ನನಗೆ ಆಸೆ ಆಗುತ್ತಿದೆ ಆದರೆ ನನ್ನ ಗಂಡ ನನ್ನ ಆಸೆ ಈಡೇರಿಸುತ್ತಿಲ್ಲ. ಪತಿಯ ಬಗ್ಗೆ ನಟಿ ಅನಸೂಯಾ ಭಾರಧ್ವಜ್ ಯಾಕೆ ಈ ರೀತಿ ಹೇಳಿದ್ರು ಗೊತ್ತಾ…

ತೆಲುಗು ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿದ್ದು ವಿ-ವಾದಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿರುವ ನಟಿಯೇ ಅನಸೂಯಾ ಭಾರಧ್ವಜ್ (Anasuya Bharadwaj). ತಮಗೆ ಅನಿಸಿದ್ದನ್ನು ನೇರವಾಗಿ ಹೇಳಿಬಿಡುವ ಪುಷ್ಪ ಸಿನಿಮಾ ಖ್ಯಾತಿಯ ಅನುಸೂಯ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಬೆಳ್ಳಿತೆರೆಯ ಮೇಲೆ ತಮ್ಮ ನಿರೂಪಣೆಯಿಂದ ಹಾಗೂ ಬೆಳ್ಳಿತೆರೆಯ ಮೇಲೆ ನಟನೆಯಿಂದ ಸದ್ದು ಮಾಡುತ್ತಿರುವ ಬೆಡಗಿ ಇವರು.

ಸದ್ಯಕ್ಕೆ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿರುವ ಕಾರಣ ಕಿರುತೆರೆಯಿಂದ ದೂರ ಉಳಿದುಕೊಂಡಿದ್ದಾರೆ. ವೃತ್ತಿ ಜೀವನದಲ್ಲಿ ಬ್ಯುಸಿಯಿರುವ ನಟಿ ಅನಸೂಯಾರವರು ಬಿಡುವು ಮಾಡಿಕೊಂಡು ಫ್ಯಾಮಿಲಿ ಜೊತೆಗೆ ಫಾರಿನ್ ಟ್ರಿಪ್ ಮಾಡಿಕೊಂಡು ಬರುತ್ತಾರೆ. ಅದರೊಂದಿಗೆ ನಟಿ ಅನಸೂಯಾರವರು ಸೋಶಿಯಲ್ ಮೀಡಿಯಾ (Social Media) ದಲ್ಲಿ ಆಕ್ಟಿವ್ ಆಗಿದ್ದು, ವೈಯುಕ್ತಿಕ ಜೀವನದ ಬಗ್ಗೆ ಆಗಾಗ ಅಪ್ಡೇಡ್ ನೀಡುತ್ತಿರುತ್ತಾರೆ.

ಮತ್ತೆ ಫೋಟೋ ಶೂಟ್ (Photoshoot) ಮೂಲಕ ಪಡ್ಡೆ ಹೈಕಳ ನಿದ್ದೆ ಕದಿಯುವುದು ಮಾಮೂಲಿಯಾಗಿದೆ. ಆದರೆ ಇದೀಗ ಪತಿಯ ಮೇಲೆ ಆರೋಪ ಮಾಡಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌’ಗೆ ನೀಡಿದ ಸಂದರ್ಶನದಲ್ಲಿ ಅನಸೂಯಾ ತಮ್ಮ ಕೌಟುಂಬಿಕ ಜೀವನದ ಬಗ್ಗೆ ಹೇಳಿಕೊಂಡಿದ್ದು ಪತಿಯ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಅನಸೂಯಾ, “ನನ್ನ ಪತಿಯ ಹುಟ್ಟೂರು ಬಿಹಾರ (Bihar). ಹೀಗಾಗಿ ನನ್ನ ಅತ್ತೆಯ ಮನೆಯಲ್ಲಿ ಇನ್ನೂ ಬಿಹಾರ ಸಂಪ್ರದಾಯಗಳನ್ನು ಅನುಸರಿಸುತ್ತಿದ್ದಾರೆ. ಅತ್ತೆ ಮನೆಗೆ ಹೋದರೆ ನಾನೂ ಕೂಡ ಆ ನಿಯಮಗಳನ್ನು ಪಾಲಿಸುತ್ತೇನೆ. ಬಿಹಾರದಲ್ಲಿ ಪುರುಷ ಪ್ರಾಬಲ್ಯ ಹೆಚ್ಚು ಕಾಣುತ್ತಿದೆ. ನನಗೆ ಹೆಣ್ಣು ಮಗು ಬೇಕು.

ಆದರೆ ನನ್ನ ಪತಿಗೆ ಇಷ್ಟವಿಲ್ಲದ ಕಾರಣ ಸಹಕರಿಸಲು ಸಿದ್ಧರಿಲ್ಲ. ಹೀಗಾಗಿ ತನ್ನ ಆಸೆ ಈಡೇರಲಿಲ್ಲ. ಅತ್ತೆಯ ಇಬ್ಬರು ಗಂಡು ಮಕ್ಕಳು ಕೂಡ ಮನೆಗೆ ಹೆಣ್ಣು ಬರುವುದು ಇಷ್ಟವಿಲ್ಲವೆನ್ನುತ್ತಾರೆ” ಎಂದಿದ್ದಾರೆ. ನಟಿ ಈ ಹೇಳಿಕೆಯೂ ಸದ್ಯಕ್ಕೆ ವೈರಲ್ ಆಗಿದೆ. ಅನಸೂಯಾ ಸದ್ಯ ತೆಲುಗಿನಲ್ಲಿ ಬಿಗ್ ಬಜೆಟ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಪುಷ್ಪಾ-2 (Pushpa 2) ಸಿನಿಮಾದಲ್ಲಿ ನಟಿಸುತ್ತಿದ್ದು ಅದರ ಜೊತೆಗೆ ಬೇರೆ ಸಿನಿಮಾಗಳಿಗೆ ಸೈನ್ ಮಾಡಿದ್ದಾರೆ.

Leave a Reply

Your email address will not be published. Required fields are marked *