ಬಣ್ಣದ ಲೋಕದಲ್ಲಿ ಗುರುತಿಸಿಕೊಂಡು ಅವಕಾಶಗಳು ಇರುವಾಗಲೇ ಸಿನಿಮಾಲೋಕದಿಂದ ಅಂತರಕಾಯ್ದುಕೊಂಡ ನಟಿಯರ ಸಾಲಿಗೆ ನಟಿ ಅಮೂಲ್ಯ (Amulya) ರವರು ಸೇರಿಕೊಳ್ಳುತ್ತಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರದಲ್ಲಿ ಸಿನಿಮಾರಂಗದಿಂದ ದೂರ ಉಳಿದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿರುವ ನಟಿ ಅಮೂಲ್ಯರವರು ತನ್ನ ಅವಳಿ ಮಕ್ಕಳ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಅದಲ್ಲದೆ ಪ್ರತಿಯೊಂದು ಹಬ್ಬವನ್ನು ವಿಶೇಷವಾಗಿ ಆಚರಿಸುವ ನಟಿ ಅಮೂಲ್ಯರವರು ಈ ಬಾರಿಯ ಕೃಷ್ಣಾ ಜನ್ಮಾಷ್ಠಮಿ (Krishna Janmastami) ಗೆ ಅಭಿಮಾನಿಗಳ ಮುಂದೆ ಮುದ್ದು ಮುದ್ದಾಗಿ ಪ್ರತ್ಯಕ್ಷವಾಗಿದ್ದಾರೆ. ಹಬ್ಬಬಂತೆಂದರೆ ಸಾಕು, ನಟಿ ಅಮೂಲ್ಯ (Actress Amulya) ರವರು ತಮ್ಮ ಹಾಗೂ ಮಕ್ಕಳ ವಿಭಿನ್ನ ಫೋಟೋ ಹಾಗೂ ವಿಡಿಯೋದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಆದರೆ ಇದೀಗ ಮಕ್ಕಳ ಫೋಟೋ ಶೂಟ್ ಮಾಡಿಸಿದ್ದಾರೆ.


ಕೃಷ್ಣಾ ಜನ್ಮಾಷ್ಠಮಿ (Krishna Janmastami) ಯಂದು ಮಕ್ಕಳಿಗೆ ಕೃಷ್ಣನ ವೇಷ ಹಾಕಿದ್ದು ನಟಿ ಅಮೂಲ್ಯ ದೇವಕಿಯಾಗಿದ್ದಾರೆ. ಅಮೂಲ್ಯರವರು ನೀಲಿ ಬಣ್ಣದ ಸೀರೆ, ಬಿಳಿ ಬಣ್ಣದ ಗ್ರ್ಯಾಂಡ್ ಬ್ಲೌಸ್ ತೊಟ್ಟಿದ್ದು ಅದಕ್ಕೆ ಹೊಂಡುವಂತೆ ಆಭರಣಗಳನ್ನು ತೊಟ್ಟು ಗೊಂಬೆಯಂತೆ ಕಂಗೊಳಿಸಿದ್ದಾರೆ. ಅದಲ್ಲದೇ ಅವಳಿ ಮಕ್ಕಳಿಗೂ ಕೂಡ ಕೃಷ್ಣನಂತೆ ಸಿಂಗಾರ ಮಾಡಿದ್ದು, ಇಬ್ಬರೂ ಮಕ್ಕಳ ಜೊತೆಗೆ ಆಟ ಆಡುವುದನ್ನು ಈ ಫೋಟೋದಲ್ಲಿ ನೋಡಬಹುದು.
ಅದಲ್ಲದೇ ಅಮೂಲ್ಯರವರು ತನ್ನ ಮಗನ ಕೈಯಲ್ಲಿ ಮೇವು ನೀಡಿ ಗೋವಿಗೆ ನೀಡುತ್ತಿದ್ದು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಅದಲ್ಲದೇ ಇಬ್ಬರೂ ಮಕ್ಕಳನ್ನು ತೊಡೆಯ ಮೇಲೆ ಕೂರಿಸಿಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ನಟಿ ಅಮೂಲ್ಯರವರು ಫೋಟೋಶೂಟ್ (Photoshoot)ಮಾಡಿಸಿರುವ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಹ್ಯಾಪಿ ಕೃಷ್ಣಾ ಜನ್ಮಾಷ್ಠಮಿ ಎಂದು ಬರೆದುಕೊಂಡಿದ್ದಾರೆ.

ನಟಿಯ ಈ ಹೊಸ ಫೋಟೋ ಶೂಟ್ ಗೆ ಮೆಚ್ಚುಗೆ ವ್ಯಕ್ತವಾಗಿದೆ. ಸ್ಯಾಂಡಲ್ ವುಡ್ ನಟಿ ಅಮೂಲ್ಯರವರು ತೆರೆ ಮೇಲೆ ಕಾಣಿಸಿಕೊಳ್ಳದೆ ವರ್ಷಗಳಾಗಿದ್ದರೂ, ಇಂದಿಗೂ ಕೂಡ ಅಷ್ಟೇ ಬೇಡಿಕೆಯನ್ನು ಹೊಂದಿದ್ದಾರೆ. ಚೆಲುವಿನ ಚಿತ್ತಾರ ಸಿನಿಮಾದಿಂದ ನಟಿಯಾಗಿ ಹೊರಹೊಮ್ಮಿದ ನಟಿ ಅಮೂಲ್ಯರನ್ನು ಮತ್ತೆ ತೆರೆ ಮೇಲೆ ನೋಡಬೇಕು ಎನ್ನುವ ಕಾತುರ ಫ್ಯಾನ್ಸ್ ಗಳಿಗಿದೆ. ಹೀಗಾಗಿ ಅಭಿಮಾನಿಗಳಿಗೆ ಯಾವಾಗ ತನ್ನ ಹೊಸ ಸಿನಿಮಾದ ಕುರಿತಾಗಿ ಗುಡ್ ನ್ಯೂಸ್ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕು.