ಸಿನಿ ಲೋಕದಲ್ಲಿ ಬದುಕು ಕಟ್ಟಿಕೊಂಡವರು ಹಲವರಿದ್ದು, ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ನಟಿಯರು ಸಿನಿ ಲೋಕದಿಂದ ಅಂತರ ಕಾಯ್ದುಕೊಳ್ಳುವುದು ಸರ್ವೇ ಸಾಮಾನ್ಯ. ಈ ಸಾಲಿಗೆ ನಟಿ ಅಮೂಲ್ಯ (Actress Amulya) ಕೂಡ ಸೇರಿಕೊಂಡಿದ್ದಾರೆ. ಚೆಲುವಿನ ಚಿತ್ತಾರ ಖ್ಯಾತಿಯ ಅಮೂಲ್ಯ ಜಗದೀಶ್ ಅವರನ್ನು ಮದುವೆಯಾದ ಬಳಿಕ ಸಿನಿಲೋಕದಿಂದ ದೂರ ಉಳಿದರು. ನಟಿ ತೆರೆ ಮೇಲೆ ಕಾಣಿಸಿಕೊಳ್ಳದೇ ಇದ್ದರೂ ಕೂಡ, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಆಗಾಗ ಮಕ್ಕಳ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಆದರೆ ಇದೀಗ ಮತ್ತೆ ನಟಿ ಅಮೂಲ್ಯರವರು ಮತ್ತೆ ಸುದ್ದಿಯಾಗಿದ್ದಾರೆ.
ಸ್ಯಾಂಡಲ್ವುಡ್ ನಟಿ ಅಮೂಲ್ಯ ಅವರು ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಚಿಕ್ಕಮಗಳೂರಿ (Chikkamanglore) ನಲ್ಲಿ ಟ್ರಿಪ್ ಎಂಜಾಯ್ ಮಾಡಿದ್ದಾರೆ.ಮಳೆಗಾಲದ ಸಮಯದಲ್ಲಿ ಮಲೆನಾಡಿನಲ್ಲಿ ಹಚ್ಚ ಹಸಿರಿನ ಪ್ರಕೃತಿಯ ನಡುವೆ ನಟಿ ಪತಿ ಮಕ್ಕಳ ಜೊತೆಗೆ ಟ್ರಿಪ್ ಎಂಜಾಯ್ ಮಾಡಿದ್ದು ಈ ವೇಳೆ ನಟಿಯ ಗೆಳೆತಿಯರು ಕೂಡ ಸಾಥ್ ನೀಡಿದ್ದಾರೆ. ಸದ್ಯಕ್ಕೆ ವೈರಲ್ ಆಗಿರುವ ಫೋಟೋದಲ್ಲಿ ನಟಿಯ ಮಕ್ಕಳಿಬ್ಬರೂ ಒಂದೇ ತರಹದ ಬಟ್ಟೆ ಧರಿಸಿದ್ದು, ನಟಿಯು ಬೇಬಿ ಪಿಂಕ್ ಕಲರ್ ಡ್ರೆಸ್ ಧರಿಸಿದ್ದು, ಕ್ಯೂಟ್ ಕ್ಯೂಟ್ ಆಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

ಈ ಟ್ರಿಪ್ ಫೋಟೋಗಳನ್ನು ಪತಿ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ. ಆದರೆ ನಟಿ ಅಮೂಲ್ಯ ಈ ಫೋಟೋಗಳನ್ನು ಫೇಸ್ಬುಕ್ (Facebook) ನಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಚಿಕ್ಕಮಂಗಳೂರು ಟ್ರಿಪ್ ನಲ್ಲಿ ಸ್ನೇಹಿತರು ಕೂಡ ಜೊತೆಯಾಗಿರುವುದನ್ನು ಕಾಣಬಹುದು. ಅಮೂಲ್ಯ ಅವರ ಫ್ಯಾಮಿಲಿ ಫೋಟೋಗಳಿಗೆ 45 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಫೋಟೋ ನೋಡಿ ನೆಟ್ಟಿಗರು ಸೋ ಕ್ಯೂಟ್ ಸೇರಿದಂತೆ ನಾನಾ ರೀತಿಯ ಕಾಮೆಂಟ್ ಗಳು ವ್ಯಕ್ತವಾಗಿವೆ.
ನಟಿ ಅಮೂಲ್ಯ (Actress Amulya) ದಂಪತಿಗಳಿಗೆ ಕಳೆದ ಮೇ ನಲ್ಲಿ ವಿವಾಹ ವಾರ್ಷಿಕೋತ್ಸವದ ಸಂಭ್ರಮವಾಗಿತ್ತು. ಮೇ 12 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಅಮೂಲ್ಯರವರು ದಂಪತಿಗಳು ಈ ಬಾರಿಯ ವಿವಾಹ ವಾರ್ಷಿಕೋತ್ಸವವನ್ನು ಮಕ್ಕಳ ಜೊತೆಗೆ ಕೇಕ್ ಕತ್ತರಿಸಿ ಆಚರಿಸಿಕೊಂಡಿದ್ದರು.

ಗೋಲ್ಡನ್ ಕ್ವೀನ್ ಅಮೂಲ್ಯರವರ ವಿವಾಹ ವಾರ್ಷಿಕೋತ್ಸವ ಸೆಲೆಬ್ರೇಶನ್ ವಿಡಿಯೋವೊಂದು ವೈರಲ್ ಆಗಿದ್ದು ಫ್ಯಾನ್ಸ್ ಕೂಡ ಈ ಜೋಡಿಗೆ ವಿಶ್ ಮಾಡಿದ್ದರು. ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿ ಅಮೂಲ್ಯರವರದ್ದು ತೆರೆ ಮೇಲೆ ನೋಡುವ ಆಸೆ ಅಭಿಮಾನಿಗಳದ್ದು. ಹೀಗಾಗಿ ನಟಿ ಅಮೂಲ್ಯ ವೃತ್ತಿ ಜೀವನದ ಕುರಿತು ಯಾವಾಗ ಗುಡ್ ನ್ಯೂಸ್ ನೀಡಲಿದ್ದಾರೆ ಎಂದು ಕಾಯುತ್ತಿದ್ದಾರೆ.