ನನ್ನ ಗಂಡ ರಾತ್ರಿ ನನಗೆ ನಿದ್ದೆ ಮಾಡಲು ಕೊಡುತ್ತಿಲ್ಲ ಎಂದು ಆತಂಕ ಹೊರ ಹಾಕಿದ ನಿರೂಪಕಿ ಮಹಾಲಕ್ಷ್ಮೀ. ಗಂಡ ರಾತ್ರಿ ಏನು ಮಾಡುತ್ತಾನೆ ಗೊತ್ತಾ?

ಕಿರುತೆರೆ ನಟಿ ಕಮ್ ನಿರೂಪಕಿ ಮಹಾಲಕ್ಷ್ಮೀ (Mahalakshmi) ಮತ್ತು ತಮಿಳು ನಿರ್ಮಾಪಕ ರವೀಂದರ್​ ಚಂದ್ರಶೇಖರ್ (Ravindra Chandrasekaran) ಈ ಜೋಡಿಯ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ. ಇಬ್ಬರದ್ದು ಕೂಡ ಎರಡನೇ ಮದುವೆಯಾದ ಕಾರಣ ಈ ಜೋಡಿ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಅದಲ್ಲದೇ ದಡೂತಿ ದೇಹದ ರವೀಂದರ್ ಅವರನ್ನು ಕೂಡ ದುಡ್ಡಿಗಾಗಿ ಮಹಾಲಕ್ಷ್ಮಿ ಅವರು ಮದುವೆಯಾಗಿದ್ದಾರೆ ಎಂದು ಟ್ರೋಲ್ ಕೂಡ ಮಾಡಿದ್ದರು.

ಆದಾದ ಬಳಿಕ ನಿರೂಪಕಿ ಮಹಾಲಕ್ಷ್ಮೀ (Mahalakshmi) ಮತ್ತು ತಮಿಳು ನಿರ್ಮಾಪಕ ರವೀಂದರ್​ ಚಂದ್ರಶೇಖರ್ ರವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಂಡು ಫ್ಯಾನ್ಸ್ ಗಳನ್ನು ರಂಜಿಸುತ್ತಿತ್ತು. ಸುಖವಾಗಿ ಸಂಸಾರ ಮಾಡುತ್ತಿದ್ದ ಈ ಜೋಡಿಯ ಮೇಲೆ ಯಾರದ್ದೋ ಕೆ-ಟ್ಟ ಕಣ್ಣು ಬಿದ್ದಿತ್ತು.

ಹೀಗಿರುವಾಗ ರವೀಂದರ್‌ ವಿರುದ್ಧ ವಂ-ಚನೆಯ ಆರೋಪ ಕೇಳಿ ಬಂದಿತ್ತು. ಬಾಲಾಜಿ ಗಾಬಾ (Balaji Gaba) ಎಂಬುವವರಿಂದ 16 ಕೋಟಿ ಹಣವನ್ನು ಹೂಡಿಕೆ ಮಾಡಿಸಿದ್ದು, ಆದರೆ ಪ್ರಾಜೆಕ್ಟ್ ಅನ್ನು ಮಾತ್ರ ಶುರು ಮಾಡಿರಲಿಲ್ಲ. ಹೀಗಾಗಿ ರವೀಂದರ್ ಅವರ ಮೇಲೆ ಕೇ-ಸ್ ಬೀಳುತ್ತಿದ್ದಂತೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು. ಕೊನೆಗೆ ಜೈಲು ಸೇರಿದ್ದ ರವೀಂದರ್ ಅವರು ಮತ್ತೆ ಮರಳಿದ್ದು ಇದೀಗ ಮಹಾಲಕ್ಷ್ಮಿರವರು ತಮ್ಮ ಮನಸ್ಸಿನ ನೋ-ವನ್ನು ಹೊರಹಾಕಿದ್ದಾರೆ.

ರವೀಂದರ್‌ ಅವರು ಆ ದಡೂತಿಯಾಗಿರುವ ಕಾರಣ ಅವರ ತೂಕವನ್ನು ಇಳಿಸಲು ಪತ್ನಿಯೂ ಸಾಕಷ್ಟು ಹರಸಾಹಸ ಪಡುತ್ತಿದ್ದಾರೆ. ಪತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದು, ಈ ವೇಳೆಯಲ್ಲಿ ತಮ್ಮ ನೋವನ್ನು ಯೂಟ್ಯೂಬ್‌ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಯೂಟ್ಯೂಬ್ ಚಾನೆಲ್ ವೊಂದರ ಸಂದರ್ಶನದಲ್ಲಿ ಮಹಾಲಕ್ಷ್ಮಿ ಮಾತನಾಡಿದ್ದು, “ಅವರ ದೇಹ ತೂಕ ಕಡಿಮೆ ಮಾಡಲು, ಎಷ್ಟೇ ಪ್ರಯತ್ನಿಸುತ್ತಿದ್ದರೂ, ರವೀಂದರ್‌ ಅದಕ್ಕೆ ಸ್ಪಂದಿಸುತ್ತಿಲ್ಲ.

ನಾನು ಅವರ ಜೊತೆಗಿದ್ದಾಗ ನನ್ನ ಡಯಟ್‌ ತಾಳ ತಪ್ಪುತ್ತಿದೆ. ರಾತ್ರಿ ನಾನು ಮಲಗಿದ್ದರೂ, ನನ್ನನ್ನು ಎಬ್ಬಿಸಿ ತಿನ್ನುವಂತೆ ಒತ್ತಾಯ ಮಾಡುತ್ತಾರೆ. ಸಾಕಷ್ಟು ಬಾರಿ ತಿಂದಿದ್ದೂ ಇದೆ. ತಿನ್ನಲು ಶುರು ಮಾಡಿದ್ರೆ ಹೊಟ್ಟೆ ತುಂಬುವಂತೇ ತಿನ್ನುತ್ತಿದ್ದೇನೆ. ಹೀಗಾಗಿ ಸರಿಯಾದ ಕ್ರಮದಲ್ಲಿ ಡಯಟ್‌ ಅನುಸರಿಸಲು ನನ್ನಿಂದಲೂ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನನ್ನ ನಿದ್ರೆಯೂ ಹಾಳಾಗುತ್ತಿದೆ. ದಿನೇದಿನೆ ನನ್ನ ತೂಕವೂ ಹೆಚ್ಚಾಗುತ್ತಿದೆ. ಮುಂದೊಂದು ದಿನ ಅವರಂತೆ ಆದರೂ ಆಗಬಹುದು” ಎಂದಿದ್ದಾರೆ.

Leave a Reply

Your email address will not be published. Required fields are marked *