ಜಿಮ್ ನಲ್ಲಿ ಫಿಟ್ನೆಸ್ ಕೋಚಿಂಗ್ ನೀಡುತ್ತಿರುವ ನಟಿ ಕಮ್ ಡಾನ್ಸರ್ ರಾಗಿಣಿ ಪ್ರಜ್ವಲ್, ವಿಶೇಷ ವಿಡಿಯೋ ಹೇಗಿದೆ ಗೊತ್ತಾ?

ನಟ ಪ್ರಜ್ವಲ್ ದೇವರಾಜ್ (Prajwal Devaraj) ಅವರ ಮಡದಿ ರಾಗಿಣಿ ಪ್ರಜ್ವಲ್ (Ragini Prajwal) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಆಗಿದ್ದಾರೆ. ಜಿಮ್, ಡ್ಯಾನ್ಸ್ ಹಾಗೂ ಔಟಿಂಗ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ನಟನೆಯ ಜೊತೆಗೆ ಅತ್ಯದ್ಭುತ ಡ್ಯಾನ್ಸರ್ (Dancer) ಆಗಿಯೂ ಗುರುತಿಸಿಕೊಂಡಿದ್ದಾರೆ. ಫಿಟ್ನೆಸ್ (Fitness) ಕುರಿತು ಸಾಕಷ್ಟು ಜ್ಞಾನ ಹೊಂದಿದ್ದು, ತಮ್ಮದೇ ಆದ ಅಪ್ಲಿಕೇಶನ್ ಮೂಲಕ ಹಲವಾರು ಜನರಿಗೆ ಕೋಚಿಂಗ್ ನೀಡುತ್ತಿದ್ದಾರೆ.

ಫಿಟ್ನೆಸ್ ಬಗ್ಗೆ ಕೋಚಿಂಗ್ (Coaching) ನೀಡುವ ಉದ್ಯಮವನ್ನು ಸಾಕಷ್ಟು ವರ್ಷಗಳಿಂದಲೇ ಮಾಡುತ್ತಾ ಬಂದಿದ್ದಾರೆ. ಇದೀಗ ರಾಗಿಣಿ ಪ್ರಜ್ವಲ್ ಅವರು ಸುದ್ದಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಡಿಯೋವನ್ನು ಹರಿಬಿಡುವ ರಾಗಿಣಿ ಪ್ರಜ್ವಲ್ ಅವರು, ಇವರ ಫಿಟ್ನೆಸ್ ಕೋಚಿಂಗ್ ವಿಡಿಯೋ ವೈರಲ್ ಆಗಿವೆ. ಈ ವಿಡಿಯೋದಲ್ಲಿ ಟ್ರೇನರ್ ಆಗಿರುವ ಫಿಟ್ ನೆಸ್ ಹಾಗೂ ವರ್ಕ್ ಔಟ್ ಹೇಳಿಕೊಡುತ್ತಿದ್ದಾರೆ. ನಟಿಯ ಈ ವಿಡಿಯೋಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿವೆ.

ನಟನೆ, ಜಾಹೀರಾತು, ಡ್ಯಾನ್ಸಿಂಗ್ ಹಾಗೂ ಫಿಟ್ನೆಸ್ ಹೀಗೆ ವಿವಿಧ ರಂಗಗಳಲ್ಲಿ ಸಕ್ರಿಯರಾಗಿದ್ದಾರೆ. ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಫ್ಯಾನ್ಸ್ ಫಾಲ್ಲೋರ್ಸ್ (Fans Followers) ಸೃಷ್ಟಿಸಿಕೊಂಡಿದ್ದು, ರಾಗಿಣಿ ಪ್ರಜ್ವಲ್ ಕನ್ನಡ ಚಿತ್ರರಂಗದಲ್ಲಿ ನಟ ಮತ್ತು ಮಾಡೆಲ್ ಆಗಿ ಗುರುತಿಸಿಕೊಂಡವರು. ರಾಗಿಣಿ ಪ್ರಜ್ವಲ್ ಅವರ ಹಿನ್ನೆಲೆಯಾದರೆ, ತಂದೆ ಚಂದ್ರನ್ ಬಾಲು (Chandran Balu), ತಾಯಿ ರಮಾ (Ramaa) . ರಾಗಿಣಿ ಪ್ರಜ್ವಲ್ ಬೆಂಗಳೂರಿ (Banglore) ನಲ್ಲಿ ಹುಟ್ಟಿ ಬೆಳೆದರು. ನಾಲ್ಕು ವರ್ಷದ ಪುಟ್ಟ ಬಾಲಕಿಯಾಗಿರುವಾಗಲೇ ಭರತನಾಟ್ಯ ಕಲಿಯುವುದಕ್ಕೆ ರಾಗಿಣಿ ಚಂದ್ರನ್ ಶುರುವಿಟ್ಟರು.

ಖ್ಯಾತ ನೃತ್ಯಗಾರ್ತಿ ಶ್ರೀಮತಿ ನಿರೂಪಮಾ ರಾಜೇಂದ್ರ ಮತ್ತು ಶ್ರೀ.ರಾಜೇಂದ್ರ ರವರ ಅಭಿನವ ಡ್ಯಾನ್ಸ್ ಕಂಪನಿಯಲ್ಲಿ ರಾಗಿಣಿ ಚಂದ್ರನ್ ಕಥಕ್ ಡ್ಯಾನ್ಸರ್ ಹಾಗೂ ವಿಶ್ವಾದ್ಯಂತ ಕಥಕ್ ನೃತ್ಯ ಪ್ರದರ್ಶನವನ್ನು ನೀಡಿ ಬಂದಿದ್ದಾರೆ. ಅದಲ್ಲದೇ ರಚಿತಾ ರಾಮ್ ನಿರ್ಮಾಣದ `ರಿ‍ಷಭಪ್ರಿಯ’ (Rishabhapriya) ಚಿತ್ರದಲ್ಲಿ ನಟಿಸಿದ್ದರು.

ಪುನೀತ್ ರಾಜಕುಮಾರ್ ನಿರ್ಮಾಣದ `ಲಾ’ (Laa) ಚಿತ್ರದ ಮೂಲಕ ನಾಯಕಿಯಾಗಿ ಚಂದನವನ ಪ್ರವೇಶಿಸಿದ್ದಾರೆ. ಸದ್ಯಕ್ಕೆ ಶಾನುಭೋಗರ ಮಗಳು (Shanubhogara Magalu) ಸಿನಿಮಾದಲ್ಲಿ ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಬ್ಯುಸಿ ಶೆಡ್ಯೂಲ್ ನಡುವೆ ಆಗಾಗ ಜಿಮ್ ವರ್ಕ್ ಔಟ್ ಡಾನ್ಸ್ ಎಂದು ಅಭಿಮಾನಿಗಳ ಮನಸ್ಸನ್ನು ಗೆಲ್ಲುತ್ತಿರುತ್ತಾರೆ.

Leave a Reply

Your email address will not be published. Required fields are marked *