ಟ್ರಡಿಷನಲ್ ಲುಕ್ ನಲ್ಲಿ ಕಂಗೊಳಿಸಿದ ಕಿರುತೆರೆಲೋಕದ ಬೆಡಗಿ ಅನುಪಮಾ ಗೌಡ

ಕನ್ನಡ ಕಿರುತೆರೆ ಮಾತಿನಮಲ್ಲಿ, ಬೋಲ್ಡ್‌ ನಟಿ ಅನುಪಮಾ ಗೌಡ (Anupama Gowda) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ತಮ್ಮ ನಟನೆ ಹಾಗೂ ಮಾತಿನ ಮೂಲಕ ಒಂದು ಕ್ಷಣ ಎಲ್ಲರನ್ನು ಬೆರಗು ಮೂಡಿಸುವಂತೆ ಮಾಡುತ್ತಾರೆ. ತಮ್ಮದೇ ಯುಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅಡಲ್ಲದೆ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಸುದ್ದಿಯಲ್ಲಿರುತ್ತಾರೆ. ಆದರೆ ಇದೀಗ ಟ್ರಡಿಷನಲ್ ಲುಕ್ ನಲ್ಲಿ ಕಾಣಿಸಿಕೊಂಡು ಸುದ್ದಿಯಲ್ಲಿದ್ದಾರೆ.

ನಟಿ ಅನುಪಮಾ ಗೌಡರವರು ಬಿಳಿ ಹಾಗೂ ಕೆಂಪು ಬಣ್ಣದ ಸೀರೆಯುಟ್ಟು ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಉಡುಗೆಗೆ ಹೊಂಡುವಂತೆ ಜ್ಯೂವೆಲ್ಲರಿ ಹಾಗೂ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ. ಈ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ನಿಮ್ಮ ದೇಶಿ ಹುಡುಗಿ ಎಂದು ಬರೆದುಕೊಂಡಿದ್ದಾರೆ. ಈ ಫೋಟೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿಕೊಂಡಿದ್ದಾರೆ. ಅದಲ್ಲದೇ ನಟಿ ಅನುಪಮಾ ಗೌಡರವರ ಈ ಫೋಟೋಗೆ ನಲವತ್ತೆಂಟು ಸಾವಿರಕ್ಕೂ ಅಧಿಕ ವ್ಯೂಸ್ ಕಂಡಿದೆ.

ಕನ್ನಡದ ಕೆಲ ಧಾರಾವಾಹಿ ಹಾಗೂ ಚಿತ್ರಗಳಲ್ಲಿ ಅಭಿನಯಿಸಿರುವ ಅನುಪಮಾ ಗೌಡ, ನಿರೂಪಕಿಯಾಗಿಯೂ ಗುರುತಿಸಿಕೊಂಡವರು. 2003ರಲ್ಲಿ ಬಿಡುಗಡೆಯಾಗಿದ್ದ ದರ್ಶನ್ ಅಭಿನಯದ ಲಂಕೇಶ್ ಪತ್ರಿಕೆ ( Lankesh Patrike) ಚಿತ್ರದಲ್ಲಿ ಬಾಲನಟಿಯಾಗಿ ನಟಿಸುವ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ನಗರಿ (Nagari) ಎಂಬ ಚಿತ್ರದಲ್ಲಿ ನಾಯಕಿಯಾಗಿ ಎರಡನೇ ಇನ್ನಿಂಗ್ಸ್ ಶುರು ಮಾಡಿದರು. ತದನಂತರದಲ್ಲಿ ಕರಾಳ ರಾತ್ರಿ, ತ್ರಯಂಬಕಂ, ಬೆಂಕಿಯಲ್ಲಿ ಅರಳಿದ ಹೂವು ನಟಿಸಿದ್ದು ಸೈ ಎನಿಸಿಕೊಂಡಿದ್ದಾರೆ.

ಆದಾದ ಬಳಿಕ ಯಾವುದೇ ಸಿನಿಮಾದಲ್ಲಿಯೂ ನಟಿಸಿಲ್ಲ. 2014ರಲ್ಲಿ ಆರಂಭವಾದ ಅಕ್ಕ (Akka) ಧಾರಾವಾಹಿಯೂ ಅನುಪಮಾ ಗೌಡರಿಗೆ ಬ್ರೇಕ್ ನೀಡಿತು. ಈ ಧಾರಾವಾಹಿ ಅನುಪಮಾ ಗೌಡಗೆ ನೇಮ್ ಹಾಗೂ ಫ್ರೇಮ್ ಎರಡನ್ನೂ ತಂದುಕೊಟ್ಟಿತ್ತು. ಈ ಧಾರಾವಾಹಿಗೂ ಮುನ್ನ ಚಿ ಸೌ ಸಾವಿತ್ರಿ (Chi Sow Savithri) ಧಾರಾವಾಹಿಯಲ್ಲಿಯೂ ನಟಿಸಿದ್ದರು. ಆದಾದ ಬಳಿಕ ನಟಿ ಅನುಪಮಾ ಗೌಡರವರಿಗೆ ಬಿಗ್ ಬಾಸ್ (Big Boss) ನಲ್ಲಿ ಭಾಗವಹಿಸಿದ್ದರು.

ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ನಿರೂಪಕಿಯಾಗಿ ಕಿರುತೆರೆಗೆ ಎಂಟ್ರಿ ಕೊಟ್ಟರು. ಮಜಾ ಭಾರತ (Maja Bharatha) ಶೋ ನಿರೂಪಕಿ ಯಾಗಿ ಹೊರ ಹೊಮ್ಮಿದ್ದರು. ತದನಂತರದಲ್ಲಿ ರಾಜಾ ರಾಣಿ ( Raja Rani) ಹಾಗೂ ನಮ್ಮಮ್ಮ ಸೂಪರ್ ಸ್ಟಾರ್ (Nammamma Super Star) ಶೋವನ್ನು ನಿರೂಪಣೆ ಮಾಡಿದ್ದರು. ರಾಜ ರಾಣಿ ಸೀಸನ್ 1 ರಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು.

ಆದರೆ ನಟಿ ಅನುಪಮಾ ಗೌಡರವರು ರಾಜ ರಾಣಿ ಸೀಸನ್ 2 ನಲ್ಲಿ ನಿರೂಪಕಿಯಾಗಿ ಅನುಪಮಾ ಗೌಡ ಕಾಣಿಸಿಕೊಳ್ಳಲಿಲ್ಲ. ಹೀಗಿರುವಾಗ ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1 ( Big Boss Kannada OTT Sisan 1) ರಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದರು. ಇದೀಗ ವೃತ್ತಿ ಜೀವನದಲ್ಲಿ ಸ್ವಲ್ಪ ಬಿಡುವು ಮಾಡಿಕೊಂಡು ಬೇರೆ ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ. ನಟಿ ಅನುಪಮಾ ಗೌಡ ವೃತ್ತಿ ಜೀವನದ ಕುರಿತು ಏನು ಅಪ್ಡೇಟ್ ನೀಡುತ್ತಾರೆ ಎಂದು ಕಾದುನೋಡಬೇಕಾಗಿದೆ.

Leave a Reply

Your email address will not be published. Required fields are marked *