ಡಿ ಬಾಸ್ ಜೋತೆ ಕಾಟೇರ ಸಿನಿಮಾದಲ್ಲಿ ನಟಿಸಲು ಮಾಲಾಶ್ರೀ ಮಗಳು ಆರಾಧನಾ ಪಡೆದ ಸಂಭಾವನೆ ಎಷ್ಟು ಗೊತ್ತಾ? ಅಬ್ಬಾ ಇಷ್ಟೊಂದಾ..

ಇತ್ತೀಚೆಗಿನ ದಿನಗಳಲ್ಲಿ ತಂದೆ ತಾಯಿಯ ಹಾದಿಯನ್ನೇ ಅನುಸರಿಸುವ ಮೂಲಕ ಸೆಲೆಬ್ರಿಟಿಗಳ ಮಕ್ಕಳು ಕೂಡ ಬಣ್ಣದ ಲೋಕದತ್ತ ಮುಖ ಮಾಡುತ್ತಿದ್ದಾರೆ. ಅವಕಾಶಗಳು ಸಿಕ್ಕೊಡನೆ ಬಿಟ್ಟುಕೊಡದೇ ನಾಯಕ ನಾಯಕಿರಾಗಿ ತೆರೆ ಮೇಲೆ ಮೋಡಿ ಮಾಡಲು ಸಜ್ಜಾಗುತ್ತಿದ್ದಾರೆ. ಈ ವಿಚಾರದಲ್ಲಿ ಸ್ಯಾಂಡಲ್ ವುಡ್ ನ ಕನಸಿನ ರಾಣಿ ಮಾಲಾಶ್ರೀ (Malashree) ಹಾಗೂ ನಿರ್ಮಾಪಕ ದಿ. ಕೋಟಿ ರಾಮು (Koti Ram) ರವರ ಮಗಳು ಆರಾಧನಾ ರಾಮು (Aradhana Ram) ಕೂಡ ಹೊರತಾಗಿಲ್ಲ.

ರಾಕ್ ಲೈನ್ ವೆಂಕಟೇಶ್ (Rockline Venkatesh) ನಿರ್ಮಾಣದಲ್ಲಿ, ತರುಣ್ ಸುಧೀರ್ (Tarun Sudheer) ನಿರ್ದೇಶಿಸುತ್ತಿರುವ ಕಾಟೇರ (Kaatera) ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದಾಳೆ. ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ಕೆಲವೇ ದಿನಗಳಲ್ಲಿ ತೆರೆ ಮೇಲೆ ಅಬ್ಬರಿಸಲಿದೆ. ಈ ಸಿನಿಮಾದ ಮೂಲಕ ಆರಾಧನಾ ರಾಮ್. ಅವರು ನಟಿಯಾಗಿ ಸ್ಯಾಂಡಲ್ ವುಡ್ ಗೆ ಸೇರ್ಪಡೆಯಾಗಲಿದ್ದಾರೆ.

ಹೌದು, ಮುಂಬೈ (Mumbai) ನಲ್ಲಿ ಆ್ಯಕ್ಟಿಂಗ್ ತರಬೇತಿ ಪಡೆದ ಆರಾಧನಾ​, ಮೊದಲ ಸಿನಿಮಾದಲ್ಲೇ ದರ್ಶನ್ ಅವರ ಜೊತೆ ಅಭಿನಯಿಸುವ ಅವಕಾಶ ಪಡೆದುಕೊಂಡಿದ್ದು, ಮೊದಲ ಸಿನಿಮಾದಲ್ಲಿಯೇ ನಟಿ ಆರಾಧನಾ ರಾಮುರವರು ಹೇಗೆ ಕಾಣಿಸಿಕೊಂಡಿದ್ದಾರೆ ಎನ್ನುವ ಕುತೂಹಲ ಪ್ರೇಕ್ಷಕ ವರ್ಗಕ್ಕೆ ಇದೆ. ಅದಲ್ಲದೇ ಈ ನಡುವೆ ನಟಿ ಆರಾಧನಾ ರಾಮುರವರ ಸಂಭಾವನೆ ವಿಚಾರವು ಚರ್ಚೆಯಾಗುತ್ತಿದೆ.

ಆದರೆ ಬಲ್ಲಮೂಲಗಳ ಪ್ರಕಾರ ಆರಾಧನಾ ಕಾಟೇರ ಸಿನಿಮಾದಲ್ಲಿ ಅಭಿನಯಿಸಲು ತೆಗೆದುಕೊಂಡ ಸಂಭಾವನೆ (Remuneration) ಯ ಮಾಹಿತಿಯೊಂದು ಹೊರ ಬಿದ್ದಿದೆ. ಅಂದಹಾಗೆ ಆರಾಧನಾ ರಾಮುರವರು ಈ ಸಿನಿಮಾದ ನಟನೆಗಾಗಿ ಬರೋಬ್ಬರಿ 10 ಲಕ್ಷ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಇನ್ನು ನಟಿ ಮಾಲಾಶ್ರೀ – ನಿರ್ಮಾಪಕ ರಾಮು ಪುತ್ರಿ ಅನನ್ಯಾ (Ananya) ಹೆಸರನ್ನು ರಾಧನಾ ರಾಮು ಎಂದು ಬದಲಾಯಿಸಿಕೊಂಡಿದ್ದರು.

ಆದಾದ ಬಳಿಕ ಹೆಸರನ್ನು ಮತ್ತೆ ಆರಾಧನಾ (Aradhana) ಎಂದು ಬದಲಿಸಿಕೊಂಡಿದ್ದರು.ಲಕ್ ಗಾಗಿ ಮತ್ತೆ ಪುನಃ ಹೆಸರನ್ನು ಬದಲಾಯಿಸಿಕೊಂಡಿದ್ದರು ಎನ್ನಲಾಗಿತ್ತು. ತಮ್ಮ ಹೆಸರು ಬದಲಾಯಿಸಿಕೊಂಡ ಬಗ್ಗೆ ಮಾಹಿತಿ ಶೇರ್ ಮಾಡಿದ್ದು, ‘ಎಲ್ಲರಿಗೂ ನಮಸ್ಕಾರ. ನಾನು ನಿಮ್ಮ ರಾಧನಾ ರಾಮ. ಇಂದಿನಿಂದ ನನ್ನ ಹೆಸರು ಆರಾಧನಾ ಎಂದು ನಿಮಗೆ ಸುದ್ದಿ ನೀಡಲು ನಾನು ಬಯಸುತ್ತೇನೆ. ಈ ಬದಲಾವಣೆಗಾಗಿ ನಿಮ್ಮೆಲ್ಲರ ಆಶೀರ್ವಾದವನ್ನು ನೀಡಬೇಕೆಂದು ನಾನು ಕೇಳುತ್ತೇನೆ.

ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ತುಂಬಾ ಧನ್ಯವಾದಗಳು ಮತ್ತು ಇದು ಯಾವಾಗಲೂ ನನ್ನೊಂದಿಗೆ ಸದಾ ಇರಲಿ ಎಂದು ಕೇಳಿಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದರು. ಮಗಳ ಹೆಸರನ್ನು ಬದಲಾವಣೆಯ ಮಾಡಿರುವ ಬಗ್ಗೆ ನಟಿ ಮಾಲಾಶ್ರೀ (Malashree) ಯವರು ಪ್ರತಿಕ್ರಿಯೆ ನೀಡಿದ್ದು , “ನಾನು, ರಾಕ್ ಲೈನ್ ವೆಂಕಟೇಶ್ ಹಾಗೂ ತರುಣ್ ಸುಧೀರ್ ಮೂರು ಜನ ಚರ್ಚಿಸಿ ಆರಾಧನಾ ಎಂಬ ಹೆಸರನ್ನು ಆಯ್ಕೆ ಮಾಡಿದ್ದೇವೆ.

ಈ ಹೆಸರು ಬರೀ ಚಿತ್ರಕ್ಕೆ ಮಾತ್ರವಲ್ಲ. ಇನ್ನು ಮುಂದೆ ನನ್ನ ಮಗಳ ಹೆಸರೇ ಆರಾಧನಾ.ಮುಂದಿನ ಚಿತ್ರಗಳಲ್ಲೂ ಆರಾಧನಾ ಎಂಬ ಹೆಸರಿನಿಂದಲೇ ಅಭಿನಯಿಸಿಲಿದ್ದಾರೆ. ತಾವೆಲ್ಲರೂ ಮುಂದೆ ಆರಾಧನಾ ಹೆಸರನ್ನೇ ಬಳಸಿಕೊಳ್ಳಬೇಕೆಂದು ” ಎಂದು ಮನವಿ ಮಾಡಿದ್ದರು. ಬಹುನಿರೀಕ್ಷಿತ ಕಾಟೇರ ಸಿನಿಮಾವು ಇದೇ ಡಿಸೆಂಬರ್ 29 (December 26) ಕ್ಕೆ ತೆರೆ ಮೇಲೆ ಅಪ್ಪಳಿಸಲಿದ್ದು, ದರ್ಶನ್ ಹಾಗೂ ಆರಾಧನಾ ಜೋಡಿ ತೆರೆ ಮೇಲೆ ಹೇಗೆ ಕಮಲ್ ಮಾಡಲಿದ್ದಾರೆ ಎನ್ನುವುದನ್ನು ಕಾದುನೋಡಬೇಕು.

Leave a Reply

Your email address will not be published. Required fields are marked *