ಕನ್ನಡ ಕಿರುತೆರೆ ಪ್ರೇಕ್ಷಕರ ಮನಸ್ಸು ಗೆದ್ದುಕೊಂಡಿದ್ದ ಧಾರಾವಾಹಿಗಳ ಪೈಕಿ ಕಮಲಿ (Kamali) ಧಾರಾವಾಹಿ ಕೂಡ ಒಂದು. ಈ ಧಾರಾವಾಹಿಯಲ್ಲಿ ಕಮಲಿಯ ಜೀವದ ಗೆಳತಿಯಾಗಿ ನಿಂಗಿ (Ningi) ಪಾತ್ರದಲ್ಲಿ ನಟಿಸಿದ್ದ ಅಂಕಿತಾರವರು ಎಲ್ಲರಿಗೂ ಕೂಡ ಚಿರಪರಿಚಿತರಾಗಿದ್ದಾರೆ. ರಿಯಲ್ ಲೈಫ್ ನಲ್ಲಿ ಪಕ್ಕಾ ಮಾಡರ್ನ್ ಹುಡುಗಿಯಾಗಿದ್ದು, ಇದೀಗ ಇವರ ವಿಶೇಷ ಫೋಟೋವೊಂದು ವೈರಲ್ ಆಗಿವೆ. ಇದೀಗ ನಟಿ ಅಂಕಿತಾ (Ankitha) ಹಾಗೂ ಅವರ ಪತಿ ಸುಹಾಸ್ (Suhas) ಫೋಟೋವೊಂದು ಸೋಶಿಯಲ್ ಮೀಡಿಯಾ (Social Media) ದಲ್ಲಿ ವೈರಲ್ ಆಗಿದ್ದು, ಈ ಫೋಟೋಗೆ ನೂರಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ.
2021 ರಲ್ಲಿ ಅಂಕಿತಾ ಸುಹಾಸ್ ಜೊತೆಗೆ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದರು. ಒಂದು ವರ್ಷದ ಬಳಿಕ ನಿಂಗಿ ಅಲಿಯಾಸ್ ಅಂಕಿತಾರವರು ಸುಹಾಸ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 2022 ರಲ್ಲೂ ನಟಿ ಅಂಕಿತಾ ಅವರು ಸುಹಾಸ್ ಅವರನ್ನು ಮದುವೆಯಾಗಿ ಹೊಸ ಜೀವನ ಆರಂಭಿಸಿದ್ದರು. ನಟಿಯು ಬೆಂಗಳೂರಿ (Banglore) ನಲ್ಲಿ ಇವರು ಮದುವೆಯಾಗಿದ್ದು, ಕಮಲಿ ಧಾರಾವಾಹಿಯ ಕಲಾವಿದರು ಸೇರಿ ಹಲವರು ಭಾಗಿಯಾಗಿ ಶುಭ ಹಾರೈಸಿದ್ದರು.
ನಟಿ ಅಂಕಿತಾರವರ ಪತಿ ಸುಹಾಸ್ ಕೆನಡಾ (Canada) ದಲ್ಲಿ ನೆಲೆಸಿದ್ದು, ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸುಹಾಸ್ ಬೆಂಗಳೂರಿನವರಾಗಿದ್ದಾರೆ. ನಟಿ ಅಂಕಿತಾ ಅಯ್ಯರ್ ಅವರ ಹಿನ್ನಲೆ ಗಮನಿಸುವುದಾದರೆ ಅಂಕಿತಾ ಅವರು ಧಾರಾವಾಹಿ ಜೊತೆಗೆ ಡ್ಯಾನ್ಸಿಂಗ್ ಚಾಂಪಿಯನ್ ಶೋ (Dance Champiyan Show) ನಲ್ಲೂ ಭಾಗವಹಿಸಿದ್ದರು. ಅಂಕಿತಾ ಮೂಲತಃ ತಮಿಳಿನ ಐಯ್ಯರ್ ಕುಟುಂಬದವರು, ಬೆಳೆದ್ದೆಲ್ಲಾ ಬೆಂಗಳೂರಿನಲ್ಲಿ. ಬೆಂಗಳೂರಿನಲ್ಲಿ ಬಿಇ ಓದಿದ್ದ ಅಂಕಿತಾ ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದರು.
ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಂಕಿತಾ ಅವರಿಗೆ ನಟನೆ ಬಗ್ಗೆ ಹೆಚ್ಚು ಆಸಕ್ತಿಯಿದ್ದ ಕಾರಣ ಹೀಗಾಗಿ ಫೋಟೊಶೂಟ್ (Photoshoot) ಮಾಡಿಸಿದ್ದರು. ಮೊದಲ ಬಾರಿಗೆ ‘ಬಂಗಾರಿ’ (Bangari) ಎಂಬ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೇ, ಶ್ರೀಕ್ಷೇತ್ರ (Shreekshetra) ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದರು. ಅದಲ್ಲದೇ ಮಿಸ್ ಕರ್ನಾಟಕ (Miss Karnakata) ದಲ್ಲಿ ರನ್ನರ್ ಅಪ್ ಆಗಿದ್ದರು. ನಂತರದಲ್ಲಿ ಕಮಲಿ (Kamali) ಸೀರಿಯಲ್‌ನಲ್ಲಿ ನಟಿಸುವ ಅವಕಾಶ ಬಂದಿತು.
ಕಮಲಿ ಧಾರಾವಾಹಿ ಬಳಿಕ ತಮಿಳು ಸೇರಿದಂತೆ ಪರಭಾಷೆಗಳ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಅಂಕಿತಾ ಅವರಿಗೆ ಬರುತ್ತಿದೆ. ಆದರೆ ಕಿರುತೆರೆಯಲ್ಲಿಯೇ ನಟಿಸಬೇಕು ಎನ್ನುವ ಸಲುವಾಗಿ ಸಿನಿಮಾಗಳನ್ನು ಒಪ್ಪಿಕೊಳ್ಳಲಿಲ್ಲ. ಆದರೆ ನಟಿಗೆ ಕಮಲಿ ಧಾರಾವಾಹಿ ತಂದುಕೊಟ್ಟ ಖ್ಯಾತಿ ಒಂದೆಡೆಯಾದರೆ, ಇತ್ತ ಕನ್ನಡ ಕಿರುತೆರೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ.