ಸೀರೆಯಲ್ಲಿ ಮಿಂಚಿದ ಚಂದನವನದ ನಟಿ ಅನುಪ್ರಭಾಕರ್, ನಟಿಯ ಅಪರೂಪದ ಫೋಟೋಗಳು ಹೇಗಿವೆ ಗೊತ್ತಾ?

ಬಣ್ಣದ ಲೋಕದಲ್ಲಿ ಇವತ್ತಿಗೂ ಕೂಡ ಹಿಂದಿನಷ್ಟೇ ಬೇಡಿಕೆಯನ್ನು ಹೊಂದಿರುವ ನಟ ನಟಿಯರು ಇದ್ದಾರೆ. ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡು ಬಂದ ನಟ ನಟಿಯರ ಸಾಲಿಗೆ ಅನುಪ್ರಭಾಕರ್ (Anuprabhakar) ಅವರು ಸೇರಿಕೊಳ್ಳುತ್ತಾರೆ. ಸದ್ಯಕ್ಕೆ ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿದ್ದು ನಟನೆ ಹಾಗೂ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ನಟಿ ಅನುಪ್ರಭಾಕರ್ ಅವರು ಮಾಡ್ರನ್ (Modern) ಆಗಿ ಕಾಣಿಸಿಕೊಳ್ಳುತ್ತಿರುವುದು ತೀರಾ ಕಡಿಮೆ. ಸೀರೆ ಉಟ್ಟು ಭಾರತೀಯ ನಾರಿಯ ಹಾಗೆ ಗಮನ ಸೆಳೆಯುವ ನಟಿಯ ಸೌಂದರ್ಯವನ್ನು ಮತ್ತೆ ಹೆಚ್ಚು ಮಾಡುವುದು ಅವರ ಮುಖದ ನಗು. ಇದೀಗ ಪಿಂಕ್ ಬಣ್ಣದ ಸೀರೆಯಲ್ಲಿರುವ ನಟಿ ಅನು ಪ್ರಭಾಕರ್ ಅವರ ಫೋಟೋಗಳು ವೈರಲ್ ಆಗಿವೆ. ಪಿಂಕ್ ಬಣ್ಣದ ಸೀರೆಯಲ್ಲಿ ಕಂಗೊಳಿಸಿರುವ ನಟಿಯ ಮುಖದ ತುಂಬಾ ನಗುವಿದೆ. ಈ ಫೋಟೋ ನೋಡಿದ ನೆಟ್ಟಿಗರು ನಟಿಯ ಸೌಂದರ್ಯಕ್ಕೆ ಫಿದಾ ಆಗಿದ್ದಾರೆ.

ಚಿಕ್ಕ ವಯಸ್ಸಿನಲ್ಲಿಯೇ ಸ್ಯಾಂಡಲ್ ವುಡ್ ನಲ್ಲಿ ಸಕ್ರಿಯರಾಗಿದ್ದ ನಟಿ ಅನು ಪ್ರಭಾಕರ್ ಅವರು ಚಪಲ ಚೆನ್ನಿಗರಾಯ (Chapala Chennigaraya), ಶಾಂತಿ ಕ್ರಾಂತಿ (Shanthi Kranthi) ಚಿತ್ರದಲ್ಲಿ ನಟಿಸಿದ್ದರು. ಅನು ಪ್ರಭಾಕರ್ ನಟನೆಯ ಮೊದಲ ಸಿನಿಮಾವೆಂದರೆ ಅದು, ಹೃದಯಾ ಹೃದಯಾ (Hrudaya Hrudaya) 1998 ರಲ್ಲಿ ತೆರೆಕಂಡಿತ್ತು. ಈ ಸಿನಿಮಾ ಕೂಡ ಸೂಪರ್ ಹಿಟ್ ಆಯಿತು. ನಂತರದಲ್ಲಿ ನಟಿ ಅನು ಪ್ರಭಾಕರ್ ಅವರಿಗೆ ಸಾಲು ಸಾಲು ಅವಕಾಶಗಳು ಬಂದವು.

ಅನೇಕ ಸಿನಿಮಾಗಳಲ್ಲಿ ನಾಯಕಿ ಹಾಗೂ ತಂಗಿಯ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿ ಸೈ ಎನಿಸಿಕೊಂಡರು. ಸೂರಪ್ಪ, ಹೃದಯವಂತ, ಸಾಹುಕಾರ, ವರ್ಷ ಹೀಗೆ ಅನೇಕ ಸಿನಿಮಾಗಳಲ್ಲಿ ತಮ್ಮ ನಟನೆಯಿಂದಲೇ ಸಿನಿ ರಸಿಕರ ಮನಸ್ಸನ್ನು ಗೆದ್ದರು. ನಟಿ ಅನು ಪ್ರಭಾಕರ್ ಅವರಿಗೆ ಸಿನಿಮಾರಂಗದ ಸಾಧನೆಗಾಗಿ ಅನೇಕ ಪ್ರಶಸ್ತಿಗಳು ಬಂದಿವೆ.

ಆದರೆ ನಟಿ ಅನುಪ್ರಭಾಕರ್ ಅವರ ವೈವಾಹಿಕ ಜೀವನದಲ್ಲಿ ಏರಿಳಿತಗಳಾದವು. ಪ್ರಾರಂಭದಲ್ಲಿ ನಟಿ ಜಯಂತಿ (Jayanthi) ಯವರ ಪುತ್ರ ಕೃಷ್ಣ ಕುಮಾರ್ (Krishna Kumar) ಅವರು 2002 ರಲ್ಲಿ ನಟಿ ಅನು ಪ್ರಭಾಕರ್ ಅವರನ್ನು ಪ್ರೀತಿಸಿ ಮದುವೆಯಾದರು. ಆದರೆ ಸುಮಾರು ಹನ್ನೆರಡು ವರ್ಷಕ್ಕೂ ಹೆಚ್ಚು ಕಾಲ ಜೊತೆಯಾಗಿ ಸಂಸಾರ ನಡೆಸಿದ್ದ ಈ ದಂಪತಿಗಳು 2014 ರಲ್ಲಿ ಕೂಡ ಡೈ-ವೋರ್ಸ್ ಪಡೆದುಕೊಂಡರು.

ಆದಾದ ಬಳಿಕ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದ ನಟಿ 2016 ರಲ್ಲಿ ನಟ ರಘು ಮುಖರ್ಜಿ (Raghu Mukharji) ಅವರ ಜೊತೆಗೆ ಹೊಸ ಜೀವನಕ್ಕೆ ಕಾಲಿಟ್ಟರು. ಇದೀಗ ಈ ದಂಪತಿಗಳಿಗೆ ಮುದ್ದಾದ ಹೆಣ್ಣು ಮಗು ಇದೆ. ಇತ್ತೀಚಿಗಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನಮ್ಮ ಸೂಪರ್ ಸ್ಟಾರ್ ಎಂಬ ರಿಯಾಲಿಟಿ ಶೋದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿರುವ ನಟಿ ಎನಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *