು.

ಅದಲ್ಲದೆ ನಟಿ ಆಶಿತಾ ಚಂದ್ರಪ್ಪನವರು ಮದುವೆಯ ಸುಂದರ ಕ್ಷಣದಲ್ಲಿ ಅಮ್ಮನನ್ನು ನೆನಪಿಸಿಕೊಂಡಿದ್ದರು. ಅಮ್ಮನಿಲ್ಲದೆ ನಡೆದ ಮದುವೆಯ ಕುರಿತು ಭಾವನಾತ್ಮಕವಾಗಿ ಪೋಸ್ಟ್ ವೊಂದನ್ನು ಶೇರ್ ಮಾಡಿಕೊಂಡಿದ್ದರು. ಕನ್ನಡ ಕಿರುತೆರೆಲೋಕದಲ್ಲಿ ಜೊತೆ ಜೊತೆಯಲಿ ಧಾರಾವಾಹಿಯಿಂದ ಫೇಮಸ್ ಆದ ಇವರಿಗೆ ದೊಡ್ಡ ಸಂಖ್ಯೆಯಲ್ಲಿ ಫಾನ್ಸ್ ಬಳಗವಿದೆ. ಅದಲ್ಲದೇ ನಟಿ ಆಶಿತಾ ಚಂದ್ರಪ್ಪರವರನ್ನು ಕಿರುತೆರೆಯ ಪರದೆಯ ಮೇಲೆ ನೋಡುವ ಆಸೆ ಫ್ಯಾನ್ಸ್ ಗಳಿಗಿದೆ.

Leave a Reply

Your email address will not be published. Required fields are marked *