Actress anjali : ಸಿನಿ ಲೋಕವನ್ನು ನಂಬಿ ಬಂದ ಅದೆಷ್ಟೋ ಕಲಾವಿದರಿಗೆ ಬದುಕು ನೀಡಿದೆ. ಆದರೆ ಈ ಲೋಕದಲ್ಲಿ ಬದುಕು ಕಟ್ಟಿಕೊಂಡು ಯಶಸ್ವಿಯಾಗುವುದು ಸುಲಭದ ಮಾತಲ್ಲ. ಸಿನಿಮಾಲೋಕ ದೂರದಿಂದ ನೋಡಲು ಸುಂದರವಾಗಿ ಕಂಡರೂ ಕೂಡ ಈ ಲೋಕದಲ್ಲಿ ಒಳ್ಳೆಯದು ಕೆಟ್ಟದ್ದು ಎರಡು ಕೂಡ ಇದೆ. ಆದರೆ ಆ ಕುರಿತು ಯಾರು ಕೂಡ ಹೇಳಿಕೊಳ್ಳುವುದಿಲ್ಲ.
ಒಂದು ವೇಳೆ ಯಾವುದೇ ಸಿನಿಮಾರಂಗದ ಅಸಲಿ ಮುಖದ ಬಗ್ಗೆ ಬಾಯಿ ಬಿಟ್ಟರೆ ಚಿತ್ರರಂಗವು ಅವರನ್ನು ಮರೆತು ಬಿಡುತ್ತದೆ. ಆದರೆ ಕೆಲವು ನಟಿಯರು ಸಿನಿಮಾರಂಗದಲ್ಲಿ ತಮಗಾದ ಕಹಿ ಅನುಭವದ ಬಗ್ಗೆ ಬಾಯಿ ಬಿಡುತ್ತಾರೆ. ಸಿನಿ ಲೋಕದಲ್ಲಿ ಬದುಕು ಕಟ್ಟಿಕೊಂಡವರಲ್ಲಿ ನಟಿ ಅಂಜಲಿ ಕೂಡ ಒಬ್ಬರು. ತೆಲುಗು ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ ನಟಿ ಅಂಜಲಿ. ಅಷ್ಟೇ ಅಲ್ಲದೇ ಕನ್ನಡ ಸಿನಿ ಪ್ರೇಕ್ಷಕರಿಗೂ ಪರಿಚಿತರಾಗಿದ್ದಾರೆ.
ಪುನೀತ್ ರಾಜ್‌ಕುಮಾರ್ ಜೊತೆ ‘ರಣವಿಕ್ರಮ’ ಸೇರಿ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂಜಲಿ ಕಿಸ್ಸಿಂಗ್ ಸೀನ್ ಮತ್ತು ಇಂಟಿಮೇಟ್ ಸಿನಿಮಾಗಳ ಬಗ್ಗೆ ಮಾತನಾಡಿದ್ದು, ಸಿನಿ ಲೋಕದಲ್ಲಿನ ತನ್ನ ಅನುಭವವನ್ನು ಬಿಚ್ಚಿಟ್ಟಿದ್ದಾರೆ.ಸದ್ಯಕ್ಕೆ ಶಂಕರ್ ನಿರ್ದೇಶನದಲ್ಲಿ ರಾಮ್‌ಚರಣ್ ನಟನೆಯ ಹೊಸ ಚಿತ್ರದಲ್ಲಿ ನಟಿ ಅಂಜಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ‘ಫಾಲ್’ ಎನ್ನುವ ವೆಬ್ ಸೀರಿಸ್‌ನಲ್ಲಿ ನಟಿಸಿದ್ದಾರೆ.
ಅಂದಹಾಗೆ, ಅಂಜಲಿ ನಟನೆಯ ತಮಿಳಿನ ‘ಫಾಲ್’ ವೆಬ್ ಸೀರಿಸ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ವೆಬ್ ಸಿರೀಸ್ ಗೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಈ ವೆಬ್ ಸೀರಿಸ್ ಪ್ರಮೋಷನ್ ಭಾಗವಾಗಿ ಸಂದರ್ಶನಗಳಲ್ಲಿ ಭಾಗಿಯಾಗಿದ್ದು, ಸಿನಿಮಾಗಳಲ್ಲಿ ಹಾಟ್ ದೃಶ್ಯಗಳಲ್ಲಿ ನಟಿಸುವ ಬಗ್ಗೆ ಮಾತನಾಡಿದ್ದು, ಪಾತ್ರಕ್ಕಾಗಿ ಕೆಲವೊಮ್ಮೆ ಅಂತಹ ಸನ್ನಿವೇಶಗಳಲ್ಲಿ ನಟಿಸಬೇಕಾಗುತ್ತದೆ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ನಟಿ ಅಂಜಲಿ, “ನನ್ನ ಕರಿಯರ್‌ನಲ್ಲಿ ಎಂತಹ ಕಷ್ಟದ ಪಾತ್ರದಲ್ಲಿ ನಟಿಸುವುದಕ್ಕೂ ಸಿದ್ಧ. ಆದರೆ ಇಷ್ಟವಿಲ್ಲದ ವ್ಯಕ್ತಿಗಳ ಜೊತೆ ಇಂಟಿಮೇಟ್ ಸೀನ್‌ಗಳಲ್ಲಿ ನಟಿಸೋದು ಕಷ್ಟ. ಅಂತಹವರ ಜೊತೆ ಕಿಸ್ಸಿಂಗ್ ಸೀನ್‌ನಲ್ಲಿ ಕಾಣಿಸಿಕೊಳ್ಳುವುದು ಅಂದರೆ ನರಕ. ಕೆಲವೊಮ್ಮೆ ನನಗೆ ಅಂತಹ ಸನ್ನಿವೇಶಗಳು ಎದುರಾಗಿದೆ. ಏನೇ ಅಭಿನಯ ಆದರೂ ಒಂದು ಹಂತದವರೆಗೂ ಓಕೆ.

ಅದು ಮಿತಿ ಮೀರಿದರೆ ತಡೆದುಕೊಳ್ಳುವುದು ನಿಜಕ್ಕೂ ಕಷ್ಟ. ನಾವು ಒಂದು ಪಾತ್ರವಾಗಿ ನಟಿಸುತ್ತೇವೆ. ಆ ಪಾತ್ರ ನಗಬೇಕು, ಅಳಬೇಕು, ಅದೇ ರೀತಿ ರೊಮ್ಯಾಂಟಿಕ್ ಸೀನ್‌ನಲ್ಲಿ ಕಾಣಿಸಿಕೊಳ್ಳಬೇಕು ಅಂದರೆ ಕಾಣಿಸಿಕೊಳ್ಳಲೇಬೇಕು. ಈ ಕಥೆ ಹೇಳುವಾಗಲೂ ಇಂತಹ 2 ಸನ್ನಿವೇಶಗಳು ಇದೆ. ನೀವು ನಟಿಸಿದರೆ ಚೆನ್ನಾಗಿರುತ್ತದೆ ಎಂದರು. ನಾನು ಆ ಬಗ್ಗೆ ಎಲ್ಲಾ ಚರ್ಚಿಸಿ ನಂತರ ನಟಿಸಲು ಒಪ್ಪಿದೆ ಎಂದಿದ್ದಾರೆ.
ಕೆಲವೊಮ್ಮೆ ಇಷ್ಟವಿಲ್ಲದವರ ಜೊತೆ ಇಂಟಿಮೇಟ್ ಸೀನ್‌ನಲ್ಲಿ ನಟಿಸಿದ ನಂತರ ಕ್ಯಾರವ್ಯಾನ್‌ಗೆ ಹೋಗಿ ಅತ್ತಿದ್ದು ಇದೆ. ಇಷ್ಟವಿಲ್ಲದಿದ್ದರೂ ಅದನ್ನು ಮಾಡಬೇಕು ಅಂದಾಗ ನೋವಾಗುತ್ತದೆ” ಎಂದಿದ್ದಾರೆ.ಅಷ್ಟೇ ಅಲ್ಲದೇ, “ಇಂತಹ ಸನ್ನಿವೇಶಗಳ ಚಿತ್ರೀಕರಣದ ವೇಳೆ ಕೆಲವೇ ಜನ ಸೆಟ್‌ನಲ್ಲಿ ಇರುತ್ತಾರೆ ಎಂದು ಹೇಳುತ್ತಾರೆ. ಒಂದು ಸೀನ್ ಚಿತ್ರೀಕರಣ ಅಂದರೆ ನಿರ್ದೇಶಕ, ಕ್ಯಾಮರಾಮನ್, ಹೀರೊ ಹೀಗೆ ಕೊನೆ ಪಕ್ಷ 15 ಜನ ಆದರೂ ಇರಲೇಬೇಕಾಗುತ್ತದೆ.
ಅವರ ಮುಂದೆ ನಟಿಸೋದು ಹೆಣ್ಣು ಮಕ್ಕಳಿಗೆ ನಿಜಕ್ಕೂ ಕಷ್ಟ ಆಗುತ್ತದೆ. ಅದು ನಿಜಕ್ಕೂ ಅಭಿನಯ ಆಗಿರುತ್ತದೆ. ಆ ದೃಶ್ಯದ ನಂತರ ಮತ್ತೊಂದು ದೃಶ್ಯದಲ್ಲಿ ಅದೇ ನಟನ ಜೊತೆ ಜಗಳ ಆಡುವ ಸನ್ನಿವೇಶವನ್ನು ಶೂಟ್ ಮಾಡುತ್ತೇವೆ. ಆದರೂ ಆ ಕ್ಷಣಕ್ಕೆ ಬಹಳ ನೋವಾಗುತ್ತದೆ” ಎಂದು ಹೇಳಿದ್ದಾರೆ. ನಟಿ ಅಂಜಲಿ ಈ ರೀತಿ ಹೇಳುತ್ತಿದ್ದಂತೆ ಆಕೆ ಯಾವ ಯಾವ ಚಿತ್ರದಲ್ಲಿ ಕಿಸ್ಸಿಂಗ್ ಸೀನ್‌ನಲ್ಲಿ ನಟಿಸಿದ್ದರು? ಎಂದು ನೆಟ್ಟಿಗರು ಹುಡುಕಾಡುತ್ತಿದ್ದಾರೆ.
‘ಸತಿ ಲೀಲಾವತಿ’ ಚಿತ್ರದಲ್ಲಿ ಇಂತದ್ದೇ ಹಾಟ್ ಸನ್ನಿವೇಶದಲ್ಲಿ ನಟಿಸಿದ್ದರು. ‘ಪಾವ’ ಕದೈಗಳ್ ಚಿತ್ರದಲ್ಲಿ ಬಾಲಿವುಡ್ ನಟಿ ಕಲ್ಕಿ ಕೊಚ್ಲಿನ್ ಜೊತೆಗೂ ಲಿಪ್ ಲಾಕ್ ಮಾಡಿದ್ದರು. ತಮಿಳು ನಟ ಆರ್ಯ ಜೊತೆಗೂ ಚಿತ್ರವೊಂದರಲ್ಲಿ ಕಿಸ್ಸಿಂಗ್ ಸೀನ್‌ನಲ್ಲಿ ಕಾಣಿಸಿಕೊಂಡಿದ್ದರು. ನಟಿಯು ಯಾವ ಸಿನಿಮಾದಲ್ಲಿ ಸೀನ್ ಮಾಡಿ ನಟಿ ಅತ್ತಿದ್ದು ಎನ್ನುವ ಪ್ರಶ್ನೆಯೊಂದು ನೆಟ್ಟಿಗರಲ್ಲಿ ಹುಟ್ಟಿಕೊಂಡಿದೆ.