ಕನ್ನಡ ಕಿರುತೆರೆ ಲೋಕದಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಕೆಲವೊಮ್ಮೆ ಒಬ್ಬ ಕಲಾವಿದ ನು ಸಿಕ್ಕಾಪಟ್ಟೆ ಫೇಮಸ್ ಮಾಡಿಬಿಡುತ್ತದೆ. ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಈಗಾಗಲೇ ಸಾಕಷ್ಟು ಧಾರಾವಾಹಿಗಳು ಹಾಗೂ ಕಲಾವಿದರು ಉದಾಹರಣೆಯಾಗಿ ನಿಲ್ಲುತ್ತಾರೆ. ಹೌದು ಜೊತೆ ಜೊತೆಯಲಿ (Jote Joteyali) ಧಾರಾವಾಹಿ ಮೂಲಕ ಜನಪ್ರಿಯತೆಯನ್ನು ಗಳಿಸಿಕೊಂಡಿರುವ ಪುಷ್ಪ (Pushpa) ಅಲಿಯಾಸ್ ಅಪೂರ್ವಶ್ರೀ (Apoorvashree) ಯಾರಿಗೆ ತಾನೇ ಗೊತ್ತಿಲ್ಲ?.
ಈ ಧಾರಾವಾಹಿಯಲ್ಲಿ ಅಪೂರ್ವಶ್ರೀಯವರು ಅನು ಸಿರಿಮನೆಯವರ ತಾಯಿ ಪುಷ್ಪ ಪಾತ್ರ ನಿರ್ವಹಿಸುತ್ತ ಕಿರುತೆರೆ ಪ್ರೇಕ್ಷಕ ವರ್ಗಕ್ಕೆ ಹತ್ತಿರವಾಗಿದ್ದಾರೆ. ಅದಲ್ಲದೇ ನಟಿ ಅಪೂರ್ವಶ್ರೀ ಹೆಚ್ಚು ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಲು ಕಾರಣವಾಗಿದ್ದು ಸೂಪರ್ ಕ್ವೀನ್ (Super Queen) ರಿಯಾಲಿಟಿ ಶೋ. ಈ ವೇದಿಕೆಯ ಮೇಲೆ ತನ್ನ ಬದುಕಿನ ಕೆಲವು ವಿಚಾರಗಳನ್ನು ರಿವೀಲ್ ಮಾಡಿದ್ದರು. ಈ ಶೋನಲ್ಲಿ ನಟಿ ಅಪೂರ್ವಶ್ರೀಯವರ ಮಗಳು ಮೊದಲ ಬಾರಿಗೆ ರಿಯಾಲಿಟಿ ಶೋ ವೇದಿಕೆ ಮೇಲೆ ಕಾಣಿಸಿಕೊಂಡಿದ್ದು.
ಇದೀಗ ವೈರಲ್ ಆಗಿರುವ ಫೋಟೋದಲ್ಲಿ ನಟಿ ಅಪೂರ್ವಶ್ರೀ ಹಾಗೂ ಮಗಳು ರಾಜ್ವಿ (Rajvi) ಅವರು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ ನಟಿ ಅಪೂರ್ವಶ್ರೀ ರೆಡ್ ಕಲರ್ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರೆ, ಮಗಳು ರಾಜ್ವಿ ಬ್ಲೂ ಕಲರ್ ಜೀನ್ಸ್, ಬ್ಲಾಕ್ ಅಂಡ್ ವೈಟ್ ಟಿ ಶರ್ಟ್ ಧರಿಸಿದ್ದಾರೆ. ಇವರಿಬ್ಬರ ಪಕ್ಕದಲ್ಲಿ ಮುದ್ದಿನ ಶ್ವಾನವೊಂದು ಇದೆ. ಈ ಫೋಟೋ ನೋಡುತ್ತಿದ್ದಂತೆ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.

ಓದು, ಬರಹ ಗೊತ್ತಿಲ್ಲದಿದ್ದರೂ ಯಾವುದೇ ಡೈಲಾಗ್ ಕೊಟ್ಟರೂ ಕೂಡ ಸಲೀಸಾಗಿ ಹೇಳುತ್ತಾರೆ. ನಟಿ ಅಪೂರ್ವಶ್ರೀಯವರು 1992ರಲ್ಲಿ ಮಲ್ಲಿಗೆ ಹೂವೇ ( Mallige Huve) ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ತದನಂತರದಲ್ಲಿ ಸುಂದರಿ ಗಂಡ ಸದಾನಂದ, ದಾಸ, ಜಾಕಿ, ಅಣ್ಣಬಾಂಡ್, ಕಲ್ಪನ, ಮಿಲನ, ಸುಂಟರಗಾಳಿ, ಗಾಜಿನ ಮನೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಹೀರೋಯಿನ್ ಆಗಿ ನಟಿಸಲು ಅವಕಾಶ ಸಿಕ್ಕರೂ, ಆಗಿನ ಕಾಲದಲ್ಲಿ ತಬ್ಬಿಕೊಳ್ಳಬೇಕು, ಮುತ್ತು ಕೊಡಬೇಕು ಎನ್ನುವ ಒಂದೇ ಕಾರಣಕ್ಕೆ ನಾಯಕಿಯಾಗಿ ಕಾಣಿಸಿಕೊಳ್ಳಲೇ ಇಲ್ಲ. ಆ ಸಮಯದಲ್ಲಿ ಮಂಜುಳಾ ಗುರುರಾಜ್ (Manjula Gururaj) ಅವರ ಜೊತೆಗೆ ಆರ್ಕೆಸ್ಟ್ರಾಗಳಲ್ಲಿ ಸುಮಾರು 5-6 ವರ್ಷಗಳ ಕಾಲ ಡ್ಯಾನ್ಸ್ ಮಾಡುತ್ತಿದ್ದ ಇವರು ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಎಲ್ಲದರಿಂದಲೂ ದೂರವಿದ್ದರು.

ಸುಮಾರು ಎಂಟು ವರ್ಷಗಳ ಕಾಲ ಮನೆಯಲ್ಲೇ ಇದ್ದ ಇವರಿಗೆ ಮತ್ತೆ ಕಿರುತೆರೆಯಲ್ಲಿ ಅವಕಾಶಗಳು ಹುಡುಕಿಕೊಂಡು ಬಂದಿತು. ಲಕುಮಿ ಧಾರಾವಾಹಿಯಿಂದ ಶುರುವಾದ ಜರ್ನಿ ಜೊತೆ ಜೊತೆಯಲಿ (Jote Joteyali), ನಮ್ಮನೆ ಯುವರಾಣಿ (Nammane Yuvarani) ಯವರೆಗೂ ಬಂದು ತಲುಪಿದೆ. ಇಂದು ಕನ್ನಡ ಕಿರುತೆರೆ ಲೋಕದಲ್ಲಿ ಬಾರಿ ಬೇಡಿಕೆಯನ್ನು ಹೊಂದಿರುವ ನಟಿ ಅಪೂರ್ವಶ್ರೀಯವರಿಗೆ ಅವಕಾಶಗಳು ಬರುತ್ತಿದ್ದು ಬ್ಯುಸಿಯಾಗಿದ್ದಾರೆ.
