ಪಿಂಕ್ ಬಣ್ಣದ ಉಡುಗೆಯಲ್ಲಿ ಕ್ಯಾಮೆರಾಗೆ ಪೋಸ್ ಆಶಿಕಾ ರಂಗನಾಥ್ ತಂಗಿ ಅನುಷಾ ರಂಗನಾಥ್. ಚೆಂದುಳ್ಳಿ ಚೆಲುವೆ ಹೇಗಿದಾಳೆ ನೋಡಿ!!

ಕನ್ನಡ ಸಿನಿಮಾರಂಗದಲ್ಲಿ ಅಕ್ಕ ತಂಗಿಯರಿಬ್ಬರು ಬದುಕು ಕಟ್ಟಿಕೊಂಡಿರುವ ಅನೇಕ ನಟಿಯರು ಕಾಣಸಿಗುತ್ತಾರೆ. ಈ ಸಾಲಿಗೆ ನಟಿ ಆಶಿಕಾ ರಂಗನಾಥ್ (Ashika Ranganath) ಹಾಗೂ ಅನುಷಾ ರಂಗನಾಥ್ (Anusha Ranganath) ಸೇರಿಕೊಳ್ಳುತ್ತಾರೆ. ಅಕ್ಕನಂತೆ ಸಹೋದರಿ ಆಶಿಕಾ ರಂಗನಾಥ್‌ ಕೂಡ ಸಿನಿಮಾ ರಂಗದಲ್ಲಿ ಭರವಸೆ ಮೂಡಿಸಿರುವ ನಟಿಯಾಗಿದ್ದಾರೆ. ಅಕ್ಕನಂತೆಯೇ ತಾವೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಈ ಅನುಷಾ ರಂಗನಾಥ್ ಅವರದ್ದಾಗಿದೆ.

ಸೋಶಿಯಲ್‌ ಮಿಡಿಯಾ (Social Media) ಗಳಲ್ಲಿ ಸಕ್ರಿಯವಾಗಿರುವ ಅನುಷಾ, ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಇದೀಗ ನಟಿ ಅನುಷಾ ರಂಗನಾಥ್ ಅವರು ಶೇರ್ ಮಾಡಿಕೊಂಡಿರುವ ಫೋಟೋವೊಂದು ಎಲ್ಲರ ಗಮನ ಸೆಳೆಯುತ್ತಿವೆ. ಪಿಂಕ್ ಬಣ್ಣದ ಉಡುಗೆಯಲ್ಲಿ ಸುಂದರವಾಗಿ ಕಂಗೊಳಿಸಿರುವ ನಟಿ ಅನುಷಾ ರಂಗನಾಥ್ ಅವರ ಫೋಟೋಗೆ ಮೆಚ್ಚುಗೆ ವ್ಯಕ್ತವಾಗಿವೆ. ಅದಲ್ಲದೇ ಹದಿನಾರು ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ.

ಅನುಷಾ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ ಎನ್ನುವುದನ್ನು ಮತ್ತೆ ಮತ್ತೆ ಹೇಳಬೇಕಾಗಿಲ್ಲ. ಸಹೋದರಿ ಆಶಿಕಾ ರಂಗನಾಥ್ ಕೂಡ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಸಕ್ರಿಯರಾಗಿದ್ದು, ಅವರಂತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅನುಷಾ ರಂಗನಾಥ್‌, ಗೋಕುಲದಲ್ಲಿ ಸೀತೆ (Gokulayalli Seethe) ಧಾರವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.

ಈ ಧಾರಾವಾಹಿಯಲ್ಲಿ ಎಲ್ಲರ ಮನಸ್ಸು ಗೆದ್ದ ಚೆಲುವೆ ಅನುಷಾ ರಂಗನಾಥ್ ಅವರು, ಬಳಿಕ ಕಿರುತೆರೆಯಿಂದ ಬೆಳ್ಳಿ ತೆರೆಗೂ ಕಾಲಿಟ್ಟರು. ಅನುಷಾ ರಂಗನಾಥ್‌ ಲೈಫ್‌ 360 (Life 360), ದಿ ಗ್ರೇಟ್‌ ಸ್ಟೋರಿ ಆಫ್‌ ಆನಂದವನ (The Great Of Anandavana), ಒನ್ಸ ಮೋರ್ ಕೌರವ (Once More Kowrava), ಸೋಡಾಬುಡ್ಡಿ (Sodaabuddi) ಮುಂತಾದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗಾಲೇ ’10’ ಚಿತ್ರದಲ್ಲಿ ವಿನಯ್‌ ರಾಜ್‌ಕುಮಾರ್‌ (Vinay Rajkumar) ಅವರ ಜೋಡಿಯಾಗಿ ನಟಿಸಿದ್ದು, ಈ ಚಿತ್ರದ ಮೇಲೆ ಪ್ರೇಕ್ಷಕರ ನಿರೀಕ್ಷೆ ಬಹಳ ಹೆಚ್ಚಾಗಿದೆ.

ಈ ಹಿಂದೆಯಷ್ಟೇ “ಯಾವಾಗೂ ನನ್ನನ್ನು ಸಹೋದರಿಯಂತೆ ಕಾಣುತ್ತೇನೆ ಎಂದು ಎಲ್ಲರೂ ಹೇಳುತ್ತಾರೆ. ಸಹೋದರಿಯ ಹೆಸರು ಹೇಳದೆ ಯಾವತ್ತೂ ಸಂಭಾಷಣೆಗಳು ಪೂರ್ಣಗೊಂಡಿಲ್ಲ. ಕನ್ನಡ ಚಿತ್ರರಂಗ ಇಬ್ಬರನ್ನೂ ಒಪ್ಪಿಕೊಂಡಿದೆ. ನಮ್ಮಿಬ್ಬರ ಅಭಿರುಚಿ ಕೂಡ ಒಂದೇ ರೀತಿ ಇದೆ. ಆದರೆ ಸಹೋದರಿ ಜೊತೆಗಿನ ಸ್ಪರ್ಧೆಯಲ್ಲಿ ನಾನಿಲ್ಲ. ಇನ್ನು ಕನ್ನಡದಲ್ಲಿ ಉತ್ತಮ ಪಾತ್ರದ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಆ ಮೂಲಕ ವಿಭಿನ್ನ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಹಂಬಲವಿದೆ” ಎಂದಿದ್ದರು. ನಟಿ ಅನುಷಾ ರಂಗನಾಥ್ ಅವರಿಗೆ ಇನ್ನಷ್ಟು ಅವಕಾಶಗಳು ಬರಲಿ ಎನ್ನುವುದೇ ಆಶಯ.

Leave a Reply

Your email address will not be published. Required fields are marked *