ಚಿನ್ನದ ಅಂಗಡಿಯನ್ನೇ ಖರೀದಿಸುವಷ್ಟು ಹಣ ಇದ್ದರೂ ಕೂಡ ನಟಿ ಅಮಲಾ ಅಕ್ಕಿನೇನಿ ಚಿನ್ನಾಭರಣವನ್ನು ಧರಿಸುವುದಿಲ್ಲ ಯಾಕೆ ಗೊತ್ತಾ? ಇಲ್ಲಿದೆ ನೋಡಿ ಅಸಲಿ ಕಾರಣ

ಸಿನಿಮಾರಂಗಕ್ಕೆ ಎಂಟ್ರಿ ಕೊಡುವ ನಟ ನಟಿಯರು ಸಿಂಪಲ್ (Simple) ಆಗಿರುವುದು ಕಡಿಮೆಯೇ. ಅಪರೂಪಕ್ಕೆ ನೂರರಲ್ಲಿ ಒಬ್ಬರೋ ಇಬ್ಬರೋ ಸಿಂಪಲ್ ಆಗಿ ಕಾಣಿಸಿಕೊಳ್ಳಬಹುದು. ಆದರೆ ಈ ನಟ ನಟಿಯರ ಬದುಕು ಸಾರ್ವಜನಿಕವಾಗಿರುವ ಕಾರಣ ಏನೇ ಮಾಡಿದರೂ ಕೂಡ ಸುದ್ದಿಯಾಗುತ್ತಾರೆ. ಅದಲ್ಲದೇ ಸಿಂಪಲ್ ಆಗಿದ್ದರೂ ಕೂಡ ಸುದ್ದಿಯಾಗುತ್ತಾರೆ. ಗ್ರ್ಯಾಂಡ್ ಲುಕ್ ನಿಂದ ಕಂಗೊಳಿಸಿದರೂ ಕೂಡ ಸುದ್ದಿಯಾಗುವುದಿದೆ.

ನಟಿ ಅಮಲಾ ಅಕ್ಕಿನೇನಿ (Amala Akkineni) ತನ್ನ ಸರಳವಾದ ಉಡುಗೆ ತೊಡುಗೆಗಳಿಂದ ಗಮನ ಸೆಳೆಯುತ್ತಾರೆ. ಹೆಚ್ಚಾಗಿ ಆಭರಣವನ್ನು ಧರಿಸದೆ ಇರಲು ಕೂಡ ಕಾರಣವು ಇದೆಯಂತೆ. ಈ ಬಗ್ಗೆ ಸ್ವತಃ ಅವರೇ ಬಾಯಿ ಬಿಟ್ಟಿದ್ದಾರೆ. ನಟಿ ಅಮಲಾರವರು ಕೋಲ್ಕತ್ತಾದಲ್ಲಿ ಅಮಲಾ ಹುಟ್ಟಿದರಾದರೂ ಮದ್ರಾಸ್ ನಲ್ಲಿ ಬೆಳೆದರು. ಸೂಪರ್‌ ಸ್ಟಾರ್‌ ನಟ ನಾಗಾರ್ಜುನ ಅಕ್ಕಿನೇನಿ (Nagarjuna Akkineni) ಪತ್ನಿಯಾಗಿರುವ ಅಮಲಾ ಅಕ್ಕಿನೇನಿಯವರು ಕಿರುತೆರೆ ಹಾಗೂ ವೆಬ್ ಸೀರಿಸ್‌ಗಳಲ್ಲಿ ನಟಿಸಿ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ.

ಇವರ ವೃತ್ತಿ ಜೀವನದ ಬಗ್ಗೆ ಹೇಳುವುದದಾರೆ ತಮಿಳು (Tamil), ತೆಲುಗು (Telug), ಮಲಯಾಳಂ (Malayam), ಕನ್ನಡ (Kannada) ಮತ್ತು ಹಿಂದಿ (Hindi) ಭಾಷೆಯ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 1986 ರಲ್ಲಿ ‘ಮೈಥಿಲ್ ಎನ್ನೈ ಕಥಲಿ’ (Maithil ennai kathali) ಎಂಬ ತಮಿಳು ಚಿತ್ರದಿಂದ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. 1987 ರಲ್ಲಿ ಪುಷ್ಪಕ ವಿಮಾನ (Pushpaka Vimana) ಸಿನಿಮಾದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು.

ಆ ಬಳಿಕ ರವಿಚಂದ್ರನ್‌ ನಟನೆಯ ಬಣ್ಣದ ಗೆಜ್ಜೆ (Bannada Gejje) ಯಲ್ಲಿ ನಟಿಸಿ ಸೈ ಎನಿಸಿಕೊಂಡರು. ಆ ಬಳಿಕ ತೆಲುಗಿನ ಖ್ಯಾತ ನಟ ನಾಗಾರ್ಜುನ ಅಕ್ಕಿನೇನಿಯವರ ಕೈಹಿಡಿದರು. ಅಕ್ಕಿನೇನಿ ಕುಟುಂಬದ ಸೊಸೆಯಾಗಿರುವ ನಟಿ ಅಮಲಾರವರಿಗೆ ಯಾವುದೇ ಕೊರತೆಯಿಲ್ಲ.ಆದರೆ ಸರಳ ಜೀವನದಿಂದ ಗಮನ ಸೆಳೆಯುತ್ತಿರುವ ನಟಿ ಅಮಲಾ ತಾವು ಚಿನ್ನಾಭರಣ ಏಕೆ ಧರಿಸಲ್ಲ ಎನ್ನುವ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ನಟಿ ಅಮಲಾರವರಿಗೆ ಆಭರಣಗಳ ಮೇಲೆ ವ್ಯಾಮೋಹವಿಲ್ಲವಂತೆ. ಅದಲ್ಲದೇ ಚಿನ್ನವನ್ನು ಧರಿಸಿದರೆ ತ್ವಚೆಯ ಸಮಸ್ಯೆಗಳು ಬರುತ್ತವೆ. ಹೀಗಾಗಿ ಕೊರಳಲ್ಲಿ ಬಂಗಾರದ ಬದಲು ಕರಿಮಣಿ ತಾಳಿಯನ್ನುನ್ನು ಮಾತ್ರ ಧರಿಸುತ್ತಾರೆ. ಹೀಗಾಗಿ ಒಡವೆಗಳನ್ನು ಧರಿಸುವುದು ತುಂಬಾ ಕಡಿಮೆಯೇ ಎನ್ನಬಹುದು.

Leave a Reply

Your email address will not be published. Required fields are marked *