ಚಂದನವನದ ನಟಿ ಅಮೃತಾ ಅಯ್ಯಂಗಾರ್ ಅವರಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಸದ್ಯಕ್ಕೆ ಸಿನಿಮಾರಂಗದಲ್ಲಿ ಬ್ಯುಸಿಯಾಗಿರುವ ನಟಿ ಅಮೃತಾ ಅಯ್ಯಂಗಾರ್ ಜುಲೈ 26 ರಂದು ಜನ್ಮ ದಿನ (Birth Day) ಆಚರಿಸಿಕೊಂಡಿದ್ದರು. ಆದರೆ ಆ ದಿನ ಯಾವುದೇ ಫೋಟೋಗಳನ್ನ ಅಮೃತಾ ಶೇರ್ ಮಾಡಿಕೊಂಡಿರಲಿಲ್ಲ. ಆದರೆ ಒಂದೆರಡು ದಿನಗಳ ಬಳಿಕವಷ್ಟೇ ಒಂದಷ್ಟು ವಿಶೇಷ ಫೋಟೋ ಹಂಚಿಕೊಂಡಿದ್ದಾರೆ. ತನ್ನ ಸ್ನೇಹಿತರ ಜೊತೆಗೆ ಅಮೃತಾ ಅಯ್ಯಂಗಾರ್ ಒಂದು ವಿಶೇಷ ಸ್ಥಳದಲ್ಲಿಯೇ ಜನ್ಮ ದಿನ ಆಚರಿಸಿಕೊಂಡಿದ್ದಾರೆ.
ಪ್ರಕೃತಿ ಸೌಂದರ್ಯದ ನಡುವೆ ತನ್ನ ಸ್ನೇಹಿತರ ಜೊತೆಗೆ ಅಮೃತಾ ಅಯ್ಯಂಗಾರ್ (Amrutha Ayyagar) ಎಂಜಾಯ್ ಮಾಡಿದ್ದು, ಈ ಫೋಟೋಗಳೇ ಸಾಕ್ಷಿಯಾಗಿವೆ. ಈ ಫೋಟೋ ಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಟಿಯು ಸ್ನೇಹಿತರ ಎಂಜಾಯ್ ಮಾಡುವ ಫೋಟೋಗಳು ವೈರಲ್ ಆಗಿದ್ದು, ಈ ಫೋಟೋಗೆ 150 ಕ್ಕೂ ಲೈಕ್ಸ್ ಬಂದಿವೆ. ನೆಟ್ಟಿಗರು ತಮ್ಮ ನೆಚ್ಚಿನ ನಟಿಯ ಫೋಟೋಗೆ ನಾನಾ ರೀತಿಯ ಕಾಮೆಂಟ್ ಮಾಡಿದ್ದಾರೆ.

ಇನ್ನು ಹುಟ್ಟುಹಬ್ಬದ ದಿನವೇ ಡಾಲಿ ಧನಂಜಯ್ ಹಾಗೂ ತನ್ನ ನಡುವೆ ಪ್ರೀತಿಯಿದೆ ಎನ್ನುವ ವಿಚಾರವಾಗಿ ಮೌನ ಮುರಿದಿದ್ದಾರೆ. ಹೌದು ನಟಿ ಹುಟ್ಟುಹಬ್ಬ (Birthday) ವನ್ನು ಸಿಂಪಲ್ ಆಗಿ ಸೆಲೆಬ್ರೇಟ್ ಮಾಡಿದ್ದ ಬಳಿಕ ನಟಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಡಾಲಿ ಧನಂಜಯ್ ಹಾಗೂ ತನ್ನ ಪ್ರೀತಿಯ ವಿಚಾರದ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ ನಟಿ ಅಮೃತಾ ಅಯ್ಯಂಗರ್.
“ಒಂದು ವೇಳೆ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸೈಲೆಂಟ್ ಆಗಿ ಮದುವೆ ಅಗಿಬಿಟ್ಟರೆ ಅದೆಷ್ಟೋ ಹುಡುಗಿಯರ ಹಾರ್ಟ್ ಬ್ರೇಕ್ ಆಗುತ್ತದೆ. ಹಾರ್ಟ್ ಬ್ರೇಕ್ ಆಗಬಾರದು. ನಾವಿಬ್ಬರೂ ಒಟ್ಟಿಗೆ ಮೂವರು ಸಿನಿಮಾವನ್ನು ಮಾಡಿದ್ದೇವೆ. ಹಾಗಾಗಿ ಕೆಲವರು ನಮ್ಮಿಬ್ಬರ ಮಧ್ಯೆ ಏನೋ ಇದೆ ಎಂದು ಅಂದುಕೊಳ್ಳುತ್ತಾರೆ. ಧನಂಜಯ, ನನ್ನ ಮಧ್ಯೆ ಒಳ್ಳೆಯ ಸ್ನೇಹವಿದೆ. ಅದನ್ನು ಬಿಟ್ಟರೆ ನಾನು ಇನ್ನೂ ಸಿಂಗಲ್ ” ಎಂದಿದ್ದಾರೆ ನಟಿ ಅಮೃತಾ ಅಯ್ಯಂಗಾರ್.

ಅಮೃತಾ ಅಯ್ಯಂಗಾರ್ 2017ರಲ್ಲಿ ಸಿಂಹ ಹಾಕಿದ ಹೆಜ್ಜೆ (Simha Hakida Hejje) ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ತದನಂತರ ಅನುಷ್ಕಾ (Anushka) ಚಿತ್ರದಲ್ಲಿ ನಟಿಸಿದರು. ಆದರೆ ಲವ್ ಮಾಕ್ಟೇಲ್ (Love Mocktail) ಸಿನಿಮಾವು ನಟಿಗೆ ನೇಮ್ ಫೇಮ್ ತಂದುಕೊಟ್ಟಿದ್ದು, ಸಾಲು ಸಾಲು ಅವಕಾಶಗಳು ಬಂದಿದೆ.
ಪಾಪ್ ಕಾರ್ನ್ ಮಂಕಿ ಟೈಗರ್, ಶಿವಾರ್ಜುನ, ಬಡವ ರಾಸ್ಕಲ್, ಲವ್ ಮಾಕ್ಟೇಲ್ 2, ಫ್ಯಾಮಿಲಿ ಪ್ಯಾಕ್, ವಿಂಡೋ ಸೀಟ್, ಓ, ಅಬ್ಬಬ್ಬಾ, ಗುರುದೇವ್ ಹೊಯ್ಸಳ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಮನಸ್ಸು ಗೆದ್ದುಕೊಂಡಿದ್ದಾರೆ. ಇದೀಗ ನಟಿ ಅಮೃತಾ ಅಯ್ಯಂಗಾರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
