ಕನ್ನಡ ಕಿರುತೆರೆಯ ಈ ಬೆಸ್ಟ್ ಫ್ರೆಂಡ್ಸ್ ಅನುಪಮಾ ಗೌಡ ಹಾಗೂ ನೇಹಾ ಗೌಡ ಅಪರೂಪದ ಕ್ಷಣ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ಫೋಟೋಸ್

ಕನ್ನಡ ಕಿರುತೆರೆ ಲೋಕದಲ್ಲಿ ಒಂದಷ್ಟು ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ. ಈ ಸೆಲೆಬ್ರಿಟಿಗಳು ಜೊತೆ ಜೊತೆಯಾಗಿ ಟ್ರಿಪ್, ಬರ್ತ್ಡೇ ಸೆಲೆಬ್ರೇಶನ್ ಮಾಡುತ್ತಿರುತ್ತಾರೆ. ಅಂತಹ ಕಿರುತೆರೆ ಲೋಕ ಬೆಸ್ಟ್ ಫ್ರೆಂಡ್ಸ್ ಗಳ ಸಾಲಿಗೆ ಕನ್ನಡ ಕಿರುತೆರೆಯ ನಟಿಯರಾದ ನಟಿ ಅನುಪಮಾ ಗೌಡ (Anupama Gowda) ಹಾಗೂ ನೇಹಾ ಗೌಡ (Neha Gowda)ಕೂಡ ಸೇರಿಕೊಳ್ಳುತ್ತಾರೆ.

ಹೌದು, ನೇಹಾ ಗೌಡ (Neha Gowda) ಹಾಗೂ ಅನುಪಮಾ ಗೌಡ (Anupama Gowda) ಬಹಳ ಕಾಲದಿಂದ ಸ್ನೇಹಿತರು. ಹೀಗಾಗಿ ಇವರಿಬ್ಬರೂ ಅನೇಕ ವೇದಿಕೆಗಳು, ಬಿಗ್ ಬಾಸ್ ಶೋ (Big Boss Show)ನಲ್ಲಿಯೂ ತಮ್ಮ ಸ್ನೇಹದ ಬಗ್ಗೆ ಹೇಳಿಕೊಂಡು ಹೆಮ್ಮೆ ಪಟ್ಟುಕೊಂಡಿದ್ದರು. ಆದರಂತೆ ಇದೀಗ ಅನುಪಮಾ ಗೌಡ ಹಾಗೂ ನೇಹಾ ಗೌಡರವರ ಫೋಟೋಗಳು ವೈರಲ್ ಆಗಿವೆ. ಈ ಫೋಟೋದಲ್ಲಿ ಈ ಇಬ್ಬರೂ ಗಟ್ಟಿಯಾಗಿ ತಬ್ಬಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ನೇಹಾ ಗೌಡ (Neha Gowda)ರವರಿಗೆ ಹುಟ್ಟುಹಬ್ಬದ ಸಂಭ್ರಮವಾಗಿತ್ತು. ಹೀಗಾಗಿ ನೇಹಾ ಗೌಡರವರ ಹುಟ್ಟುಹಬ್ಬಕ್ಕೆ ಕಿರುತೆರೆ ನಟಿ ಕಮ್ ನಿರೂಪಕಿ ಅನುಪಮಾ ಗೌಡ ವಿಶೇಷವಾಗಿ ವಿಶ್ ಮಾಡಿದ್ದಾರೆ. ತಮ್ಮ ಸ್ನೇಹಿತೆಯ ಹುಟ್ಟುಹಬ್ಬವನ್ನು ತಮ್ಮ ಹುಟ್ಟುಹಬ್ಬ ಎನ್ನುವಂತೆ ಸಂಭ್ರಮಿಸಿದ್ದರು. ಆದರೆ ಇದೀಗ ನಟಿ ನೇಹಾ ಗೌಡರ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಫೋಟೋದ ಜೊತೆಗೆ ಒಂದಷ್ಟು ಸಾಲುಗಳನ್ನು ಬರೆದುಕೊಂಡಿದ್ದಾರೆ.

ನೇಹಾ ಗೌಡರವರ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ನಟಿ ಅನುಪಮಾ ಗೌಡ, “ನೀನು ಯಾವಾಗಲೂ ನನ್ನ ಸಂತೋಷದ ಭಾಗವಾಗಿದ್ದಿಯಾ. ನಾನು ದುಃಖಿತರಾದಾಗ ನೀನು ನನ್ನೊಂದಿಗೆ ನಿಂತಿದ್ದೀಯಾ. ನಿನ್ನ ದಯೆ, ತಮಾಷೆ, ಹುಚ್ಚು ಹಾಗೂ ಎಲ್ಲಾದಕ್ಕೂ ಮುಖ್ಯ ವಾಗಿ ಸುಂದರ ಆತ್ಮವಾಗಿದ್ದೀಯ. ಈ ಸ್ನೇಹಕ್ಕಾಗಿ ಹಾಗೂ ನಾವಿಬ್ಬರೂ ಕಳೆದ 12 ವರ್ಷಗಳಿಂದ ಹಂಚಿಕೊಂಡ ಅದ್ಭುತ ಕ್ಷಣಗಳಿಗಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ! ಎಲ್ಲದಕ್ಕೂ ಧನ್ಯವಾದಗಳು.ಜನ್ಮದಿನದ ಶುಭಾಶಯಗಳು ನಿನಗೆ ಉತ್ತಮ ಆರೋಗ್ಯ, ಸಂತೋಷ ಮತ್ತು ಅದ್ಭುತ ಭವಿಷ್ಯಕ್ಕಾಗಿ ಪ್ರಾರ್ಥಿಸುತ್ತೇನೆಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಓದು ಮುಗಿಯುತ್ತಿದ್ದಂತೆ ನಟಿ ನೇಹಾ ಗೌಡ ಲಕ್ಷ್ಮಿ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ನಟಿ ನೇಹಾ ಗೌಡರವರಿಗೆ ಬ್ ಲಕ್ಷ್ಮಿ ಬಾರಮ್ಮ ಧಾರಾವಾಹಿ ಬ್ರೇಕ್ ನೀಡಿತು. ಈ ಹಿಂದೆಯಷ್ಟೇ ರಾಜಾ ರಾಣಿ ಶೋನಲ್ಲಿ ಭಾಗವಹಿಸಿ ವಿಜೇತರಾಗಿ ಹೊರಹೊಮ್ಮಿದ್ದರು. ಇತ್ತೀಚೆಗಷ್ಟೇ ನಮ್ಮ ಲಚ್ಚಿ (Namma Lacchi) ಧಾರಾವಾಹಿಯಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನೇಹಾಗೌಡರವರು ಕೆಲವೇ ಕೆಲವು ಧಾರಾವಾಹಿಯಲ್ಲಿ ನಟಿಸಿದರೂ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ. ನಟಿ ನೇಹಾ ಗೌಡರವರಿಗೆ ಇನ್ನಷ್ಟು ಅವಕಾಶಗಳು ಲಭಿಸಲಿ ಎನ್ನುವುದೇ ಆಶಯ.

Leave a Reply

Your email address will not be published. Required fields are marked *