ಸೆಲೆಬ್ರಿಟಿಗಳ ಮಕ್ಕಳು ಕೂಡ ತಮ್ಮ ತಂದೆ ತಾಯಿಯಂತೆ ಸಾಕಷ್ಟು ಸಂಖ್ಯೆಯಲ್ಲಿ ಫ್ಯಾನ್ ಫಾಲ್ಲೋರ್ಸ್ ಗಳನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೇ ತಂದೆ ತಾಯಿಯಂತೆ ಸಿನಿಮಾರಂಗದ ಹಾದಿಯನ್ನೇ ಹಿಡಿಯುವವರು ಹೆಚ್ಚೇ ಎನ್ನಬಹುದು. ಆದರೆ ಕಳೆದ ಕೆಲವು ವರ್ಷಗಳಿಂದ ಸೆಲೆಬ್ರಿಟಿಗಳ ಮಕ್ಕಳು ನಟನೆಯತ್ತ ಮುಖ ಮಾಡುತ್ತಿದ್ದಾರೆ.
ಈ ವಿಚಾರದಲ್ಲೂ ನೆನಪಿರಲಿ ಖ್ಯಾತಿಯ ಪ್ರೇಮ್ (Prem) ಅವರ ಮಗಳು ಅಮೃತಾ (Amruth ಕೂಡ ಹೊರತಾಗಿಲ್ಲ. ಟಗರು ಪಲ್ಯ (Tagaru Palya) ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಬಟ್ಟಲು ಕಂಗಳ ಚೆಲುವೆ ಈ ಅಮೃತಾ ಪ್ರೇಮ್ ಅವರ ಅಗೊಂದು ಹೀಗೊಂದು ಫೋಟೋಗಳು ವೈರಲ್ ಆಗುತ್ತಿರುತ್ತವೆ.
ಆದರೆ ಇದೀಗ ನಟಿ ಅಮೃತಾ ಪ್ರೇಮ್ ಅವರ ಮುದ್ದಾದ ಫೋಟೋವೊಂದು ವೈರಲ್ ಆಗಿವೆ. ನಟಿ ಅಮೃತಾ ಪ್ರೇಮ್ ಅವರು ವಿವಿಧ ರೀತಿಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದು, ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋವನ್ನು ನೋಡಿದರೆ ಗಂಭೀರತೆಯು ಅವರ ಮುಖದಲ್ಲಿ ಎದ್ದು ಕಾಣುತ್ತಿದ್ದು, ನಟಿ ಶೇರ್ ಮಾಡಿಕೊಂಡಿರುವ ಈ ಫೋಟೋಗೆ ಎಂಟುನೂರಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ.
ಕಳೆದ ಕೆಲವು ವರ್ಷಗಳ ಹಿಂದೆಯೇ ನಟಿ ಪ್ರೇಮ್ ಮಗಳು ಅಮೃತಾ ಪ್ರಾರಂಭದಲ್ಲಿಯೇ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಾರಾ ಎನ್ನುವ ಪ್ರಶ್ನೆ ಎದುರಾಗಿತ್ತು. ಈ ಹಿಂದೆಯಷ್ಟೇ ನಟ ಪ್ರೇಮ್ ಮಗಳು ಫೋಟೋ ಶೂಟ್ (Photoshoot) ಮಾಡಿಸಿದ್ದರು. ಅದ್ದೂರಿಯಾದ ಸಲ್ವಾರ್, ಜುಂಕಿ ಧರಿಸಿ ಅಮೃತಾ ಫೋಟೋ ತೆಗೆಸಿಕೊಂಡಿದ್ದರು. ಸೀರೆ ಕೂಡ ಧರಿಸಿ ಅಮೃತಾ ಫೋಟೋಕ್ಕೆ ಪೋಸ್ ಕೊಟ್ಟಿದ್ದರು.
ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ಕೆಲವರು ಸಿನಿಮಾ ಇಂಡಸ್ಟ್ರಿ ಪ್ರವೇಶ ಮಾಡಲು ತಯಾರಿ ನಡೆಸುತ್ತಿದ್ದಾರಾ ಎಂದು ಪ್ರಶ್ನಿಸಿದ್ದರು. ಅದರೆ ಆ ಫೋಟೋ ಶೂಟ್ ಅನ್ನು ಸಿನಿಮಾರಂಗಕ್ಕೆ ಎಂಟ್ರಿ ಕೊಡುವ ಸಲುವಾಗಿ ಮಾಡಿಕೊಂಡಿರಲಿಲ್ಲ. ಸಿನಿಮಾರಂಗಕ್ಕೆ ಎಂಟ್ರಿ ಕೊಡುವ ವಿಚಾರವು ಇರಲಿಲ್ಲ. ಇತ್ತೀಚೆಗಷ್ಟೇ ಪ್ರೇಮ್ ಮಗಳು ಅಮೃತಾ ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಡೈರೆಕ್ಟರ್ ಉಮೇಶ್ ಕೆ. ಕೃಪಾ (Umesh K Krupa) ನಟಿಯನ್ನು ತುಂಬಾ ಚೆನ್ನಾಗಿಯೇ ಟ್ರೈನ್ ಮಾಡಿದ್ದಾರೆ.
ಸಿನಿಮಾ ಶೂಟಿಂಗ್ ಆರಂಭವಾಗುವ ಮೊದಲು, ವರ್ಕ್ ಶಾಪ್ ಕೂಡ ಮಾಡಿದ್ದರು. ಆ ಮೂಲಕ ಸಿನಿಮಾದ ಹಳ್ಳಿ ಹುಡುಗಿ ಪಾತ್ರಕ್ಕೆ ಅಮೃತಾ ಪ್ರೇಮ್ ಜೀವ ತುಂಬಿದ್ದಾರೆ. ಅದಲ್ಲದೇ, ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ (Amrutha Prem First Movie) ಅಭಿನಯದ ಟಗರು ಪಲ್ಯ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದೆ. ಎಲ್ಲಾ ಕಲಾವಿದರೂ ಕೂಡ ತಮ್ಮ ತಮ್ಮ ಪಾತ್ರದ ಡಬ್ಬಿಂಗ್ ಕೆಲಸವನ್ನು ಕೂಡ ಪೂರ್ಣಗೊಳಿಸಿದ್ದಾರೆ. ಸದ್ಯಕ್ಕೆ ಟಗರು ಪಲ್ಯ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಸಿನಿಮಾ ನೋಡಲು ಫ್ಯಾನ್ಸ್ ಕಾತುರರಾಗಿದ್ದಾರೆ.