ಮದುವೆಯಾದ ಎರಡೇ ತಿಂಗಳಿಗೆ ಅಮ್ಮ ಆಗಿ ಸಿಹಿಸುದ್ದಿ ನೀಡಿ ಗಂಡನಿಗೆ ಶಾಕ್ ಕೊಟ್ಟ ನಟಿ ಅಮಲಾ ಪೌಲ್!! ಹೇಗಿದು ಸಾಧ್ಯ ಗೊತ್ತಾ??..

ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಅಮಲ್ ಪೌಲ್ (Amal Poul) ಅವರು ತಮಿಳು (Tamil) ಹಾಗೂ ಮಲಯಾಳಂ (Malayalam) ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದಾರೆ. ಬಹುಭಾಷಾ ನಟಿ ಅಮಲಾ ಪೌಲ್ ಸದಾ ಸುದ್ದಿಯಲ್ಲಿರುತ್ತಾರೆ. ನಟಿ ಅಮಲ್ ಪೌಲ್ ಅವರು ಲವ್ ಲೈಫ್ (Love Life), ಮದುವೆ (Marriage) , ಡಿವೋರ್ಸ್ (Divorce), ಹೀಗೆ ಇನ್ನಿತ್ತರ ವಿಚಾರಗಳಿಂದಲೇ ಸುದ್ದಿಯಾಗುವ ನಟಿ ಇದೀಗ ಮತ್ತೆ ಫ್ಯಾನ್ಸ್ ಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ನಟಿ ಅಮಲಾ ಪೌಲ್ (Amaal Poul) ಅವರು ವೃತ್ತಿ ಜೀವನದಲ್ಲಿ ಬ್ಯುಸಿಯಾಗಿರುವಾಗಲೇ ನಿರ್ದೇಶಕ ವಿಜಯ್ (Director Vijay) ಅವರನ್ನು ಪ್ರೀತಿಸಿ, ವಿವಾಹವಾಗಿದ್ದರು. ಆದರೆ ನಟಿಯ ವೈವಾಹಿಕ ಜೀವನವು ಅಷ್ಟೇನು ಚೆನ್ನಾಗಿ ಇರಲಿಲ್ಲ. ಹೀಗಾಗಿ ನಿರ್ದೇಶಕ ವಿಜಯ್ ಅವರಿಂದ ಡೈ-ವೋರ್ಸ್ ಪಡೆದು ದೂರವಾದರು. ಹೀಗಿರುವಾಗ ನಟಿ ಅಮಲ್ ಪೌಲ್ ಅವರ ಬಾಳಿನಲ್ಲಿ ಬಂದವರೇ ನಿರ್ದೇಶಕ ಜಗತ್ ದೇಸಾಯಿ (Director Jagath Desai).

ಈ ಹಿಂದೆ ನಟಿ ಅಮಲಾ ಪೌಲ್ ಅವರು ನಿರ್ದೇಶಕ ಜಗತ್ ದೇಸಾಯಿ ಅವರ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡಿತ್ತು. ಹೀಗಿರುವಾಗ ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ನಿರ್ದೇಶಕ ಜಗತ್ ದೇಸಾಯಿ ಹಾಗೂ ಅಮಲ್ ಪೌಲ್ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಕಳೆದ ಎರಡನೇ ಮದುವೆಯಾಗಿದ್ದ ಬಹುಭಾಷಾ ನಟಿ ಅಮಲಾ ಪೌಲ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ. ಮದುವೆಯಾದ ಕೆಲವೇ ತಿಂಗಳಿನಲ್ಲಿ ತಾಯಿಯಾಗುತ್ತಿರುವ ವಿಚಾರವನ್ನು ನಟಿ ಅಮಲ್ ಪೌಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟಿ ಅಮಲಾ ಪೌಲ್, ಸಮುದ್ರ ತೀರದಲ್ಲಿ ತಮ್ಮ ಮತ್ತು ಪತಿ ಇರುವ ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಫೋಟೋಗಳ ಜೊತೆಗೆ, ‘ನಾವು ಒನ್ ಪ್ಲಸ್ ಒನ್ ಈಕ್ವಲ್ ತ್ರೀ (1+1=3) ಆಗುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ. ನಟಿಯ ಈ ಪೋಸ್ಟ್ ನೋಡುತ್ತಿದ್ದಂತೆ ಫ್ಯಾನ್ಸ್ ಗಳು ಫುಲ್ ಖುಷಿಯಾಗಿದ್ದಾರೆ. ನಟಿಯ ಪೋಸ್ಟ್ ಗೆ ನೆಟಿಜನ್‌ಗಳು ಲೈಕ್‌ಗಳನ್ನು ನೀಡುತ್ತಿದ್ದು, ಒಂದು ಲಕ್ಷ ಮೂವತ್ತು ಸಾವಿರ ಲೈಕ್‌ ಗಳು ಬಂದಿವೆ. ಅಷ್ಟೇ ಅಲ್ಲದೇ ಈ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

Leave a Reply

Your email address will not be published. Required fields are marked *